Sri Lanka vs Pakistan : ಏಷ್ಯಾ ಕಪ್ 2023 ರ ಸೂಪರ್-4 ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವು ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಈ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಈ ಪಂದ್ಯಕ್ಕೂ ಮೊದಲೇ ಇದೀಗ ದೊಡ್ಡ ಅಪ್ಡೇಟ್ ಹೊರಬಂದಿದೆ. ಇದರ ಪ್ರಕಾರ ಪಾಕಿಸ್ತಾನ ಪಂದ್ಯ ಆಡದೆಯೇ ಟೂರ್ನಿಯಿಂದ ಹೊರಗುಳಿಯುವ ಭೀತಿಯಲ್ಲಿದೆ.


COMMERCIAL BREAK
SCROLL TO CONTINUE READING

ಏಷ್ಯಾಕಪ್‌ನಿಂದ ಪಾಕಿಸ್ತಾನ ಪಂದ್ಯ ಆಡದೆ ಹೊರಗುಳಿಯುವುದೇ? :
ಏಷ್ಯಾ ಕಪ್ 2023 ರಲ್ಲಿ ಟೀಂ ಇಂಡಿಯಾ ಫೈನಲ್ ತಲುಪಿದ ನಂತರ, ಇದೀಗ ಎರಡನೇ ಫೈನಲಿಸ್ಟ್ ಆಗಲು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಹಣಾ ಹಣಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಪಾಕ್ ಪಾಲಿಗೆ ಮಳೆ  ವಿಲನ್ ಆಗಿ ಕಾಣಿಸಿಕೊಳ್ಳಬಹುದು. ಹವಾಮಾನ ವರದಿ ಪ್ರಕಾರ, ಕೊಲಂಬೊದಲ್ಲಿ ಇಂದು ಮಳೆಯ ಸಂಭವನೀಯತೆ 96% ವರೆಗೆ ಇದೆ. ಪಂದ್ಯದ ಸಮಯದಲ್ಲಿ (ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ) ಮಳೆಯ ಸಂಭವನೀಯತೆ 45% ರಿಂದ 50% ರಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಪಂದ್ಯ ರದ್ದಾದರೆ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ.


ಇದನ್ನೂ ಓದಿ : “ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಮಾಡಿದೆ” ಎಂದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ಶೋಯೆಬ್ ಅಕ್ತರ್


ಒಂದು ವೇಳೆ ಪಂದ್ಯ ರದ್ದಾದರೆ ಫೈನಲ್ ನಲ್ಲಿ ಸೆಣೆಸುವವರು ಯಾರು ? :   
ಸದ್ಯ ಸೂಪರ್-4 ಪಟ್ಟಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು 2-2 ಅಂಕಗಳನ್ನು ಹೊಂದಿವೆ. ಈ ಮೂಲಕ ಇಂದು ನಡೆಯಲಿರುವ ಪಂದ್ಯ ಸೆಮಿಫೈನಲ್ ನಂತಾಗಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ ಉಭಯ ತಂಡಗಳ ನಡುವೆ 1-1 ಅಂಕ ಹಂಚಿಕೆಯಾಗಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಎರಡೂ ತಂಡಗಳು ತಲಾ 3 ಅಂಕಗಳನ್ನು ಹೊಂದಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ರನ್ ರೇಟ್ ಆಧಾರದ ಮೇಲೆ ಯಾವ ತಂಡ ಫೈನಲ್ ತಲುಪಲಿದೆ ಎನ್ನುವುದು ನಿರ್ಧಾರವಾಗುತ್ತದೆ. ಶ್ರೀಲಂಕಾದ ನೆಟ್ ರನ್ ರೇಟ್ -0.200 ಆದರೆ ಪಾಕಿಸ್ತಾನದ ನೆಟ್ ರನ್ ರೇಟ್ -1.892.  ಈಗ ಮಳೆಯಿಂದಾಗಿ ಪಂದ್ಯ ರದ್ದಾದರೆ ಪಾಕಿಸ್ತಾನ ಟೂರ್ನಿಯಿಂದ  ಹೊರಬೀಳಬೇಕಾಗುತ್ತದೆ.


ಪಾಕಿಸ್ತಾನದ  ಪ್ಲೇಯಿಂಗ್ 11: 
ಮೊಹಮ್ಮದ್ ಹ್ಯಾರಿಸ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಜಮಾನ್ ಖಾನ್.


ಇದನ್ನೂ ಓದಿ : 15 ಬೌಂಡರಿ, 9 ಸಿಕ್ಸರ್, 182 ರನ್! ನಿವೃತ್ತಿ ಹಿಂಪಡೆದ ಸ್ಟಾರ್ ಕ್ರಿಕೆಟರ್ ಸಿಡಿಸಿಯೇಬಿಟ್ಟ ಭರ್ಜರಿ ಶತಕ! ಈತ ಕೊಹ್ಲಿಯ ನೆಚ್ಚಿನ ಕ್ರಿಕೆಟಿಗನೂ ಹೌದು


ಶ್ರೀಲಂಕಾದ ಸಂಭಾವ್ಯ ಪ್ಲೇಯಿಂಗ್ 11 : 
ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಶಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ್, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ದಸುನ್ ಶಂಕ (ನಾಯಕ), ದುನಿತ್ ವೆಲ್ಲೆಸ್, ಮಹೇಶ್ ದೀಕ್ಷಣ, ಕಸುನ್ ರಜಿತಾ, ಮತಿಶ ಪತಿರಣ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ