Babar Azam Statement: ಅಮೆರಿಕ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪರಿಸ್ಥಿತಿಯನ್ನು ನಿರ್ಣಯಿಸಲು ನಮ್ಮ ತಂಡ ವಿಫಲವಾಗಿದೆ ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೇಳಿದ್ದಾರೆ. ಕ್ರಿಕೆಟ್ ಕಲೆಯನ್ನು ಕಲಿಯುತ್ತಿರುವ ಅಮೇರಿಕಾ (ಯುಎಸ್ಎ) ವಿರುದ್ಧ ಸೂಪರ್ ಓವರ್’ನಲ್ಲಿ ಸೋಲು ಕಂಡ ಪಾಕಿಸ್ತಾನವನ್ನು ಕ್ರಿಕೆಟ್ ದಿಗ್ಗಜರು ಸೇರಿದಂತೆ ಅನೇಕರು ಹೀಯಾಳಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತಾ? ಈಕೆ ಕೋಚ್ ಒಬ್ಬರ ಮಗಳು... ದೇಶದ ಪ್ರಖ್ಯಾತ ಉದ್ಯಮಿಯೂ ಹೌದು


ಪಂದ್ಯದ ನಂತರ ಮಾತನಾಡಿದ ಬಾಬರ್ ಅಜಮ್, “ನಾವು ಬ್ಯಾಟಿಂಗ್ ಮಾಡುವಾಗ ಮೊದಲ ಆರು ಓವರ್‌’ಗಳ ಲಾಭವನ್ನು ಪಡೆಯಲಿಲ್ಲ. ಸತತ ವಿಕೆಟ್‌ ಪತನದಿಂದ ತಂಡ ಒತ್ತಡಕ್ಕೆ ಸಿಲುಕಿತು. ನಾವು ಉತ್ತಮ ಪಾಲುದಾರಿಕೆಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ನಮ್ಮ ಸ್ಪಿನ್ನರ್‌’ಗಳು ಕೂಡ ಮಧ್ಯಮ ಓವರ್‌’ಗಳಲ್ಲಿ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಅದರ ಪರಿಣಾಮಗಳನ್ನು ಅನುಭವಿಸಬೇಕಾಯಿತು. ಮೂರೂ ವಿಭಾಗಗಳಲ್ಲಿ ನಮಗಿಂತ ಉತ್ತಮವಾಗಿ ಆಡಿದ ಅಮೆರಿಕಕ್ಕೆ ಗೆಲುವಿನ ಸಂಪೂರ್ಣ ಕ್ರೆಡಿಟ್ ಸಲ್ಲುತ್ತದೆ. ಪಿಚ್‌’ನಲ್ಲಿ ಸ್ವಲ್ಪ ತೇವಾಂಶವಿದ್ದು ಅದನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.


ಇದನ್ನೂ ಓದಿ: ಸುದೀಪ್, ದರ್ಶನ್’ಗಿಂತಲೂ ಅಧಿಕ ಫ್ಯಾನ್ ಫಾಲೋವರ್ಸ್ ಹೊಂದಿರೋದು ಕನ್ನಡದ ಈ ಯೂಟ್ಯೂಬರ್! ಯಾರೆಂದು ತಿಳಿಯಿತೇ?


ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಾಯಕ ಮೊನಾಂಕ್ ಪಟೇಲ್ ತಂಡದ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಬಳಿಕ ಮಾತನಾಡಿದ ಅವರು, “ಟಾಸ್ ಗೆದ್ದ ನಂತರ, ನಾವು ಮೊದಲ ಆರು ಓವರ್‌’ಗಳನ್ನು ಬೌಲ್ ಮಾಡಿದ ರೀತಿ ಮತ್ತು ಅವರ ಬ್ಯಾಟಿಂಗ್’ನ್ನು ಶಾಂತವಾಗಿರಿಸಿಕೊಂಡ ರೀತಿ ನೋಡಿ, ನಾವು ಗೆಲ್ಲಬಹುದು ಎಂಬ ವಿಶ್ವಾಸ ಹೊಂದಿದ್ದೆವು. ಉತ್ತಮ ಪಾಲುದಾರಿಕೆಯ ಅಗತ್ಯವಿತ್ತು. ವಿಶ್ವಕಪ್ ಆಡುವ ಅವಕಾಶ ಮತ್ತೆ ಮತ್ತೆ ಬರುವುದಿಲ್ಲ. ಪ್ರತಿ ಚೆಂಡಿನಲ್ಲೂ ಚೆನ್ನಾಗಿ ಆಡಬೇಕೆಂದು ಬಯಸಿದ್ದೆವು” ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.