Pakistani cricketer Ahmed Shehzad: 'ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಯಶಸ್ಸಿನ ಬಗ್ಗೆ ಗೌತಮ್ ಗಂಭೀರ್ ಅಸೂಯೆ ಪಟ್ಟಿದ್ದಾರೆ' ಎಂದು ಪಾಕಿಸ್ತಾನಿ ಕ್ರಿಕೆಟಿಗರೊಬ್ಬರು ತಮ್ಮ ಹೇಳಿಕೆಯಿಂದ ಕ್ರಿಕೆಟ್ ಜಗತ್ತಿನಲ್ಲಿ ದಿಢೀರ್ ತಲ್ಲಣ ಮೂಡಿಸಿದ್ದಾರೆ. ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ವಿರುದ್ಧ ಪಾಕಿಸ್ತಾನ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಹಲವು ದೊಡ್ಡ ಆರೋಪಗಳನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಯಶಸ್ಸನ್ನು ಗೌತಮ್ ಗಂಭೀರ್ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 6000 ದಿಂದ 50 ಸಾವಿರಕ್ಕೆ… ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದೇ ತಡ ಅಹಮದಾಬಾದ್ ಹೋಟೆಲ್ ರೂಂ ಬೆಲೆ ಇಷ್ಟೊಂದಾ?


ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಅವರು ನಾದಿರ್ ಅಲಿ ಅವರ ಪಾಡ್‌ ಕಾಸ್ಟ್‌ನಲ್ಲಿ ಮಾತನಾಡಿದ್ದು, “ಐಪಿಎಲ್ 2023 ರ ಸಮಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಅಫ್ಘಾನಿಸ್ತಾನ ಕ್ರಿಕೆಟಿಗ ನವೀನ್ ಉಲ್ ಹಕ್ ನಡುವೆ ಕ್ರಿಕೆಟ್ ಮೈದಾನದಲ್ಲಿ ಏನಾಯಿತು ಎಂದು ನಾನು ನೋಡಿದೆ, ಆದರೆ ನನಗೆ ಒಂದು ವಿಷಯ ಅರ್ಥವಾಗಲಿಲ್ಲ. ಗೌತಮ್ ಗಂಭೀರ್ ವಿರಾಟ್ ನನ್ನು ಗುರಿಯಾಗಿಸಿದ್ದರು. ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿರುವ, ತನ್ನದೇ ದೇಶದ ಒಬ್ಬ ಕ್ರಿಕೆಟಿಗನಿಗೆ ಆ ರೀತಿ ಮಾಡುವುದು, ಒಬ್ಬ ಅಭಿಮಾನಿಯಾಗಿ ನಮ್ಮ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಜೊತೆಗೆ ಆಲೋಚನೆ ಇದ್ದಕ್ಕಿದ್ದಂತೆ ಬದಲಾಗಿದೆ. ಈ ಮೂಲಕ ಗೌತಮ್ ಗಂಭೀರ್ ತನ್ನ ಮೇಲೆ ಜನರ ದ್ವೇಷ ಸಾಧಿಸುವ ಕೆಲಸವನ್ನು ಮಾಡಿದ್ದಾರೆ” ಎಂದು ಹೇಳಿದ್ದಾರೆ.


ಅಹ್ಮದ್ ಶಹಜಾದ್ ಮಾತು ಮುಂದುವರೆಸಿ, “ಐಪಿಎಲ್ ಪ್ರಪಂಚದಾದ್ಯಂತ ಬಹಳ ದೊಡ್ಡ ಬ್ರ್ಯಾಂಡ್ ಆಗಿದೆ. ನವೀನ್-ಉಲ್-ಹಕ್ ಅವರಂತಹ ಕ್ರಿಕೆಟಿಗರು ಭಾರತದ ದೊಡ್ಡ ಕ್ರಿಕೆಟಿಗನಿಗೆ ಏನಾದರೂ ಹೇಳಿದರೆ, ಅವರ ಡ್ರೆಸ್ಸಿಂಗ್ ರೂಮ್‌ ನಲ್ಲಿ ಯಾವ ಪ್ರಮಾಣದಲ್ಲಿ ದ್ವೇಷ ಹರಡುತ್ತದೆ ಎಂಬುದನ್ನು ನೀವು ಊಹಿಸಬಹುದು. ಈ ಹಿಂದೆಯೂ ಗಂಭೀರ್‌ ಗೆ ಕೊಹ್ಲಿ ಜತೆ ಸಮಸ್ಯೆಗಳಿರುವುದನ್ನು ನೋಡಿದ್ದೇವೆ. ಅವರು ಕೊಹ್ಲಿಯ ಬಗ್ಗೆ ಅಸೂಯೆ ಹೊಂದಿದ್ದಾರೆ ಮತ್ತು ಅವರೊಂದಿಗೆ ವಿವಾದಗಳನ್ನು ಸೃಷ್ಟಿಸಲು ಅವಕಾಶವನ್ನು ಕಂಡುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದರು.


ವಿರಾಟ್ ಕೊಹ್ಲಿಯಂತಹ ದೊಡ್ಡ ಕ್ರಿಕೆಟಿಗನೊಂದಿಗೆ ಯಾರೂ ಕೆಟ್ಟದಾಗಿ ವರ್ತಿಸುವುದನ್ನು ನಾನು ಇಲ್ಲಿಯವರೆಗೆ ನೋಡಿಲ್ಲ ಎಂದು ಅಹ್ಮದ್ ಶಹಜಾದ್ ಹೇಳಿದ್ದಾರೆ. “ವಿರಾಟ್ ಕೊಹ್ಲಿ ಕ್ರಿಕೆಟ್‌ ನ ದೊಡ್ಡ ದಂತಕಥೆ ಮತ್ತು ನೀವು ಅವರನ್ನು ಗೌರವಿಸಬೇಕು” ಎಂದರು.


ಇದನ್ನೂ ಓದಿ: 9 ತಿಂಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಡ್ತಿದ್ದಾರೆ ಈ ಇಬ್ಬರು ಕಿಲಾಡಿಗಳು… ದುಪ್ಪಟ್ಟಾಗಲಿದೆ ಭಾರತದ ಶಕ್ತಿ!


ಅಹ್ಮದ್ ಶಹಜಾದ್, |ವಿರಾಟ್ ಕೊಹ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ, ಇದನ್ನು ಗೌತಮ್ ಗಂಭೀರ್ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ ಅವರ ಯಶಸ್ಸಿಗೆ ಗೌರವ ನೀಡಬೇಕು ಎಂದು ನಾನು ನಂಬುತ್ತೇನೆ. ವಿರಾಟ್ ಕೊಹ್ಲಿ ನಿಜವಾಗಿಯೂ ದೊಡ್ಡ ಕ್ರಿಕೆಟಿಗ ಮತ್ತು ಅವರು ಸಾಧಿಸಿದ್ದನ್ನು ಗೌತಮ್ ಗಂಭೀರ್ ಕೂಡ ತಮ್ಮ ಇಡೀ ವೃತ್ತಿಜೀವನದಲ್ಲಿ ಮಾಡಲು ಸಾಧ್ಯವಾಗಲಿಲ್ಲ. ಯಾವುದೇ ಟೀಮ್ ಮ್ಯಾನೇಜ್‌ಮೆಂಟ್ ಸಿಬ್ಬಂದಿ ಕ್ರಿಕೆಟಿಗನ ಜೊತೆ ಕಿತ್ತಾಡುವುದನ್ನು ನಾನು ನೋಡಿಲ್ಲ. ನಿಮ್ಮ ತಪ್ಪನ್ನು ಒಪ್ಪಿಕೊಂಡು ವಿರಾಟ್ ಕೊಹ್ಲಿ ಬಳಿ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.