IND vs SL: ಟೀಂ ಇಂಡಿಯಾಗೆ ಮಾರಕವಾಗಬಹುದು ಲಂಕಾದ ಈ ಆಟಗಾರ! ಟ್ರೋಫಿ ಕನಸಿಗೂ ಮುಳ್ಳಾಗಬಹುದು ಎಚ್ಚರ

IND vs SL 2nd ODI: ಶ್ರೀಲಂಕಾದ ನಾಯಕ ದಸುನ್ ಶನಕ ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಶತಕ ಬಾರಿಸಿದ್ದು, 108 ರನ್‌ಗಳ ಇನಿಂಗ್ಸ್‌ ಆಡಿದ್ದರು. 9ನೇ ವಿಕೆಟ್‌ಗೆ ಕಸುನ್ ರಜಿತಾ ಜೊತೆಗೂಡಿ ಕೇವಲ 73 ಎಸೆತಗಳಲ್ಲಿ 100 ರನ್‌ಗಳ ಮುರಿಯದ ಜೊತೆಯಾಟವನ್ನೂ ಆಡಿದ್ದರು. ಇದಲ್ಲದೇ ಬೌಲಿಂಗ್‌ ಮಾಡಿದ ಸಂದರ್ಭದಲ್ಲಿ ಶುಭಮನ್ ಗಿಲ್ ವಿಕೆಟ್ ಪಡೆದಿದ್ದರು.

Written by - Bhavishya Shetty | Last Updated : Jan 12, 2023, 11:43 AM IST
    • ಶ್ರೀಲಂಕಾದ ಸ್ಟಾರ್ ಆಟಗಾರ ಟೀಂ ಇಂಡಿಯಾಗೆ ತಲೆನೋವಾಗಿ ಉಳಿದಿದ್ದಾರೆ
    • ಶ್ರೀಲಂಕಾದ ನಾಯಕ ದಸುನ್ ಶನಕ ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ
    • ದಸುನ್ ಶನಕ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ಸಹ ಅಬ್ಬರಿಸುವ ಪರಿಣತಿ ಹೊಂದಿದ್ದಾರೆ
IND vs SL: ಟೀಂ ಇಂಡಿಯಾಗೆ ಮಾರಕವಾಗಬಹುದು ಲಂಕಾದ ಈ ಆಟಗಾರ! ಟ್ರೋಫಿ ಕನಸಿಗೂ ಮುಳ್ಳಾಗಬಹುದು ಎಚ್ಚರ title=
Team India

IND vs SL 2nd ODI: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆದರೆ ಶ್ರೀಲಂಕಾದ ಸ್ಟಾರ್ ಆಟಗಾರ ಟೀಂ ಇಂಡಿಯಾಗೆ ತಲೆನೋವಾಗಿ ಉಳಿದಿದ್ದಾರೆ. ಈ ಆಟಗಾರ ಪ್ರತಿ ಪಂದ್ಯದಲ್ಲೂ ಭಾರತದ ವಿರುದ್ಧ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಹೀಗಾಗಿಯೇ ಎರಡನೇ ಏಕದಿನ ಪಂದ್ಯದಲ್ಲಿ ಈ ಆಟಗಾರನಿಂದ ಭಾರತದ ಬೌಲರ್‌ಗಳು ಎಚ್ಚರದಿಂದ ಇರಬೇಕಾಗುತ್ತದೆ.

ಇದನ್ನೂ ಓದಿ: Ind Vs SL: ವೀರೇಂದ್ರ ಸೆಹ್ವಾಗ್ ವಿರುದ್ಧ ಕುತಂತ್ರ ಮಾಡಿದ್ದ ‘ಲಂಕಾ’ದ ಮನಗೆದ್ದ ರೋಹಿತ್!

ಶ್ರೀಲಂಕಾದ ನಾಯಕ ದಸುನ್ ಶನಕ ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಶತಕ ಬಾರಿಸಿದ್ದು, 108 ರನ್‌ಗಳ ಇನಿಂಗ್ಸ್‌ ಆಡಿದ್ದರು. 9ನೇ ವಿಕೆಟ್‌ಗೆ ಕಸುನ್ ರಜಿತಾ ಜೊತೆಗೂಡಿ ಕೇವಲ 73 ಎಸೆತಗಳಲ್ಲಿ 100 ರನ್‌ಗಳ ಮುರಿಯದ ಜೊತೆಯಾಟವನ್ನೂ ಆಡಿದ್ದರು. ಇದಲ್ಲದೇ ಬೌಲಿಂಗ್‌ ಮಾಡಿದ ಸಂದರ್ಭದಲ್ಲಿ ಶುಭಮನ್ ಗಿಲ್ ವಿಕೆಟ್ ಪಡೆದಿದ್ದರು.

ದಸುನ್ ಶನಕ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ಸಹ ಅಬ್ಬರಿಸುವ ಪರಿಣತಿ ಹೊಂದಿದ್ದಾರೆ. ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರು 45 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಎರಡನೇ ಟಿ20 ಪಂದ್ಯದಲ್ಲಿ 56 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಜೊತೆಗೆ ಎರಡು ವಿಕೆಟ್‌ಗಳನ್ನು ಸಹ ಪಡೆದಿದ್ದರು. ಇವರಿಂದಾಗಿ ಶ್ರೀಲಂಕಾ ತಂಡ ಎರಡನೇ ಟಿ20 ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ದಸುನ್ ಶನಕ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಭಾರತ ತಂಡದ ಸರಣಿ ಗೆಲ್ಲುವ ಕನಸನ್ನು ಅವರು ಮುರಿಯಬಲ್ಲರು.

ಇದನ್ನೂ ಓದಿ: IND vs SL: ಸರಣಿ ಗೆಲ್ಲಲು ರೋಹಿತ್ ಮಾಡಲೇಬೇಕು ಈ ಕೆಲಸ: ಪ್ಲೇಯಿಂಗ್ 11 ನಲ್ಲಿ ಇವರಿಗೆ ಮಾತ್ರ ಸ್ಥಾನ

ದಸುನ್ ಶನಕ ಯಾವಾಗಲೂ ಭಾರತದ ವಿರುದ್ಧ ರನ್ ಮಳೆಯನ್ನು ಸುರಿಸುತ್ತಾರೆ. ಅವರು ಇಲ್ಲಿಯವರೆಗೆ ಭಾರತದ ವಿರುದ್ಧ ನಾಲ್ಕು ODI ಪಂದ್ಯಗಳನ್ನು ಆಡಿದ್ದಾರೆ ಮತ್ತು 54.33 ರ ಸರಾಸರಿಯಲ್ಲಿ 163 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಟಿ 20 ಪಂದ್ಯಗಳಲ್ಲಿ ಭಾರತದ ವಿರುದ್ಧ 22 ಪಂದ್ಯಗಳನ್ನು ಆಡಿದ್ದಾರೆ. 30.71 ರ ಸರಾಸರಿಯಲ್ಲಿ ಮತ್ತು 140.98 ರ ಸ್ಟ್ರೈಕ್ ರೇಟ್‌ನಲ್ಲಿ 430 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News