Jos buttler ODI Retirement: ಭಾರತದಲ್ಲಿ ಅಕ್ಟೋಬರ್ 5ರಿಂದ ಐಸಿಸಿ ಏಕದಿನ ವಿಶ್ವಕಪ್ ಪ್ರಾರಂಭವಾಗಲಿದೆ. ಆದರೆ ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇನ್ನು ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್’ನಲ್ಲಿ ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ನಾಯಕತ್ವವಿದೆ.
ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ಸಿಹಿಸುದ್ದಿ… ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್-ಅನುಷ್ಕಾ!
ಇನ್ನೊಂದೆಡೆ ಇಂಗ್ಲೆಂಡ್ 50 ಓವರ್ ಮತ್ತು T20 ವಿಶ್ವಕಪ್ ಚಾಂಪಿಯನ್ ಆಗಿದ್ದು, ಈ ಪ್ರಶಸ್ತಿಯ ಹಿರಿಮೆಯನ್ನು ಕಾಪಾಡಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಅಂದಹಾಗೆ ಈ ಟೂರ್ನಿಯಲ್ಲಿ ವಿಕೆಟ್ ಕೀಪರ್ ಕಂ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ ಬಟ್ಲರ್.
ಇನ್ನು ‘ಮೇಲ್ ಸ್ಪೋರ್ಟ್’ ಸಂದರ್ಶನದಲ್ಲಿ ಮಾತನಾಡಿದ ಬಟ್ಲರ್ ತಮ್ಮ ನಿವೃತ್ತಿಯ ಯೋಜನೆಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. “ ಸದ್ಯ ಈ ವಿಶ್ವಕಪ್’ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ. ಈ ಪ್ರಯಾಣವು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ನೋಡಬೇಕಿದೆ” ಎಂದಿದ್ದಾರೆ.
“ನಾನು ಇನ್ನೂ ಸ್ವಲ್ಪ ಸಮಯದವರೆಗೆ ಇಂಗ್ಲೆಂಡ್’ಗಾಗಿ ಆಡುತ್ತೇನೆ. ಈಗಷ್ಟೇ 33 ವರ್ಷಕ್ಕೆ ಕಾಲಿಟ್ಟಿದ್ದೇನೆ. ಹೀಗಿರುವಾಗ ಯಾವುದೇ ವಿಷಯವನ್ನು ಲಘುವಾಗಿ ತೆಗೆದುಕೊಳ್ಳದಿರುವುದು ದೊಡ್ಡ ಗೌರವಕ್ಕೆ ಸಮಾನ. ಸದ್ಯ ವೃತ್ತಿಜೀವನದಲ್ಲಿಯೇ ಇದ್ದೇನೆ ”ಎಂದು ಬಟ್ಲರ್ ತಿಳಿಸಿದರು.
“ಏನೇ ಆದರೂ ಅದು ತನ್ನಿಂದ ತಾನಾಗಿಯೇ ಕೆಲಸ ಮಾಡುತ್ತದೆ. ಮುಂದೆ ಸಾಗಲು ಯಾವುದು ಸರಿ ಮತ್ತು ಯಾವುದು ಉತ್ತಮ ಎಂಬುದೇ ಮುಖ್ಯ” ಎಂದು ಅವರು ಹೇಳಿದರು.
"ನಾವು ವಿಶ್ವಕಪ್’ಗಾಗಿ ಎದುರು ನೋಡುತ್ತಿದ್ದೇವೆ. ನಮ್ಮಲ್ಲಿ ಪ್ರಬಲ ಆಟಗಾರರಿದ್ದಾರೆ. ವಿಶ್ವಕಪ್’ನಲ್ಲಿ ದೇಶವನ್ನು ಪ್ರತಿನಿಧಿಸುವ ಯಾವುದೇ ಸಂದರ್ಭವಾದರೂ ಅದು ತುಂಬಾ ರೋಮಾಂಚನಕಾರಿಯಾಗಿರುತ್ತದೆ. ಅದಕ್ಕೆ ಸಂಪೂರ್ಣ ಗಮನ ನೀಡುವ ಅಗತ್ಯವಿದೆ” ಎಂದು ಬಟ್ಲರ್ ಹೇಳಿದರು.
ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ವಿಶೇಷ ಸಲಹೆ ನೀಡಿದ ಯುವರಾಜ್ ಸಿಂಗ್! ಇದು ಗೆಲುವಿನ ಗುರುಮಂತ್ರ
ಇನ್ನು ಕಳೆದ ವರ್ಷ ಜುಲೈ 9ರಂದು ಆಲ್ ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದರು. ಆ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿವೃತ್ತಿ ವಾಪಸ್ ಪಡೆಯುವಂತೆ ಮನವಿ ಮಾಡಿತ್ತು. ಆದರೂ ತನ್ನ ನಿರ್ಧಾರದಿಂದ ಸರಿದಿರಲಿಲ್ಲ. ಅದಾದ ನಂತರ ಏಕದಿನ ವಿಶ್ವಕಪ್’ಗೆ ತಮ್ಮ ನಿವೃತ್ತಿಯನ್ನು ಹಿಂಪಡೆದು ಆಗಮಿಸಿರುವ ಜೋಸ್, ಮತ್ತೆ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೊಂದಡೆ ಈ ಬಾರಿಯ ವಿಶ್ವಕಪ್ ಮುಗಿಯುತ್ತಿದ್ದಂರೆ ಜೋಸ್ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್