ನವದೆಹಲಿ: ಕಳೆದ ತಿಂಗಳು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಆಷ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆರ್ಮಿ ಕ್ಯಾಪ್ ಧರಿಸಿದ್ದ ಟೀಮ್ ಇಂಡಿಯಾದ ಕ್ರಮಕ್ಕೆ ಈಗ ಪಾಕ್ ಕ್ರಿಕೆಟ್ ಬೋರ್ಡ್ ಐಸಿಸಿ ವಿರುದ್ಧ ದೂರು ನೀಡಿದೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಣಿ " ಈ ವಿಚಾರವಾಗಿ ಭಾರತದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು." ನಾವು ಕ್ರಿಕೆಟ್ ಮತ್ತು ಕ್ರೀಡೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದು ಎಂದು ತಿಳಿದಿದ್ದೇವೆ. ಇದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಿದೆ" ಎಂದು ಹೇಳಿದರು.


ಈ ಹಿಂದೆ ಐಸಿಸಿ ಇಂಗ್ಲೆಂಡ್ ಆಲ್ ರೌಂಡರ್  ಮೊಯಿನ್ ಅಲಿ ಹಾಗೂ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ರಾಜಕೀಯ ಹೇಳಿಕೆ ನೀಡಿದ್ದ ವಿಚಾರವಾಗಿ ಕ್ರಮಕೈಗೊಂಡಿತ್ತು.ಈ ಹಿನ್ನಲೆಯಲ್ಲಿ ಅದೇ ಮಾದರಿಯಲ್ಲಿ ಭಾರತದ ವಿರುದ್ಧವೂ ಸಹಿತ ಕ್ರಮ ತಗೆದುಕೊಳ್ಳಬೇಕೆಂದು ಅವರು ಹೇಳಿದರು. 


"ನಾವು ಈ ವಿಚಾರವಾಗಿ ಮೊದಲನೇ ದಿನದಿಂದಲೂ ಐಸಿಸಿಯೊಂದಿಗೆ ಸಂಪರ್ಕದಲ್ಲಿದ್ದೇವೆ.ಈಗಾಗಲೇ ಒಂದು ಪತ್ರವನ್ನು ಬರೆದಿದ್ದೇವೆ.ಇನ್ನು 12 ಗಂಟೆಗಳ ಒಳಗಾಗಿ ಮತ್ತೊಂದು ಪತ್ರವನ್ನು ಬರೆಯಲಿದ್ದೇವೆ.ಈ ವಿಚಾರವಾಗಿ ನಮಗೆ ಯಾವುದೇ ಗೊಂದಲವಿಲ್ಲ.ಈ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ" ಎಂದರು.