IND vs AUS ಪಂದ್ಯದ ನಡುವೆ ಆಘಾತಕಾರಿ ಸುದ್ದಿ, ಈ ಆಟಗಾರ ಆಸ್ಪತ್ರೆಗೆ ದಾಖಲು.!
Javed Miandad Admitted To Hospital : ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಡುವೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅನುಭವಿ ಆಟಗಾರನ ಆರೋಗ್ಯ ಹದಗೆಟ್ಟಿರುವ ಸುದ್ದಿ ಮುನ್ನೆಲೆಗೆ ಬಂದಿದೆ.
Javed Miandad Admitted To Hospital : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನ ಭಾರತೀಯ ಆಟಗಾರರ ಅಮೋಘ ಪ್ರದರ್ಶನ ಕಂಡು ಬಂದಿತು. ಇದೆಲ್ಲದರ ನಡುವೆ ಕ್ರಿಕೆಟ್ ಲೋಕಕ್ಕೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ. ದಿಢೀರ್ ಆಗಿ ಹಿರಿಯ ಆಟಗಾರನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲು ಮಾಡಿರುವ ಸುದ್ದಿ ಮುನ್ನೆಲೆಗೆ ಬರುತ್ತಿದೆ. ಹೀಗಿರುವಾಗ ಸ್ವತಃ ಈ ನಿವೃತ್ತ ಆಟಗಾರನೇ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಹದಗೆಟ್ಟ ಈ ಅನುಭವಿ ಆಟಗಾರನ ಆರೋಗ್ಯ :
ಪಾಕಿಸ್ತಾನದ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಪಾಕಿಸ್ತಾನದ ಮಾಜಿ ನಾಯಕ ಮತ್ತು ಕೋಚ್ ಜಾವೇದ್ ಮಿಯಾಂದಾದ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ಸುದ್ದಿಯ ನಂತರ ಸ್ವತಃ ಜಾವೇದ್ ಮಿಯಾಂದಾದ್ ಅವರು ವೀಡಿಯೋ ಬಿಡುಗಡೆ ಮಾಡಿದ್ದು, ತಾವು ಆರೋಗ್ಯವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಬ್ಲಿಕ್ ನಲ್ಲಿಯೇ ಬಂದೂಕು ಹಿಡಿದ ಶೂಟ್ ಮಾಡಲು ಮುಂದಾದ Sanju Samson! ಮುಂದೆ..?
ವಿಡಿಯೋ ಶೇರ್ ಮಾಡುವ ಮೂಲಕ ಹೇಳಿದ್ದಾರೆ
ಆಸ್ಪತ್ರೆಯ ವಿಡಿಯೋವನ್ನು ಹಂಚಿಕೊಂಡ ಜಾವೇದ್ ಮಿಯಾಂದಾದ್, 'ನಾನು ಆಸ್ಪತ್ರೆಗೆ ದಾಖಲಾದ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ ಮತ್ತು ಜನರು ಆತಂಕಕ್ಕೊಳಗಾಗಿದ್ದಾರೆ ಎಂದು ನನಗೆ ಈಗಷ್ಟೇ ತಿಳಿದುಬಂದಿದೆ. ಚಿಂತೆ ಮಾಡಬೇಡಿ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ನನ್ನ ತಪಾಸಣೆಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಸ್ವಲ್ಪ ತಲೆ ನೋವು ಇದ್ದಿದ್ದರಿಂದ ತಪಾಸಣೆಗೆ ಬಂದೆ. ಎಲ್ಲವು ಚೆನ್ನಾಗಿದೆ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ಎಲ್ಲರಿಗೂ ಹೇಳಲು ಬಯಸುತ್ತೇನೆ. ಗಂಭೀರದ ವಿಷಯವೇನಿಲ್ಲ. ಈಗ ಅರ್ಧಗಂಟೆಯಲ್ಲಿ ಮನೆಗೆ ಹೋಗುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ : CSK Captain: ಧೋನಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಆಟಗಾರನೇ ಕ್ಯಾಪ್ಟನ್.!
ಜಾವೇದ್ ಮಿಯಾಂದಾದ್ 1975 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದರು. ಅವರು ಪಾಕಿಸ್ತಾನಕ್ಕಾಗಿ ಒಟ್ಟು 124 ಟೆಸ್ಟ್ ಪಂದ್ಯಗಳು ಮತ್ತು 233 ODI ಪಂದ್ಯಗಳನ್ನು ಆಡಿದ್ದಾರೆ. ಅವರು 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿಜಯಶಾಲಿ ತಂಡದ ಭಾಗವಾಗಿದ್ದರು. ಅವರು ಟೆಸ್ಟ್‌ನಲ್ಲಿ 52.57 ಸರಾಸರಿಯಲ್ಲಿ 8832 ರನ್‌ಗಳನ್ನು ಮತ್ತು ODIಗಳಲ್ಲಿ 41.47 ಸರಾಸರಿಯಲ್ಲಿ 7381 ರನ್‌ಗಳನ್ನು ಗಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.