Rishabh Pant Injury: ಕಾರು ಅಪಘಾತದ ನಂತರ ರಿಷಬ್ ಪಂತ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ವಿರುದ್ಧದ ಮುಂಬರುವ 4 ಟೆಸ್ಟ್ ಪಂದ್ಯಗಳಲ್ಲಿ ಅವರು ಆಡುವುದು ಕಷ್ಟ. ಇದು ಟೀಂ ಇಂಡಿಯಾಗೆ ಸಂಕಷ್ಟವಾದರೂ ಸಹ ಮೂವರು ಇತರ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲಿದೆ.


COMMERCIAL BREAK
SCROLL TO CONTINUE READING

ರಿಷಬ್ ಪಂತ್ ದೀರ್ಘಕಾಲದವರೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಇನ್ನು ಈ ಸಂದರ್ಭದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಗೆ 2 ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ಆಯ್ಕೆ ಮಾಡುವುದು ಹೊಸ ಆಯ್ಕೆ ಸಮಿತಿಗೆ ದೊಡ್ಡ ಸವಾಲಾಗಿದೆ.


ಇದನ್ನೂ ಓದಿ: Team India : ರಿಷಬ್ ಪಂತ್ ಬದಲಿಗೆ ಈ ಆಟಗಾರನೆ ಟೆಸ್ಟ್ ಪಂದ್ಯದ ವಿಕೆಟ್ ಕೀಪರ್!


ಭಾರತೀಯ ಟೆಸ್ಟ್ ವಿಕೆಟ್ ಕೀಪರ್ ಸ್ಥಾನದ ರೇಸ್ ಇದ್ದಕ್ಕಿದ್ದಂತೆ ಪ್ರಾರಂಭವಾಗಲಿದ್ದು, ಮೂವರು ಆಟಗಾರರಲ್ಲಿ ಯಾರು -- ಕೆಎಸ್ ಭರತ್, ಎರಡನೇ ವಿಕೆಟ್ ಕೀಪರ್ ಉಪೇಂದ್ರ ಯಾದವ್ ಮತ್ತು ವೈಟ್ ಬಾಲ್ ಸ್ಪೆಷಲಿಸ್ಟ್ ಇಶಾನ್ ಕಿಶನ್ -- ಯಾರು ಟೆಸ್ಟ್‌ನಲ್ಲಿ ಆಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ನಾಗ್ಪುರದಲ್ಲಿ ಫೆಬ್ರವರಿ 9 ರಿಂದ ಪ್ರಾರಂಭವಾಗುವ ಸರಣಿಯನ್ನು ಆಯ್ಕೆ ಮಾಡಲಾಗಿದೆ.


ಶುಕ್ರವಾರ ಬೆಳಗ್ಗೆ ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದಾಗ ರಿಷಬ್ ಪಂತ್ ಅವರ ಮರ್ಸಿಡಿಸ್ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಪಂತ್ ಸದ್ಯ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಕ್ಸ್ ರೇ ಮತ್ತು CT ಸ್ಕ್ಯಾನ್‌ಗಳ ವರದಿಯಲ್ಲಿ ಮೂಳೆ ಮುರಿತದ ಭಯ ಇಲ್ಲ ಎಂಬುದನ್ನು ಹೇಳಿದೆ.  ಆದರೆ ಮೊಣಕಾಲು ಮತ್ತು ಪಾದಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಖಂಡಿತವಾಗಿಯೂ ಗುಣಮುಖರಾಗಲು ಕೊಂಚ ಸಮಯ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.


ಬಿಸಿಸಿಐ ಮೂಲವೊಂದು ಗೌಪ್ಯತೆಯ ಸ್ಥಿತಿಯ ಕುರಿತು ಪಿಟಿಐಗೆ ಮಾಹಿತಿಯನ್ನು ನೀಡಿದೆ. “ದೇಹದಲ್ಲಿ ಊತವಿದೆ. ಈ ಕಾರಣದಿಂದಾಗಿ ಪಾದದ ಮತ್ತು ಮೊಣಕಾಲಿನ MRI ಸ್ಕ್ಯಾನ್ ಅನ್ನು ಇನ್ನೂ ಮಾಡಬೇಕಾಗಿದೆ. ಅವರು ಪ್ರಯಾಣಿಸಲು ಯೋಗ್ಯವಾದ ನಂತರ, ಮುಂಬೈಗೆ ಬರುತ್ತಾರೆ. ಅಲ್ಲಿ ಅವರು ಮಂಡಳಿಯ ಡಾ.ದಿನ್ಶಾ ಪರ್ದಿವಾಲಾ ಅವರ ಮೇಲ್ವಿಚಾರಣೆಯಲ್ಲಿರುತ್ತಾರೆ” ಎಂದು ಮಾಹಿತಿ ಬಂದಿದೆ.


ಇದನ್ನೂ ಓದಿ: Pandya brothers: ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಪಾಂಡ್ಯ ಬ್ರದರ್ಸ್!


ಹೊಸ ಆಯ್ಕೆ ಸಮಿತಿಯು 3 ಆಯ್ಕೆಗಳನ್ನು ಹೊಂದಿರುತ್ತದೆ. ಭಾರತ-ಎ ತಂಡದ 2 ವಿಕೆಟ್‌ಕೀಪರ್‌ಗಳಾದ ಕೆಎಸ್ ಭರತ್ ಮತ್ತು ಉಪೇಂದ್ರ ಅಥವಾ ಸ್ಫೋಟಕ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಕೆ.ಎಸ್.ಭರತ್ ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ಅವರು ಈ ಹಿಂದೆ ಹಲವು ಪ್ರವಾಸಗಳಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಅವರ ವಿಕೆಟ್ ಕೀಪಿಂಗ್ ಕೌಶಲ್ಯವೂ ಅದ್ಭುತವಾಗಿದೆ. ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.