India vs Pakistan: ಧೋನಿ ಸ್ಫೂರ್ತಿಯಿಂದ ಭಾರತ ತಂಡಕ್ಕೆ ಪಾಕ್ ಅಭಿಮಾನಿ ಬೆಂಬಲ
ಎಂ.ಎಸ್.ಧೋನಿ ತಮ್ಮ ನಡೆಯಿಂದಲೇ ಜಗತ್ತಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಈಗ ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ಕಾರಣಕ್ಕಾಗಿ ಪಾಕ್ ಅಭಿಮಾನಿಯೊಬ್ಬ ಭಾರತ ತಂಡಕ್ಕೆ ಬೆಂಬಲ ನೀಡುತ್ತಿದ್ದಾನೆ.
ನವದೆಹಲಿ: ಎಂ.ಎಸ್.ಧೋನಿ ತಮ್ಮ ನಡೆಯಿಂದಲೇ ಜಗತ್ತಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಈಗ ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ಕಾರಣಕ್ಕಾಗಿ ಪಾಕ್ ಅಭಿಮಾನಿಯೊಬ್ಬ ಭಾರತ ತಂಡಕ್ಕೆ ಬೆಂಬಲ ನೀಡುತ್ತಿದ್ದಾನೆ.
2011 ರಲ್ಲಿ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಧೋನಿ ಪಾಕಿಸ್ತಾನ ಮೂಲದ ಕ್ರಿಕೆಟ್ ಅಭಿಮಾನಿ ಮೊಹಮ್ಮದ್ ಬಶೀರ್ ಅಕಾ "ಚಾಚಾ ಚಿಕಾಗೊ" ಗೆ ಟಿಕೆಟ್ ನೀಡಿದ್ದರು.ಅಂದಿನಿಂದ ಅವರು ನಿರಂತರವಾಗಿ ಭಾರತ ತಂಡದ ಅಭಿಮಾನಿಯಾಗಿದ್ದಾರೆ. ಈಗ ಅವರು ಅಮೆರಿಕಾದ ಚಿಕ್ಯಾಗೋ ದಿಂದ ಮ್ಯಾಂಚೆಸ್ಟರ್ ಗೆ ಭಾರತ- ಪಾಕ್ ನಡುವಿನ ಪಂದ್ಯ ನೋಡಲು ಆಗಮಿಸುತ್ತಿದ್ದಾರೆ.
ಈಗ ಪಿಟಿಐಗೆ ಪ್ರತಿಕ್ರಿಯಿಸಿರುವ ಬಷೀರ್ " ನಾನು ನಿನ್ನೆಯೇ ಇಲ್ಲಿಗೆ ಆಗಮಿಸಿದ್ದೇನೆ. ಇಲ್ಲಿ ಆಗಲೇ ಜನರು 800 ರಿಂದ 900 ಫೌಂಡ್ ಹಣವನ್ನು ನೀಡಿ ಟಿಕೆಟ್ ಕರಿದಿಸಿದ್ದಾರೆ.ಆದರೆ ನಾನು ಟಿಕೆಟ್ ಪಂದ್ಯಕ್ಕಾಗಿ ಯೋಚಿಸುವ ಅಗತ್ಯವಿಲ್ಲ " ಎಂದು ಧೋನಿ ಅವರು ಟಿಕೆಟ್ ನೀಡುವುದನ್ನು ಖಚಿತ ಪಡಿಸಿರುವ ಹಿನ್ನಲೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ. ಅಮೇರಿಕಾದಲ್ಲಿ ರೆಸ್ಟೋರಂಟ್ ವೊಂದನ್ನು ನಡೆಸುತ್ತಿರುವ ಪಾಕ್ ಮೂಲದ ಈ ಅಭಿಮಾನಿ ಈಗ ಧೋನಿ ಕಾರಣದಿಂದಾಗಿ ಅವರು ಇಂಗ್ಲೆಂಡ್ ವರೆಗೆ ಆಗಮಿಸಿದ್ದಾರೆ ಎನ್ನಲಾಗಿದೆ.