Pakistan vs New Zealand: ಅಂಪೈರ್ ಕಾಲಿಗೆ ತಗುಲಿದ ಪಾಕ್ ಫೀಲ್ಡರ್ ಎಸೆದ ಬಾಲ್: ಕೋಪಗೊಂಡ ಅಲೀಮ್ ದಾರ್ ಮಾಡಿದ್ದೇನು ನೋಡಿ
Pakistan vs New Zealand 2nd ODI: ನ್ಯೂಜಿಲೆಂಡ್ ಇನಿಂಗ್ಸ್ ನ 35ನೇ ಓವರ್ ನಲ್ಲಿ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್ ಮಾಡುತ್ತಿದ್ದು, ಹ್ಯಾರಿಸ್ ರೌಫ್ ಬೌಲಿಂಗ್ ಮಾಡುತ್ತಿದ್ದರು. ಓವರ್‌ನ ನಾಲ್ಕನೇ ಎಸೆತದಲ್ಲಿ, ಫಿಲಿಪ್ಸ್ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಶಾಟ್ ಆಡಿದರು. ಆಗ ಚೆಂಡು ಪೇಸರ್ ಮೊಹಮ್ಮದ್ ವಾಸಿಮ್ ಜೂನಿಯರ್ ಫೀಲ್ಡಿಂಗ್‌ಗೆ ಹೋಯಿತು. ಇದೇ ವೇಳೆ ವಾಸಿಂ ಎಸೆದ ಚೆಂಡು ಅಂಪೈರ್ ಅಲೀಂ ದಾರ್ ಅವರ ಪಾದಕ್ಕೆ ಬಡಿದಿದೆ.
Pakistan vs New Zealand 2nd ODI: ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನವನ್ನು 79 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಬಾಬರ್ ಅಜಮ್ ಹೊರತುಪಡಿಸಿ ಪಾಕಿಸ್ತಾನದ ಯಾವುದೇ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕಿವೀಸ್ ತಂಡ ಕೂಡ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇನ್ನು ಈ ಪಂದ್ಯದ ವೇಳೆ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಅಂಪೈರ್ ಅಲೀಂ ದಾರ್ ಅವರ ಕಾಲಿಗೆ ಪಾಕಿಸ್ತಾನದ ಫೀಲ್ಡರ್ ಎಸೆದ ಬಾಲ್ ತಗುಲಿದ್ದು, ಈ ಸಂದರ್ಭದಲ್ಲಿ ಅವರು ನೀಡಿದ ಪ್ರತಿಕ್ರಿಯೆ ಭಾರೀ ಗಮನ ಸೆಳೆದಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: IND vs SL: ಸರಣಿ ಗೆಲ್ಲಲು ರೋಹಿತ್ ಮಾಡಲೇಬೇಕು ಈ ಕೆಲಸ: ಪ್ಲೇಯಿಂಗ್ 11 ನಲ್ಲಿ ಇವರಿಗೆ ಮಾತ್ರ ಸ್ಥಾನ
ನ್ಯೂಜಿಲೆಂಡ್ ಇನಿಂಗ್ಸ್ ನ 35ನೇ ಓವರ್ ನಲ್ಲಿ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್ ಮಾಡುತ್ತಿದ್ದು, ಹ್ಯಾರಿಸ್ ರೌಫ್ ಬೌಲಿಂಗ್ ಮಾಡುತ್ತಿದ್ದರು. ಓವರ್‌ನ ನಾಲ್ಕನೇ ಎಸೆತದಲ್ಲಿ, ಫಿಲಿಪ್ಸ್ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಶಾಟ್ ಆಡಿದರು. ಆಗ ಚೆಂಡು ಪೇಸರ್ ಮೊಹಮ್ಮದ್ ವಾಸಿಮ್ ಜೂನಿಯರ್ ಫೀಲ್ಡಿಂಗ್‌ಗೆ ಹೋಯಿತು. ಇದೇ ವೇಳೆ ವಾಸಿಂ ಎಸೆದ ಚೆಂಡು ಅಂಪೈರ್ ಅಲೀಂ ದಾರ್ ಅವರ ಪಾದಕ್ಕೆ ಬಡಿದಿದೆ. ನೋವಿನಿಂದ ಕೋಪಗೊಂಡ ಅಂಪೈರ್ ಕೈಯಲ್ಲಿ ಹಿಡಿದಿದ್ದ ಜೆರ್ಸಿಯನ್ನು ನೆಲದ ಮೇಲೆ ಎಸೆದಿದ್ದಾರೆ. ಇದಾದ ಬಳಿಕ ವೇಗದ ಬೌಲರ್ ನಸೀಮ್ ಷಾ ಅವರ ಪಾದಗಳನ್ನು ಸವರಿ, ಸಮಾಧಾನ ಮಾಡುವುದು ಕಂಡುಬಂದಿತು.
IND vs SL: ಟೀಂ ಇಂಡಿಯಾಗೆ ಮಾರಕವಾಗಬಹುದು ಲಂಕಾದ ಈ ಆಟಗಾರ! ಟ್ರೋಫಿ ಕನಸಿಗೂ ಮುಳ್ಳಾಗಬಹುದು ಎಚ್ಚರ
ನ್ಯೂಜಿಲೆಂಡ್ ಪರ ಸ್ಟಾರ್ ಆರಂಭಿಕ ಬ್ಯಾಟ್ಸ್ ಮನ್ ಡೆವೊನ್ ಕಾನ್ವೆ ಬಿರುಸಿನ ಇನ್ನಿಂಗ್ಸ್ ಆಡಿದ್ದಾರೆ. ಇನ್ನು ನಾಯಕ ಕೇನ್ ವಿಲಿಯಮ್ಸನ್ ಅವರೊಂದಿಗೆ ಅತ್ಯುತ್ತಮ ಜೊತೆಯಾಟವನ್ನು ಆಡಿದರು. ಕಾನ್ವೆ 92 ಎಸೆತಗಳಲ್ಲಿ 101 ರನ್ ಗಳಿಸಿದ್ದರು. ಇನ್ನೊಂದೆಡೆ ಕೇನ್ ವಿಲಿಯಮ್ಸನ್ ಕೂಡ 85 ರನ್ ಗಳಿಸಿದ್ದರು. ಈ ಇಬ್ಬರೂ ಆಟಗಾರರಿಂದಾಗಿ ಕಿವೀಸ್ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಪಾಕಿಸ್ತಾನ ಪರ ಮೊಹಮ್ಮದ್ ನವಾಜ್ ಗರಿಷ್ಠ 4 ವಿಕೆಟ್ ಪಡೆದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.