ನವದೆಹಲಿ: ಭಾರತದ ಓಪನ್ ಸೂಪರ್ 500 ವಿಶ್ವ ಪ್ರವಾಸ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಪರುಪಳ್ಳಿ ಕಶ್ಯಪ್, ಸಮೀರ್ ವರ್ಮಾ ರವರು ಫ್ರೀ ಕ್ವಾರ್ಟರ್ ನಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್  ಫೈನಲ್ ಗೆ ದಾಪುಗಾಲು ಇಟ್ಟಿದ್ದಾರೆ. ಅದೇ ರೀತಿಯಾಗಿ ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್ಸರ್ರಾಜ್ ರಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ  ಕ್ವಾರ್ಟರ್  ಫೈನಲ್ ಗೆ ತಲುಪಿದ್ದಾರೆ.


COMMERCIAL BREAK
SCROLL TO CONTINUE READING

ತನ್ನ ಸರಣಿ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಕಶ್ಯಪ್ ಆರಂಭಿಕ ಸುತ್ತನ್ನು ದಾಟಲು ಪ್ರಯಾಸಪಟ್ಟಿದ್ದು, ಅಂತಿಮವಾಗಿ ಶ್ರೇಯಾನ್ಶ್ ಜೈಸ್ವಾಲ್ ಅವರನ್ನು 21-19, 19-21, 21-12 ಸೆಟ್ಗಳಿಂದ ಸೋಲಿಸಿ ಕ್ವಾರ್ಟರ್ಫೈನಲ್ಸ್ ಪ್ರವೇಶಿಸಿದ್ದಾರೆ.


ಭುಜದ ಗಾಯದಿಂದ ಚೇತರಿಸಿಕೊಂಡ ನಂತರ ಮತ್ತೆ ಫಾರ್ಮ್ ಗೆ ಬಂದಿರುವ  ಸಮೀರ್ ಮಾಜಿ  ವಿಶ್ವ ನಂ. 3 ಮತ್ತು 2014 ರ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಟಾಮಿ ಸುಗಿರ್ಟೊ ಅವರನ್ನು 21-18, 19-21, 21-17 ಸೆಟ್ ಗಳಲ್ಲಿ ಅವರನ್ನು ಸೋಲಿಸಲು ಒಂದು ಗಂಟೆ ಮತ್ತು 20 ನಿಮಿಷ ತೆಗೆದುಕೊಂಡರು. 


 ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ತೃತೀಯ ಶ್ರೇಯಾಂಕಿತ ಮಲೇಷ್ಯಾದ ಟಾನ್ ಕಿಯಾನ್ ಮೆಂಂಗ್ ಮತ್ತು ಲೈ ಪೇ ಜಿಂಗ್ ಅವರ ವಿರುದ್ಧ  21-16, 15-21, 23-21 ಅಂತರದಲ್ಲಿ ಗೆಲುವು ಸಾಧಿಸಿದರು.