ODIನಲ್ಲಿ 3 ಶತಕ ಸಿಡಿಸಿದ ಧೋನಿ ಗೆಳೆಯನಿಗೆ ಆಯ್ಕೆದಾರರಿಂದ ಮೋಸ: ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿ ರಾಜಕೀಯ ಎಂಟ್ರಿ

Ambati Rayudu Political Entry: ಅಂಬಟಿ ರಾಯುಡು ಈಗ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಹೊರಟಿದ್ದಾರೆ. ಅಂಬಟಿ ರಾಯುಡು ಆಂಧ್ರಪ್ರದೇಶದಲ್ಲಿ ರಾಜಕೀಯಕ್ಕೆ ಸೇರಲು ಸಿದ್ಧರಾಗಿದ್ದಾರೆ

Written by - Bhavishya Shetty | Last Updated : Jun 30, 2023, 08:08 AM IST
    • ಈ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದರು
    • ಅಂತರಾಷ್ಟ್ರೀಯ ವೃತ್ತಿಜೀವನದ ಅವಧಿಯಲ್ಲಿ ಆಯ್ಕೆದಾರರು ವಂಚನೆ ಎಸಗಿದ ಬಗ್ಗೆ ಹೇಳಿಕೊಂಡಿದ್ದರು
    • ಚೆನ್ನೈ ಸೂಪರ್ ಕಿಂಗ್ಸ್‌ ಗಾಗಿ ಐಪಿಎಲ್ ಫೈನಲ್‌ ನಲ್ಲಿ ತಮ್ಮ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು
ODIನಲ್ಲಿ 3 ಶತಕ ಸಿಡಿಸಿದ ಧೋನಿ ಗೆಳೆಯನಿಗೆ ಆಯ್ಕೆದಾರರಿಂದ ಮೋಸ: ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿ ರಾಜಕೀಯ ಎಂಟ್ರಿ title=
Ambati Rayudu

Ambati Rayudu Political Entry: ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಅಂಬಟಿ ರಾಯುಡು ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಅವಧಿಯಲ್ಲಿ ಆಯ್ಕೆದಾರರು ವಂಚನೆ ಎಸಗಿದ ಬಗ್ಗೆ ಹೇಳಿಕೊಂಡಿದ್ದರು. ಈ ಘಟನೆಯ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತರಾದರು. ಇತ್ತೀಚೆಗೆ, ಈ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಕಾರಣದಿಂದಾಗಿ ಧೋನಿ ತಂಡವು ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ: 6000 ದಿಂದ 50 ಸಾವಿರಕ್ಕೆ… ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದೇ ತಡ ಅಹಮದಾಬಾದ್ ಹೋಟೆಲ್ ರೂಂ ಬೆಲೆ ಇಷ್ಟೊಂದಾ?

ಅಂಬಟಿ ರಾಯುಡು ಈಗ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಹೊರಟಿದ್ದಾರೆ. ಅಂಬಟಿ ರಾಯುಡು ಆಂಧ್ರಪ್ರದೇಶದಲ್ಲಿ ರಾಜಕೀಯಕ್ಕೆ ಸೇರಲು ಸಿದ್ಧರಾಗಿದ್ದಾರೆ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಸದಸ್ಯತ್ವವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

37 ವರ್ಷದ ಅಂಬಟಿ ರಾಯುಡು ಮೇ 29 ರಂದು ಚೆನ್ನೈ ಸೂಪರ್ ಕಿಂಗ್ಸ್‌ ಗಾಗಿ ಐಪಿಎಲ್ ಫೈನಲ್‌ ನಲ್ಲಿ ತಮ್ಮ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು. ಅಂಬಟಿ ರಾಯುಡು ಅವರು ತಮ್ಮ ಹುಟ್ಟೂರಾದ ಗುಂಟೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

ದೇಶೀಯ ಕ್ರಿಕೆಟ್‌ ನಲ್ಲಿ ಆಂಧ್ರಪ್ರದೇಶ ಮತ್ತು ಹೈದರಾಬಾದ್ ಎರಡನ್ನೂ ಪ್ರತಿನಿಧಿಸಿರುವ ರಾಯುಡು ಈಗ ರಾಜ್ಯ ವಿಭಜನೆಯ ನಂತರ ತೆಲಂಗಾಣದ ಭಾಗವಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ರಾಯುಡು ಅವರು ಕಳೆದ ಕೆಲವು ದಿನಗಳಿಂದ ಗುಂಟೂರು ಜಿಲ್ಲೆಗೆ ಭೇಟಿ ನೀಡಿ ತಳಮಟ್ಟದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಜನಸೇವೆಗಾಗಿ ಶೀಘ್ರದಲ್ಲೇ ಆಂಧ್ರಪ್ರದೇಶ ರಾಜಕೀಯಕ್ಕೆ ಬರುತ್ತೇನೆ. ಇದಕ್ಕೂ ಮುನ್ನ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಜನರ ನಾಡಿಮಿಡಿತ ಅರಿಯಲು ಹಾಗೂ ಅವರ ಸಮಸ್ಯೆಗಳನ್ನು ಅರಿಯಲು ನಿರ್ಧರಿಸಿದ್ದೇನೆ ಎಂದು ರಾಯುಡು ಹೇಳಿದ್ದಾರೆ.

ವರದಿಗಳ ಪ್ರಕಾರ, ಮಾಜಿ ಭಾರತೀಯ ಬ್ಯಾಟ್ಸ್‌ಮನ್ ಗುಂಟೂರಿನ ಗ್ರಾಮೀಣ ಪ್ರದೇಶಗಳಿಗೆ ಜನರ ಅಗತ್ಯತೆಗಳನ್ನು ತಿಳಿಯಲು ಮತ್ತು ಅವುಗಳನ್ನು ಪೂರೈಸಲು ಏನು ಮಾಡಬಹುದು ಎಂಬುದನ್ನು ತಿಳಿಯಲು ಭೇಟಿ ನೀಡುತ್ತಿದ್ದಾರೆ.

ಅಂಬಟಿ ರಾಯುಡು 55 ಏಕದಿನ ಪಂದ್ಯಗಳಲ್ಲಿ 47.06 ಸರಾಸರಿಯಲ್ಲಿ 3 ಶತಕ ಮತ್ತು 10 ಅರ್ಧ ಶತಕ ಸೇರಿದಂತೆ 1694 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ ನಲ್ಲಿ 124 ರನ್ ಗಳಿಸಿದ್ದು ಇವರ ಅತ್ಯುತ್ತಮ ಸ್ಕೋರ್. ಇದಲ್ಲದೇ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 42 ರನ್ ಗಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಚಿಂತನೆ: “ರಾಜಕೀಯಕ್ಕೆ ಹೇಗೆ ಬರಬೇಕು ಮತ್ತು ಯಾವ ವೇದಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ನಾನು ಖಚಿತವಾದ ಕ್ರಿಯಾ ಯೋಜನೆಯೊಂದಿಗೆ ಹೊರಬರುತ್ತೇನೆ” ಎಂದು ರಾಯುಡು ಹೇಳಿದರು. ರಾಯುಡು ಇತ್ತೀಚೆಗೆ ಅಮೀನಾಬಾದ್ ಗ್ರಾಮದ ಮುಲಂಕರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು ಎಂದು ವರದಿಗಳು ಹೇಳುತ್ತವೆ. ಫಿರಂಗಿಪುರಂನಲ್ಲಿರುವ ಸಾಯಿಬಾಬಾ ದೇವಸ್ಥಾನ ಮತ್ತು ಬಾಲ ಯೇಸು ಚರ್ಚ್‌ ನಲ್ಲಿಯೂ ಅವರು ಪ್ರಾರ್ಥನೆ ಸಲ್ಲಿಸಿದರು.

ಮೋಸ ಮಾಡಿದ ಆಯ್ಕೆಗಾರರು!

2019ರ ವಿಶ್ವಕಪ್‌ ಗೂ ಮುನ್ನ ಟೀಂ ಇಂಡಿಯಾ ನಂಬರ್-4 ಬ್ಯಾಟ್ಸ್‌ಮನ್‌ ಗಾಗಿ ಹಾತೊರೆಯುತ್ತಿತ್ತು, ಆ ಸಂದರ್ಭದಲ್ಲಿ ಸ್ಥಾನದ ಅನುಪಸ್ಥಿತಿಯನ್ನು ಅಂಬಟಿ ರಾಯುಡು ಪೂರೈಸಿದರು, ಆದರೆ 2019 ರ ವಿಶ್ವಕಪ್‌ ಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದಾಗ, ಅಂಬಟಿ ರಾಯುಡು ಅವರನ್ನು ಇದ್ದಕ್ಕಿದ್ದಂತೆ ನಿರ್ಲಕ್ಷಿಸಿ, ಆ ಸ್ಥಾನದಲ್ಲಿ ವೇಗದ ಬೌಲಿಂಗ್ ಆಲ್ ರೌಂಡರ್ ವಿಜಯ್ ಶಂಕರ್ ಗೆ ಅವಕಾಶ ನೀಡಲಾಯಿತು. 2019 ರ ವಿಶ್ವಕಪ್‌ ನಲ್ಲಿ, ಅಂಬಟಿ ರಾಯುಡು ಟೀಮ್ ಇಂಡಿಯಾದಲ್ಲಿ 4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಪ್ರಬಲ ಸ್ಪರ್ಧಿಯಾಗಿದ್ದರು. 2019ರ ವಿಶ್ವಕಪ್‌ ನಲ್ಲಿ ಅಂಬಟಿ ರಾಯುಡು ಅವರನ್ನು ಆಯ್ಕೆಗಾರರು ಹಠಾತ್ತನೆ ತಂಡದಿಂದ ಕೈಬಿಟ್ಟರು. ಇದರ ನಂತರ, ಅಂಬಟಿ ರಾಯುಡು ಈ ನಿರ್ಧಾರವನ್ನು ವಿರೋಧಿಸಿದರು. ಜೊತೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದರು.

ಇದನ್ನೂ ಓದಿ: 9 ತಿಂಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಡ್ತಿದ್ದಾರೆ ಈ ಇಬ್ಬರು ಕಿಲಾಡಿಗಳು… ದುಪ್ಪಟ್ಟಾಗಲಿದೆ ಭಾರತದ ಶಕ್ತಿ!

ಐಸಿಸಿ ವಿಶ್ವಕಪ್ 2019 ರ ಸಮಯದಲ್ಲಿ ಅಂಬಾಟಿ ರಾಯುಡು ಬದಲಿಗೆ ವಿಜಯ್ ಶಂಕರ್ ಅವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಂಡ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್, ವಿಜಯ್ ಶಂಕರ್ ತಂಡಕ್ಕೆ 3D ಆಯ್ಕೆಯನ್ನು (ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್) ಒದಗಿಸುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ, ಅಂಬಟಿ ರಾಯುಡು ಅವರು ಆಯ್ಕೆಗಾರರನ್ನು ಲೇವಡಿ ಮಾಡಿ, 'ನಾನು ವಿಶ್ವಕಪ್ ವೀಕ್ಷಿಸಲು ಒಂದು ಜೋಡಿ 3D ಕನ್ನಡಕವನ್ನು ಆರ್ಡರ್ ಮಾಡಿದ್ದೇನೆ' ಎಂದು ಬರೆದುಕೊಂಡಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News