Virat Kohli Dance: ಶತಕ ಬಾರಿಸಲು ರೆಡಿ ಡ್ಯಾನ್ಸ್‌ಗೂ  ರೆಡಿ  ವಿರಾಟ್‌ ಕೊಹ್ಲಿ

Virat Kohli Dance: ಸ್ಟಾರ್ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸಾಲು ಸಾಲಾಗಿ ಶತಕ ಬಾರಿಸಿ  ಭಾರತೀಯರ ಸಂತಸಕ್ಕೆ ಕಾರಣರಾಗುತ್ತಿದ್ದರು. ಶತಕ ಬಾರಿಸಿ ಮನ ಗೆಲ್ಲುತ್ತಿದ್ದ ವಿರಾಟ್‌ ಇದೀಗ  ಡ್ಯಾನ್ಸ್‌ ಮಾಡಿ ಸುದ್ದಿಯಲ್ಲಿದ್ದಾರೆ.  

Written by - Zee Kannada News Desk | Last Updated : Mar 21, 2023, 04:28 PM IST
  • ವಿರಾಟ್‌ ಕೊಹ್ಲಿ ನಾರ್ವೆ ಡ್ಯಾನ್ಸ್ ಕ್ರ್ಯೂ ಕ್ವಿಕ್ ಸ್ಟೈಲ್‌ಲ್ಲಿ ಡ್ಯಾನ್ಸ್‌
  • ಈ ವೀಡಿಯೊಗೆ ಎರಡು ಮಿಲಿಯನ್ ವೀಕ್ಷಣೆ ಹಾಗೂ 5.4 ಲಕ್ಷ ಲೈಕ್‌
  • ಕೊಹ್ಲಿ ಡ್ಯಾನ್ಸ್‌ ಗೆ ಅಭಿಮಾನಿಗಳು ಫುಲ್‌ ಫೀಧ
Virat Kohli Dance: ಶತಕ ಬಾರಿಸಲು ರೆಡಿ ಡ್ಯಾನ್ಸ್‌ಗೂ  ರೆಡಿ  ವಿರಾಟ್‌ ಕೊಹ್ಲಿ title=

Virat Kohli Dances With Norway: ಸ್ಟಾರ್ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮುಂಬೈನಲ್ಲಿ ನಾರ್ವೆ ಡ್ಯಾನ್ಸ್ ಕ್ರ್ಯೂ ಕ್ವಿಕ್ ಸ್ಟೈಲ್‌ನೊಂದಿಗೆ ವಿರಾಟ್ ಕೊಹ್ಲಿ ಹೆಜ್ಜೆ ಹಾಕಿದ್ದಾರೆ. ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ  ಸಮಾರಂಭ   ಮುಗಿದ  ನಂತರ ಇನ್ಸ್ಟಾಗ್ರಾಮ್ ರೀಲ್ಸ್‌ವೊಂದಕ್ಕೆ ಬ್ಯಾಟ್‌ ಹಿಡಿದು ಡ್ಯಾನ್ಸ್‌ ಮಾಡಿದ್ದಾರೆ. ಸಾಲು ಸಾಲಾಗಿ ಶತಕ ಬಾರಿಸಿ ವಿರಾಟ್ ಭಾರತೀಯರ ಸಂತಸಕ್ಕೆ ಕಾರಣರಾಗುತ್ತಿದ್ದರು.

ಶತಕ ಬಾರಿಸಿ ಮನ ಗೆಲ್ಲುತ್ತಿದ್ದ ವಿರಾಟ್‌ ಇದೀಗ  ಡ್ಯಾನ್ಸ್‌ ಮಾಡಿ ಸುದ್ದಿಯಲ್ಲಿದ್ದಾರೆ. ತಮ್ಮ ಟೀಂನೊಂದಿಗೆ   ಬ್ಯಾಟ್‌ ಹಿಡಿದು ಶತಕ ಬಾರಿಸಲು ರೆಡಿ ಖುಷಿಯನ್ನು ಸಂಭ್ರಮಿಸಲು ರೆಡಿ ಇದ್ದೇವೆ ಎಂದಂತಿದೆ.

ಇದನ್ನೂ ಓದಿ: WPL 2023: ಮುಂಬೈ ವಿರುದ್ಧ ಗೆದ್ದು ಬೀಗಿದ ದೆಹಲಿ ಕ್ಯಾಪಿಟಲ್ಸ್: ಪಾಯಿಂಟ್ ಲಿಸ್ಟ್’ನಲ್ಲಿ ಹೈ ಜಂಪ್

 
 
 
 

 
 
 
 
 
 
 
 
 
 
 

A post shared by Quick Style (@thequickstyle)

ತಮ್ಮ ಕ್ರಿಕೆಟ್ ಶೈಲಿಯಲ್ಲಿ ಬ್ಯಾಟ್‌ ಹಿಡಿದು ಸ್ಟೆಪ್‌ ಹಾಕಿ ಡ್ಯಾನ್ಸ್‌ ಲ್ಲೂ ಕ್ರಿಕೆಟ್ ಪ್ರೀತಿ ಮೆರೆದಿದ್ದಾರೆ.  ವಿರಾಟ್ ಕೊಹ್ಲಿ ಮತ್ತು ನಾರ್ವೇಜಿಯನ್ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ವೀಡಿಯೊ ಎರಡು ಮಿಲಿಯನ್ ವೀಕ್ಷಣೆಗಳನ್ನು ಮತ್ತು 5.4 ಲಕ್ಷ ಲೈಕ್‌ಗಳನ್ನು ಸಂಗ್ರಹಿಸಿದೆ. ಈ ವಿಡೀಯೊಗೆ ಅಭಿಮಾನಿಗಳು ಫುಲ್‌ ಫೀಧ ಆಗಿದ್ದಾರೆ.

ಇದನ್ನೂ ಓದಿ: IPL 2023 ರಲ್ಲಿ ರಿಷಬ್ ಪಂತ್ ಬದಲಿಗೆ ಆಡಲಿದ್ದಾರೆ ಈ ಡ್ಯಾಶಿಂಗ್ ಆಟಗಾರ!

ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಮೈದಾನದಲ್ಲಿ ನಾಟು ನಾಟು ಹಾಡಿಗೆ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿತ್ತು.  ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಯಿತು. ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಇಬ್ಬರೂ ಪಠಾಣ್ ಸಿನಿಮಾದ ಟೈಟಲ್ ಟ್ರ್ಯಾಕ್‌ಗೆ ಹೆಜ್ಜೆ ಹಾಕಿದ್ದು ಗೊತ್ತೇ ಇದೆ. ಆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿತ್ತು.ಇದೀಗ ಕೊಹ್ಲಿ ಈ ಎರಡು ಡ್ಯಾನ್ಸ್‌ ಗಳು ಸಖತ್‌ ಟ್ರೇಂಡಿಂಗ್‌ನಲ್ಲಿವೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

 

 

Trending News