ನವದೆಹಲಿ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೆಣಸಲಿವೆ. ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಬಲಿಷ್ಠವಾಗಿದ್ದು, ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.


COMMERCIAL BREAK
SCROLL TO CONTINUE READING

ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ತಂಡ ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು, 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದ್ಲಲಿದೆ. ಅದೇ ರೀತಿ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಆಡಿರುವ 8 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದ್ದು, 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಎರಡೂ ತಂಡಗಳಿಗೆ ಅನಿವಾರ್ಯವಾಗಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿರುವ ಪಂಜಾಬ್ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮುಂಬೈ ಸೋಲಿಸಿರುವ ಲಕ್ನೋ ಕೂಡ ಗೆಲ್ಲುವ ಉತ್ಸಾಹದಲ್ಲಿದೆ.


ಇದನ್ನೂ ಓದಿ: ಅತಿಯಾ ಶೆಟ್ಟಿ ಜತೆ ಹಸೆಮಣೆ ಏರಲು ಸಜ್ಜಾದ್ರಾ ಕ್ರಿಕೆಟಿಗ ಕೆ.ಎಲ್.ರಾಹುಲ್!?


ನಾಯಕ ಮಯಾಂಕ್ ಅಗರ್ವಾಲ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಜಾನಿ ಬೈರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್, ರಿಷಿ ಧವನ್ ಪಂಜಾಬ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಅದೇ ರೀತಿ ಕಗಿಸೊ ರಬಾಡ, ರಾಹುಲ್ ಚಾಹರ್, ಸಂದೀಪ್ ಶರ್ಮಾ, ಅರ್ಷ್‌ದೀಪ್ ಸಿಂಗ್, ಶಾರುಖ್ ಖಾನ್, ಓಡನ್ ಸ್ಮಿತ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.


ಲಕ್ನೋ ಬ್ಯಾಟಿಂಗ್ ವಿಭಾಗಕ್ಕೆ ನಾಯಕ ಕೆ.ಎಲ್.ರಾಹುಲ್, ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಎವಿನ್ ಲೆವಿಸ್ ಬಲ ತುಂಬಲಿದ್ದಾರೆ. ಅದೇ ರೀತಿ ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಅವೇಶ್ ಖಾನ್, ಕೃಷ್ಣಪ್ಪ ಗೌತಮ್, ಮನನ್ ವೋಹ್ರಾ, ಕೈಲ್ ಮೇಯರ್ಸ್ ಮುಂತಾದವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿರುವುದರಿಂದ ಇಂದಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಲಿದೆ. ಅಂತಿಮವಾಗಿ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ: ಐಪಿಎಲ್‌ ಇತಿಹಾಸದ ಶತಕವೀರರು: ಸಾಧಕರ ಪಟ್ಟಿ ಸೇರಿದ ಕನ್ನಡಿಗ ರಾಹುಲ್‌


ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:


ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಭಾನುಕಾ ರಾಜಪಕ್ಸೆ (ವಿಕೆಟ್ ಕೀಪರ್), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಓಡನ್ ಸ್ಮಿತ್, ರಾಜ್ ಬಾವಾ, ಅರ್ಷ್‌ದೀಪ್ ಸಿಂಗ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಬೆನ್ನಿ ಹೋವೆಲ್, ಸಂದೀಪ್ ಶರ್ಮಾ, ರಿಷಿ ಧವನ್, ಬಲ್ತೇಜ್ ಸಿಂಗ್, ರಿಟಿಕ್ ಚಟರ್ಜಿ, ಜಿತೇಶ್ ಶರ್ಮಾ, ಪ್ರೇರಕ್ ಮಂಕಡ್, ಇಶಾನ್ ಪೊರೆಲ್, ಅಥರ್ವ ಟೈಡೆ, ಜಾನಿ ಬೈರ್‌ಸ್ಟೋವ್, ಪ್ರಭುಸಿಮ್ರಾನ್ ಸಿಂಗ್, ವೈಭವ್ ಅರೋರಾ, ಅಂಶ್ ಪಟೇಲ್


ಲಕ್ನೋ ಸೂಪರ್ ಜೈಂಟ್ಸ್: ಕೆ.ಎಲ್.ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಎವಿನ್ ಲೂಯಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್, ಶಹಬಾಜ್ ನದೀಮ್, ಕೃಷ್ಣಪ್ಪ ಗೌತಮ್, ಅಂಕಿತ್ ರಾಜ್‌ಪೂತ್, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಮನನ್ ವೋಹ್ರಾ


ಐಪಿಎಲ್‌ ಪಂದ್ಯ: 42


ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್


ದಿನಾಂಕ: ಏಪ್ರಿಲ್ 29, ಶುಕ್ರವಾರ


ಸ್ಥಳ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ


ಸಮಯ: ಸಂಜೆ 7.30ಕ್ಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.