ಮುಂಬೈ: ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರು ಕೇವಲ 56 ಎಸೆತಗಳಲ್ಲಿ ಮೂರನೇ ಐಪಿಎಲ್ ಶತಕವನ್ನು ಗಳಿಸಿದರು.ಟೈಮಲ್ ಮಿಲ್ಸ್ ಅವರ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಶತಕವನ್ನು ಗಳಿಸಿದರು.ಅವರ ಈ ಭರ್ಜರಿ ಇನಿಂಗ್ಸ್ ನಲ್ಲಿ ಬರೋಬ್ಬರಿ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್ ಗಳನ್ನು ಸಿಡಿಸಿದರು.
ಇದನ್ನೂ ಓದಿ: ಐಪಿಎಲ್ 2022 ಗೆ ಇರುವ ವಿಮಾ ಪಾಲಿಸಿ ಎಷ್ಟು ಗೊತ್ತಾ?
ಈಗ ಅವರ ಈ ಭರ್ಜರಿ ಇನಿಂಗ್ಸ್ ನಿಂದ ಹೊಸ ದಾಖಲೆಯನ್ನು ಕೆ.ಎಲ್ ರಾಹುಲ್ ನಿರ್ಮಿಸಿದ್ದಾರೆ.ವಿರಾಟ್ ಕೊಹ್ಲಿ ನಂತರ ಐಪಿಎಲ್ನಲ್ಲಿ ನಾಯಕನಾಗಿ ಬಹು ಶತಕಗಳನ್ನು ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಇದುವರೆಗೆ ವಿರಾಟ್ ಕೊಹ್ಲಿ ಅವರು ಐದು ಶತಕಗಳನ್ನು ಗಳಿಸಿದ್ದಾರೆ.
.
ಇದನ್ನೂ ಓದಿ: KKR : ಟೀಂ ಇಂಡಿಯಾದ ಅಲ್ಲದೆ ಐಪಿಎಲ್ ನಿಂದಲು ಈ ಆಟಗಾರ ಔಟ್ : ಅಪಾಯದಲ್ಲಿ ವೃತ್ತಿಜೀವನ
ಇದೀಗ ನಾಯಕನಾಗಿ ರಾಹುಲ್ ಎರಡು ಶತಕಗಳಿಸುವ ಮೂಲಕ ಆಡಮ್ ಗಿಲ್ಕ್ರಿಸ್ಟ್, ಸಂಜು ಸ್ಯಾಮ್ಸನ್, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಆಟಗಾರರೆಲ್ಲಾ ತಲಾ ಒಂದು ಶತಕವನ್ನು ಗಳಿಸಿದ್ದಾರೆ.ಇನ್ನೊಂದು ವಿಶೇಷವೆಂದರೆ ಕೆ.ಎಲ್ ರಾಹುಲ್ ತಮ್ಮ 100 ನೇ ಐಪಿಎಲ್ ಪಂದ್ಯದಲ್ಲಿ ಶತಕವನ್ನು ಗಳಿಸಿದ್ದಾರೆ.ಆ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
💯 in his 1⃣0⃣0⃣th IPL match for @klrahul11! 👏 👏
The @LucknowIPL captain is leading from the front as he brings up his 3⃣rd IPL ton. 🙌 🙌
Follow the match ▶️ https://t.co/8aLz0owuM1#TATAIPL | #MIvLSG pic.twitter.com/xk5EzSpBXl
— IndianPremierLeague (@IPL) April 16, 2022
ಅಷ್ಟೇ ಅಲ್ಲದೆ ಐಪಿಎಲ್ ನಲ್ಲಿ ಮೂರು ಅಜೇಯ ಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಯೂ ಅವರದ್ದಾಗಿದೆ. ಈ ಹಿಂದೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 132* ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 100* ರನ್ ಗಳಿಸಿದ್ದಾರೆ.ಈ ಹಿಂದೆ ಪಂಜಾಬ್ ಕಿಂಗ್ಸ್ ಅನ್ನು ಮುನ್ನಡೆಸುತ್ತಿದ್ದ ರಾಹುಲ್, ಈ ವರ್ಷ ತಮ್ಮ ನೆಲೆಯನ್ನು ಲಕ್ನೋ ತಂಡಕ್ಕೆ ಸೇರ್ಪಡೆಯಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.