ನವದೆಹಲಿ: ಭಾನುವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ವಿಶ್ವಕಪ್ 2019 ರ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಗಲಿವೆ. ಈ ಹಿನ್ನಲೆಯಲ್ಲಿ ಪಾಕ್ ನ ಮಾಜಿ ಆಟಗಾರ ವಾಸಿಂ ಅಕ್ರಂ ಎರಡು ದೇಶಗಳ ಅಭಿಮಾನಿಗಳು ಶಾಂತಿಯಿಂದ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವಕಪ್ ನಲ್ಲಿ ಒಂದು ಬಿಲಿಯನ್ ಗೂ ಅಧಿಕ ಪ್ರೇಕ್ಷಕರನ್ನು ಹೊಂದಿರುವ  ಭಾರತ-ಪಾಕ್ ಪಂದ್ಯ ಕ್ರಿಕೆಟ್ ನಲ್ಲಿ ಅತಿ ದೊಡ್ಡ ಸಂಗತಿಯಾಗಿದೆ.ಆದ್ದರಿಂದ ಇದನ್ನು ಆನಂದಿಸಲು ಶಾಂತವಾಗಿರಬೇಕೆಂದು ವಾಸಿಂ ಅಕ್ರಂ ಕೇಳಿಕೊಂಡಿದ್ದಾರೆ. "ಒಂದು ತಂಡ ಗೆಲ್ಲುತ್ತದೆ, ಒಂದು ತಂಡ ಸೋಲುತ್ತದೆ, ಆದ್ದರಿಂದ ಮನೋಹರವಾಗಿರಿ ಮತ್ತು ಇದನ್ನು ಯುದ್ಧವೆಂದು ಪರಿಗಣಿಸಬೇಡಿ. ಈ ಪಂದ್ಯವನ್ನು ಯುದ್ಧ ಎಂದು ಬಿಂಬಿಸುವವರು ನಿಜವಾದ ಕ್ರಿಕೆಟ್ ಅಭಿಮಾನಿಗಳಲ್ಲ" ಎಂದು ಅವರು ಹೇಳಿದರು.


1992 ರಿಂದ ಒಟ್ಟು ಆರು ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವು  ಭಾರತವನ್ನು ಸೋಲಿಸಿಲ್ಲ, ಆದರೆ ಭಾನುವಾರದ ಪಂದ್ಯದಲ್ಲಿ ಇದು ಬದಲಾಗಬಹುದು ಎಂದು ವಾಸಿಮ್ ಭಾವಿಸಿದ್ದಾರೆ. ಭಾರತವನ್ನುಬಲಿಷ್ಠ ತಂಡ ಎಂದು ಒಪ್ಪಿಕೊಂಡಿರುವಹೊಂದಿದೆ ಎಂದು ವಾಸಿಮ್  ಅಕ್ರಂ , ಆದರೆ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮಾಡಿದಂತೆ ಪಾಕಿಸ್ತಾನವು ಏಕದಿನ ಪಂದ್ಯದಲ್ಲಿ ತಮ್ಮ ಪ್ರತಿಸ್ಪರ್ಧಿಗಳನ್ನು ಆಘಾತಗೊಳಿಸಬಹುದು ಎಂದು ಅವರು ಹೇಳಿದ್ದಾರೆ