ಈ ಬೌಲರ್ ಆರ್ ಸಿ ಬಿ ಗೆ ಬೇಕೆಂದು ವಿರಾಟ್ ಕೊಹ್ಲಿ ಗೆ ಹೇಳಿದ್ದ ಪಾರ್ಥಿವ್ ಪಟೇಲ್...! ಆ ಬೌಲರ್ ಯಾರು ಗೊತ್ತೇ ?
ಭಾರತದ ವೇಗಿ ಜಸ್ಪ್ರಿತ್ ಬುಮ್ರಾ ಅವರು ಈಗ ಜಾಗತಿಕ ಕ್ರಿಕೆಟ್ ನಲ್ಲಿ ತಮ್ಮ ಬೌಲಿಂಗ್ ಪ್ರದರ್ಶನದಿಂದಾಗಿ ಗಮನಸೆಳೆದಿದ್ದಾರೆ. ಎಂತಹ ಸಂದರ್ಭದಲ್ಲೂ ಕೂಡ ಅವರು ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ನವದೆಹಲಿ: ಭಾರತದ ವೇಗಿ ಜಸ್ಪ್ರಿತ್ ಬುಮ್ರಾ ಅವರು ಈಗ ಜಾಗತಿಕ ಕ್ರಿಕೆಟ್ ನಲ್ಲಿ ತಮ್ಮ ಬೌಲಿಂಗ್ ಪ್ರದರ್ಶನದಿಂದಾಗಿ ಗಮನಸೆಳೆದಿದ್ದಾರೆ. ಎಂತಹ ಸಂದರ್ಭದಲ್ಲೂ ಕೂಡ ಅವರು ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಬುಮ್ರಾ ಅವರು 2013 ರಿಂದ ಆ ಫ್ರ್ಯಾಂಚೈಸ್‌ನೊಂದಿಗೆ ಇದ್ದಾರೆ ಮತ್ತು ಇದುವರೆಗೆ ಐಪಿಎಲ್‌ನಲ್ಲಿ 77 ಪಂದ್ಯಗಳಲ್ಲಿ 7.55 ರ ಸರಾಸರಿಯಲ್ಲಿ 82 ವಿಕೆಟ್‌ಗಳನ್ನು ಪಡೆದಿದ್ದಾರೆ.ಭಾರತದ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಬುಮ್ರಾ ಅವರನ್ನು ಹರಾಜಿನಲ್ಲಿ ಖರೀದಿಸುವ ಬಗ್ಗೆ ಪ್ರಸ್ತಾಪಿಸಿದ್ದನ್ನು ಬಹಿರಂಗಪಡಿಸಿದ್ದಾರೆ.
'ವಿದರ್ಭ ವಿರುದ್ಧದ ಚೊಚ್ಚಲ ಪಂದ್ಯ ನನಗೆ ನೆನಪಿದೆ. ನಾನು ಜಾನ್ ರೈಟ್ ಅವರೊಂದಿಗೆ ಮತ್ತು ರಾಹುಲ್ ಸಂಘ್ವಿಯೊಂದಿಗೆ ಮಾತನಾಡಿರುವ ಬಗ್ಗೆ ನೆನಪಿದೆ, ಅಷ್ಟೇ ಅಲ್ಲದೆ ಅವರನ್ನು ಮುಂಬೈ ಇಂಡಿಯನ್ಸ್ ಗೆ ಆಯ್ಕೆ ಮಾಡುವ ಮೊದಲು ವಿರಾಟ್ ಕೊಹ್ಲಿ ಜೊತೆಗೂ ಸಹಿತ ಮಾತನಾಡಿದ್ದೇನೆ' ಎನ್ನುವ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.