ಪಬ್ಲಿಕ್ ನಲ್ಲಿಯೇ ಬಂದೂಕು ಹಿಡಿದ ಶೂಟ್ ಮಾಡಲು ಮುಂದಾದ Sanju Samson! ಮುಂದೆ..?

Sanju Samson Weapon in Hand: ಕೇರಳದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಕೈಯಲ್ಲಿ ಗನ್ ಹಿಡಿದು ನಿಂತಿದ್ದಾರೆ. ಮುಂದೆ ಟಾರ್ಗೆಟ್ ಬಾರ್ ಇದ್ದು, ಈ ಕಡೆ ಸಂಜು ಗನ್ ಇಟ್ಟುಕೊಂಡಿದ್ದಾರೆ. ತಲೆಮೇಲೆ ಕ್ಯಾಪ್ ಹಾಕಿಕೊಂಡು ಹೆಡ್ ಫೋನ್ ಕೂಡ ಇಟ್ಟುಕೊಂಡಿದ್ದಾರೆ.

Written by - Bhavishya Shetty | Last Updated : Feb 18, 2023, 01:58 AM IST
    • ಸಂಜು ಸ್ಯಾಮ್ಸನ್ ಅವರ ಹೊಸ ಅವತಾರವೊಂದು ಮುನ್ನೆಲೆಗೆ ಬಂದಿದೆ.
    • ಬ್ಯಾಟ್ ಬಿಟ್ಟು ಬಂದೂಕು ಕೈಗೆತ್ತಿಕೊಂಡಿದ್ದಾರೆ.
    • ಗುರಿಯಿಡುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ
ಪಬ್ಲಿಕ್ ನಲ್ಲಿಯೇ ಬಂದೂಕು ಹಿಡಿದ ಶೂಟ್ ಮಾಡಲು ಮುಂದಾದ Sanju Samson! ಮುಂದೆ..? title=
Sanju Samson

Sanju Samson Weapon in Hand: ಭಾರತ ಕ್ರಿಕೆಟ್ ತಂಡದಿಂದ ನಿರ್ಗಮಿಸುತ್ತಿರುವ 28 ವರ್ಷದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರ ಹೊಸ ಅವತಾರವೊಂದು ಮುನ್ನೆಲೆಗೆ ಬಂದಿದೆ. ಬ್ಯಾಟ್ ಬಿಟ್ಟು ಬಂದೂಕು ಕೈಗೆತ್ತಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಗುರಿಯಿಡುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  MS Dhoni ಅಲ್ಲ, ಈ ಆಟಗಾರ IPLನ ಅತ್ಯುತ್ತಮ ನಾಯಕ ಎಂದ ಸೆಹ್ವಾಗ್: ರೊಚ್ಚಿಗೆದ್ದ ಭಜ್ಜಿ ಹೇಳಿದ್ದು ಹೀಗೆ!

ಕೇರಳದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಕೈಯಲ್ಲಿ ಗನ್ ಹಿಡಿದು ನಿಂತಿದ್ದಾರೆ. ಮುಂದೆ ಟಾರ್ಗೆಟ್ ಬಾರ್ ಇದ್ದು, ಈ ಕಡೆ ಸಂಜು ಗನ್ ಇಟ್ಟುಕೊಂಡಿದ್ದಾರೆ. ತಲೆಮೇಲೆ ಕ್ಯಾಪ್ ಹಾಕಿಕೊಂಡು ಹೆಡ್ ಫೋನ್ ಕೂಡ ಇಟ್ಟುಕೊಂಡಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಇನ್ನೂ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ. ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಭಾಗವಾಗಿಲ್ಲ. ಸ್ಯಾಮ್ಸನ್ ಈ ವರ್ಷದ ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾಗವಹಿಸಿದ್ದಾಗ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. 2015 ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: IPL Schedule 2023: ಐಪಿಎಲ್ 2023 ವೇಳಾಪಟ್ಟಿ ಬಿಡುಗಡೆ: ಈ ದಿನಾಂಕದಂದು ಪ್ರಾರಂಭವಾಗಲಿದೆ ಅತೀದೊಡ್ಡ ಕ್ರಿಕೆಟ್ ಲೀಗ್

8 ವರ್ಷಗಳಲ್ಲಿ ಕೇವಲ 28 ಪಂದ್ಯ:

28ರ ಹರೆಯದ ಸಂಜು ಸ್ಯಾಮ್ಸನ್ ಗೆ ಇದುವರೆಗೆ ಸಿಕ್ಕ ಅವಕಾಶಗಳು ಕಡಿಮೆ. 2015ರಲ್ಲಿ ಟಿ20 ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್ ಇದುವರೆಗೆ ಎರಡು ಫಾರ್ಮ್ಯಾಟ್‌ಗಳಲ್ಲಿ ಕೇವಲ 28 ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 11 ಪಂದ್ಯಗಳನ್ನು ಮತ್ತು ಟಿ20 ಯಲ್ಲಿ ಭಾರತಕ್ಕಾಗಿ 17 ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರು ODI ಸ್ವರೂಪದಲ್ಲಿ 2 ಮತ್ತು T20 ಅಂತಾರಾಷ್ಟ್ರೀಯದಲ್ಲಿ ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸ್ಯಾಮ್ಸನ್ 58 ಪಂದ್ಯಗಳಲ್ಲಿ 3446 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News