Shadab Khan, IND vs PAK : ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್-2023 ಆಡಲು ಭಾರತಕ್ಕೆ ಬಂದಿದೆ. ಅಕ್ಟೋಬರ್ 5 ರಿಂದ ಭಾರತ ಆತಿಥ್ಯದಲ್ಲಿ ವಿಶ್ವಕಪ್ ಆರಂಭವಾಗಲಿದೆ. ಇದೇ ವೇಳೆ ಪಾಕಿಸ್ತಾನದ ಸ್ಪಿನ್ನರ್ ಶಾದಾಬ್ ಖಾನ್ ಭಾರತದ ಆತಿಥ್ಯಕ್ಕೆ ಅಭಿಮಾನಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನದ ಲೆಗ್ ಸ್ಪಿನ್ನರ್ ಶಾದಾಬ್ ಖಾನ್‌ಗೆ, ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರಂತಹ ಧೀಮಂತ ಆಟಗಾರರೊಂದಿಗೆ ಆಡುವುದು ಸಂತಸದ ಸಂಗತಿಯಾಗಿದೆ. ಆದರೆ ಕ್ರೀಡೆಯ ಹೊರತಾಗಿ, ಅವರು ಬಾಲಿವುಡ್ ಚಲನಚಿತ್ರಗಳು ಮತ್ತು ಭಾರತದ ರುಚಿಕರವಾದ ಆಹಾರವನ್ನು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಶಾದಾಬ್ ಖಾನ್‌ ಅವರ ನೆಚ್ಚಿನ ಚಿತ್ರಗಳಲ್ಲಿ ಅಜಯ್ ದೇವಗನ್ ನಟನೆಯ 'ಸಿಂಗಂ' ಸೇರಿದೆ. ಪತ್ರಿಕಾಗೋಷ್ಠಿಯಲ್ಲಿ ಹೈದರಾಬಾದ್ ಪೊಲೀಸ್‌ನ ಉನ್ನತ ಅಧಿಕಾರಿಯೊಬ್ಬರನ್ನು ನೋಡಿದ ಅವರು, 'ಸಿಂಗಂ ಕೂಡ ಇಲ್ಲಿಗೆ ಬಂದಿದ್ದಾರೆ' ಎಂದು ಹೇಳಿದರು.


ಇದನ್ನೂ ಓದಿ : ವಿಶ್ವಕಪ್’ಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ 33ರ ಹರೆಯದ ಸ್ಟಾರ್ ವಿಕೆಟ್ ಕೀಪರ್! 


ಹೈದರಾಬಾದ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಭವ್ಯ ಸ್ವಾಗತ ದೊರೆಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾದಾಬ್, 'ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸ್ವಾಗತ ಅದ್ಭುತವಾಗಿತ್ತು ಮತ್ತು ಸಾಕಷ್ಟು ಜನರು ತಂಡದ ಹೋಟೆಲ್‌ಗೂ ಬಂದಿದ್ದರು. ಆತಿಥ್ಯ ತುಂಬಾ ಚೆನ್ನಾಗಿದೆ. ಆಹಾರವು ರುಚಿಕರವಾಗಿದೆ. (ನಗುತ್ತಾ) ಎಲ್ಲರೂ ನಾವು ದಪ್ಪವಾಗುತ್ತೇವೆ ಎಂದು ಚಿಂತಿತರಾಗಿದ್ದಾರೆ ಎಂದರು. 


ಅಕ್ಟೋಬರ್ 14 ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ - ಪಾಕಿಸ್ತಾನ ಪಂದ್ಯವನ್ನು ಶಾದಾಬ್ ಪ್ರಸ್ತಾಪಿಸಿದರು. ಕುಲದೀಪ್ ಯಾದವ್ ಭಾರತದ ಅತ್ಯಂತ ಅಪಾಯಕಾರಿ ಬೌಲರ್ ಎಂದು ಬಣ್ಣಿಸಿದರು. ರೋಹಿತ್ ಶರ್ಮಾ ಅವರನ್ನು ನಾನು ತುಂಬಾ ಗೌರವಿಸುತ್ತೇನೆ ಮತ್ತು ಬೌಲಿಂಗ್ ಮಾಡಲು ಅತ್ಯಂತ ಕಷ್ಟಕರವಾಗಿರುವ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದರು. ಒಮ್ಮೆ ಅವರು ಕ್ರೀಸ್‌ನಲ್ಲಿ ನೆಲೆಸಿದರೆ, ಅವರು ಸಾಕಷ್ಟು ಅಪಾಯಕಾರಿಯಾಗುತ್ತಾರೆ. ನಾನು ಲೆಗ್ ಸ್ಪಿನ್ನರ್ ಆಗಿರುವುದರಿಂದ, ಅವರ ಇತ್ತೀಚಿನ ಫಾರ್ಮ್ ಅನ್ನು ನೋಡಿದರೆ, ಕುಲದೀಪ್ ಯಾದವ್ ಅಪಾಯಕಾರಿ ಬೌಲರ್ ಎಂದು ಹೇಳಿದರು.


ಇದನ್ನೂ ಓದಿ : ವಿಶ್ವಕಪ್’ಗೂ ಮುನ್ನ ಪಾಕ್ ತಂಡ ಸೇರಿದ ಭಾರತದ ಸ್ಟಾರ್ ಬೌಲರ್! ಗಂಟೆಗೆ 130 ಕಿ,ಮೀ ವೇಗದ ಬೌಲಿಂಗ್ ಈತನದ್ದು…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.