Rishabh Pant Health Bulletine: ರಿಷಬ್ ಪಂತ್ ಚಿಕಿತ್ಸೆ ಜವಾಬ್ದಾರಿ ಹೊತ್ತ ಬಿಸಿಸಿಐ-ದೆಹಲಿಗೆ ಶಿಫ್ಟ್ ಸಾಧ್ಯತೆ: ಹೆಲ್ತ್ ಬುಲೆಟಿನ್ ಹೀಗಿದೆ

Rishabh Pant Health Bulletine: ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಮಾತನಾಡಿ, ಡಿಡಿಸಿಎ ತಂಡ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪಂತ್ ಅವರ ಆರೋಗ್ಯದ ಮೇಲೆ ನಿಗಾ ಇಡಲಿದೆ. ಅಗತ್ಯವಿದ್ದರೆ ನಾವು ಅವರನ್ನು ದೆಹಲಿಗೆ ಸ್ಥಳಾಂತರಿಸುತ್ತೇವೆ. ಪ್ಲಾಸ್ಟಿಕ್ ಸರ್ಜರಿಗಾಗಿ ದೆಹಲಿಗೆ ಕರೆದೊಯ್ಯುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Dec 31, 2022, 10:25 AM IST
    • ರಿಷಬ್ ಪಂತ್ ಅವರು ಡಿಸೆಂಬರ್ 30 ರ ಬೆಳಿಗ್ಗೆ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ
    • ಉತ್ತಮ ರೀತಿಯಲ್ಲಿ ಗುಣಪಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಸಿಐ ವಹಿಸಿಕೊಂಡಿದೆ
    • ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಪಂತ್ ಅವರ ಚಿಕಿತ್ಸೆಯ ಬಗ್ಗೆ ಅಪ್ಡೇಟ್ ನ್ನು ನೀಡಿದ್ದಾರೆ
Rishabh Pant Health Bulletine: ರಿಷಬ್ ಪಂತ್ ಚಿಕಿತ್ಸೆ ಜವಾಬ್ದಾರಿ ಹೊತ್ತ ಬಿಸಿಸಿಐ-ದೆಹಲಿಗೆ ಶಿಫ್ಟ್ ಸಾಧ್ಯತೆ: ಹೆಲ್ತ್ ಬುಲೆಟಿನ್ ಹೀಗಿದೆ title=
Rishabh Pant

Rishabh Pant Health Bulletine: ಭಾರತದ ಸೂಪರ್ ಸ್ಟಾರ್ ಬ್ಯಾಟ್ಸ್ ಮನ್ ಕಂ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಡಿಸೆಂಬರ್ 30 ರ ಬೆಳಿಗ್ಗೆ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸದ್ಯ ಅವರು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಪಂತ್ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಅವರನ್ನು ಉತ್ತಮ ರೀತಿಯಲ್ಲಿ ಗುಣಪಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಸಿಐ ವಹಿಸಿಕೊಂಡಿದೆ. ಜೊತೆಗೆ ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಪಂತ್ ಅವರ ಚಿಕಿತ್ಸೆಯ ಬಗ್ಗೆ ಅಪ್ಡೇಟ್ ನ್ನು ನೀಡಿದ್ದಾರೆ.

ಇದನ್ನೂ ಓದಿ: Rishabh Pant Accident Video : ಭಯಾನಕವಾಗಿದೆ ರಿಷಬ್‌ ಪಂತ್‌ ಕಾರ್‌ ಆಕ್ಸಿಡೆಂಟ್‌ CCTV ವಿಡಿಯೋ..!

ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಮಾತನಾಡಿ, ಡಿಡಿಸಿಎ ತಂಡ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪಂತ್ ಅವರ ಆರೋಗ್ಯದ ಮೇಲೆ ನಿಗಾ ಇಡಲಿದೆ. ಅಗತ್ಯವಿದ್ದರೆ ನಾವು ಅವರನ್ನು ದೆಹಲಿಗೆ ಸ್ಥಳಾಂತರಿಸುತ್ತೇವೆ. ಪ್ಲಾಸ್ಟಿಕ್ ಸರ್ಜರಿಗಾಗಿ ದೆಹಲಿಗೆ ಕರೆದೊಯ್ಯುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಕಾರು ಅಪಘಾತದ ನಂತರ ರಿಷಬ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದಿ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳಾಗಿದೆ. ಜೊತೆಗೆ ಮೊಣಕಾಲಿಗೂ ಪೆಟ್ಟಾಗಿದೆ. ಅವರ ಹೆಬ್ಬೆರಳು, ಹಿಮ್ಮಡಿ, ಮಣಿಕಟ್ಟು ಮತ್ತು ಬೆನ್ನಿನ ಮೇಲೆ ಗಾಯಗಳಾಗಿವೆ. ಅದೃಷ್ಟವಶಾತ್ ಪಂತ್ ದೇಹದಲ್ಲಿ ಯಾವುದೇ ಮೂಳೆಗಳು ಮುರಿದಿಲ್ಲ. ರಿಷಬ್ ಪಂತ್ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಅದು ಎಷ್ಟು ಗಂಭೀರವಾಗಿದೆ ಎಂಬುದು ಎಂಆರ್‌ಐ ಪರೀಕ್ಷೆಯ ಬಳಿಕ ತಿಳಿದುಬರಲಿದೆ.

ಇದನ್ನೂ ಓದಿ: Rishabh Pant Accident : ಬಸ್ ಚಾಲಕ - ಕಂಡಕ್ಟರ್ ರಿಷಬ್ ಪಂತ್ ಪ್ರಾಣ ಉಳಿಸಿದ್ದು ಹೀಗೆ..!

ರಿಷಬ್ ಪಂತ್ ಟೀಂ ಇಂಡಿಯಾಗೆ ಮರಳಲು ಕನಿಷ್ಠ 6 ತಿಂಗಳು ಬೇಕಾಗಬಹುದು. ಸದ್ಯ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಪಂತ್ ದುಬೈನಿಂದ ಹಿಂತಿರುಗಿ ಬಂದಿದ್ದು, ತನ್ನ ತಾಯಿಯನ್ನು ಅಚ್ಚರಿಗೊಳಿಸಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಅವರು ದೆಹಲಿಯಿಂದ ರೂರ್ಕಿಗೆ ಕಾರಿನಲ್ಲಿ ಹೋಗುತ್ತಿದ್ದರು. ಆದರೆ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News