“IPL ಬಂದಾಗಿನಿಂದ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ”: ಪಾಕ್ ಮಾಜಿ ವೇಗಿಯ ಈ ಮಾತು ನಿಜವೇ?
India exit from T20 World Cup: ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಭಾರತೀಯ ಕ್ರಿಕೆಟ್ ತಂಡವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ರೋಹಿತ್ ಶರ್ಮಾ ನೇತೃತ್ವದ ತಂಡವು ಗುಂಪು ಸುತ್ತಿನಲ್ಲಿ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು ಅಗ್ರಸ್ಥಾನದಲ್ಲಿರುವಾಗಲೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಆದರೆ, ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಮುಖಭಂಗ ಅನುಭವಿಸಿತ್ತು.
Shoaib Akhtar on IPL: ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವ ಕಾರಣ ಭಾರತ ತಂಡ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಅನೇಕ ಮಾಜಿ ಆಟಗಾರರು ಕೂಡ ತಂಡದ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇಷ್ಟೇ ಅಲ್ಲದೆ, ಕೆಲವರು ಐಪಿಎಲ್‌ನ ಪ್ರಶ್ನೆಯನ್ನೂ ಹಾಕಿದ್ದಾರೆ. ಈ ಪಟ್ಟಿಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಸೇರ್ಪಡೆಯಾಗಿದ್ದಾರೆ. ಅಖ್ತರ್ ವಿಭಿನ್ನ ವಿಶ್ಲೇಷಣೆ ಮಾಡಿದ್ದಾರೆ. ಐಪಿಎಲ್ ಬಂದಾಗಿನಿಂದ ಭಾರತ ತಂಡ ಯಾವುದೇ ಟಿ20 ವಿಶ್ವಕಪ್ ಗೆದ್ದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಈ ಬ್ಯಾಟ್ಸ್ಮನ್ ನ್ನು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಎಂದ ಬಟ್ಲರ್..!
ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಭಾರತೀಯ ಕ್ರಿಕೆಟ್ ತಂಡವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ರೋಹಿತ್ ಶರ್ಮಾ ನೇತೃತ್ವದ ತಂಡವು ಗುಂಪು ಸುತ್ತಿನಲ್ಲಿ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು ಅಗ್ರಸ್ಥಾನದಲ್ಲಿರುವಾಗಲೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಆದರೆ, ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಮುಖಭಂಗ ಅನುಭವಿಸಿತ್ತು. ಈ ಸೋಲಿನ ಬಳಿಕ ಐಪಿಎಲ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಐಪಿಎಲ್‌ನಲ್ಲಿ ಆಡುವುದು ಮತ್ತು ಜಾಗತಿಕ ಪಂದ್ಯಾವಳಿಯ ಭಾಗವಾಗುವುದು ತುಂಬಾ ವಿಭಿನ್ನವಾಗಿದೆ ಎಂದು ಕೆಲವರು ಹೇಳುತ್ತಾರೆ.
ಪಾಕ್ ಮಾಜಿ ವೇಗಿಯ ಮಾತು ಹೀಗಿದೆ:
ಪಾಕಿಸ್ತಾನದ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ನೀಡಲಾಗಿಲ್ಲ. ಆದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್‌ನ ಅನೇಕ ದಂತಕಥೆಗಳು ಈ ಪ್ರತಿಷ್ಠಿತ ಟಿ20 ಲೀಗ್‌ನಲ್ಲಿ ಆಡುತ್ತಾರೆ. ಈ ಕಾರಣದಿಂದಾಗಿ, ಪಾಕಿಸ್ತಾನದ ಕೆಲವು ಅನುಭವಿಗಳು ಈ ಲೀಗ್‌ನಲ್ಲಿ ಅನಗತ್ಯ ಪ್ರಶ್ನೆಗಳನ್ನು ಎತ್ತುತ್ತಾರೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ವಿಭಿನ್ನ ವಿಶ್ಲೇಷಣೆ ಮಾಡಿದ್ದಾರೆ. ಐಪಿಎಲ್ ವಿಶ್ವದ ಅತಿ ದೊಡ್ಡ ಲೀಗ್ ಆದರೆ ಅದು ಆರಂಭವಾದಾಗಿನಿಂದ ಭಾರತ ಯಾವುದೇ ಟಿ20 ವಿಶ್ವಕಪ್ ಗೆದ್ದಿಲ್ಲ ಎಂದು ಅವರು ಹೇಳಿದರು. 'ಐಪಿಎಲ್ ಎಂದರೇನು, ಅದು ಭಾರತ ಮತ್ತು ಉಳಿದ ತಂಡಗಳ ನಡುವೆ ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಐಪಿಎಲ್ 2008 ರಲ್ಲಿ ಪ್ರಾರಂಭವಾಯಿತು, ಭಾರತವು 2007 ರಲ್ಲಿ ಟಿ 20 ವಿಶ್ವಕಪ್ ಗೆದ್ದಿತು, ಅದಕ್ಕೂ ಒಂದು ವರ್ಷ ಮೊದಲು. ಟೀಮ್ ಇಂಡಿಯಾ 2011 ರ ವಿಶ್ವಕಪ್ ಗೆದ್ದಿತು ಆದರೆ ಅದು 50 ಓವರ್ಗಳ ಸ್ವರೂಪದಲ್ಲಿತ್ತು” ಎಂದರು.
ಇದನ್ನೂ ಓದಿ: "ತಂಡಕ್ಕೆ ನಂ 1 ಸ್ಥಾನ ರಾತ್ರೋರಾತ್ರಿ ಬರುವುದಿಲ್ಲ..."-ಸಚಿನ್ ತೆಂಡೂಲ್ಕರ್
ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್, 'ಐಪಿಎಲ್ ಯುವ ಆಟಗಾರರಿಗೆ ಉತ್ತಮ ಅನುಭವಕ್ಕಾಗಿ, ಅಷ್ಟೇ ಅಲ್ಲದೆ, ಹೆಸರು ಮಾಡಲು ಉತ್ತಮ ಅವಕಾಶವನ್ನು ನೀಡುತ್ತದೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವುದು ಬಹಳಷ್ಟು ವಿಚಾರಗಳನ್ನು ಬಹಿರಂಗಪಡಿಸುತ್ತದೆ. ವಿದೇಶಿ ಆಟಗಾರನಾಗಿ, ನೀವು ಬೇರೆ ದೇಶದಲ್ಲಿ ಆಡುವಾಗ, ನಿಮ್ಮ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಈ ವಿಷಯವು ಹೆಚ್ಚು ಮುಖ್ಯವಾಗಿರುತ್ತದೆ. ಇಲ್ಲಿ ನೀವು ಉತ್ತಮ ಆಟಗಾರರಾಗಿ ಹೊರಹೊಮ್ಮುತ್ತೀರಿ. ಅಷ್ಟೇ ಅಲ್ಲ ನೀವು ವಿದೇಶಿ ಲೀಗ್‌ನಲ್ಲಿ ಆಡುವಾಗ, ನಾನು ಇಲ್ಲಿ ಪ್ರದರ್ಶಿಸುವ ಪ್ರದರ್ಶನವು ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಭಾವಿಸುತ್ತೀರಿ. ಜೊತೆಗೆ ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಂಡಾಗ ಬಹಳಷ್ಟು ಹೊಸ ವಿಚಾರಗಳನ್ನು ಕಲಿಯುತ್ತೀರಿ” ಎಂದು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.