ನವದೆಹಲಿ: ಮಯನ್ಮಾರ್ ದ ಮಾಂಡಲೆಯಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಿಲಿಯರ್ಡ್ಸ್ ಸೂಪರ್‌ಸ್ಟಾರ್ ಪಂಕಜ್ ಅಡ್ವಾಣಿ ಅವರು ಭಾನುವಾರ ತಮ್ಮ 22 ನೇ ವಿಶ್ವ ಮಟ್ಟದ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

22ನೇ ಬಾರಿಗೆ ಬಿಲಿಯರ್ಡ್ಸ್ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದ ನಂತರ  ತಮ್ಮ ಸಾಧನೆಯನ್ನು ಅತಿ ವಿಶೇಷ ಎಂದು ಕರೆದ ಅಡ್ವಾಣಿ, ಸತತ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಅವರು ಕೊನೆಯ ಆರರಲ್ಲಿ ಐದನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಕಪಕ್ಷೀಯ ಹಣಾಹಣಿಯಲ್ಲಿ ಅಡ್ವಾಣಿ 6-2ರಿಂದ ಸ್ಥಳೀಯ ನೆಚ್ಚಿನ ನಾಯ್ ಥೇ ಓ ವಿರುದ್ಧ ಜಯಗಳಿಸಿದರು. ಅಡ್ವಾಣಿಯವರ ವಿರುದ್ಧ ಸೋತ ನಂತರ, ಓಒ ಸತತ ಎರಡನೇ ಬಾರಿಗೆ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.



 'ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವಾಗಲೆಲ್ಲಾ ಒಂದು ವಿಷಯ ಸ್ಪಷ್ಟವಾಗುತ್ತದೆ - ಉತ್ಕೃಷ್ಟತೆಗೆ ನನ್ನ ಪ್ರೇರಣೆ ಕಡಿಮೆಯಾಗಿಲ್ಲ. ಇದು ನನ್ನ ಹಸಿವು ನಿಜವಾಗಿಯೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪಂಕಜ್ ಅಡ್ವಾಣಿ ಹೇಳಿದರು. 


ಇನ್ನೊಂದೆಡೆ ಪಂಕಜ್ ಅಡ್ವಾಣಿ ವಿಶ್ವ ಚಾಂಪಿಯನ್ ಪಟ್ಟ ಧರಿಸಿರುವುದಕ್ಕೆ ಟ್ವೀಟ್ ಮಾಡಿ ಪ್ರಧಾನಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.'ಧನ್ಯವಾದಗಳು ಪಂಕಜ್ ಅಡ್ವಾಣಿ ಇಡೀ ದೇಶವೇ ನಿಮ್ಮ ಸಾಧನೆ ಹೆಮ್ಮೆ ಪಡುತ್ತಿದೆ. ನಿಮ್ಮ ಸ್ಥಿರತೆ ಅದ್ಬುತವಾಗಿದೆ, ಮುಂದಿನ ಯೋಜನೆಗೆಳಿಗೆ ಶುಭವಾಗಲಿ ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ.