`ಜನರು ನಿವೃತ್ತರಾದಾಗ ದಂತಕಥೆಗಳಾಗುತ್ತಾರೆ. ಕೊಹ್ಲಿ 30 ನೇ ವಯಸ್ಸಿನಲ್ಲಿಯೇ ದಂತಕಥೆ`
ಎಲ್ಲಾ ಆಟಗಾರರರು ನಿವೃತ್ತಿಯಾದ ನಂತರ ದಂತಕಥೆಯಾದರೆ, ವಿರಾಟ್ ಕೊಹ್ಲಿ 30 ವರ್ಷ ತುಂಬುವ ಹೊತ್ತಿಗೆ ದಂತಕಥೆಯಾಗಿದ್ದರೆ ಎಂದು ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಎಲ್ಲಾ ಆಟಗಾರರರು ನಿವೃತ್ತಿಯಾದ ನಂತರ ದಂತಕಥೆಯಾದರೆ, ವಿರಾಟ್ ಕೊಹ್ಲಿ 30 ವರ್ಷ ತುಂಬುವ ಹೊತ್ತಿಗೆ ದಂತಕಥೆಯಾಗಿದ್ದರೆ ಎಂದು ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಚಿನ್, ಮತ್ತು ಕೊಹ್ಲಿಗಿಂತಲೂ ಸುನಿಲ್ ಗವಾಸ್ಕರ್ ಶ್ರೇಷ್ಠ ಎಂದ ಈ ಆಟಗಾರ...!
"ವಿರಾಟ್ ಅವರು ತಂಡಕ್ಕೆ ಬಂದಾಗ ಕೆಲವು ಉತ್ತಮ ಭರವಸೆಯನ್ನು ಮೂಡಿಸಿದರು. ತಮಗೆ ಅವಕಾಶ ಸಿಕ್ಕ ತಕ್ಷಣ ಅವರು ಅದನ್ನು ಹಿಡಿದಿಟ್ಟುಕೊಂಡರು. ಆ ಸಮಯದಲ್ಲಿ ಅವರು ತುಂಬಾ ಚಿಕ್ಕವರಾಗಿದ್ದರಿಂದ ಅವರು ವಿಶ್ವಕಪ್ ದಲ್ಲಿ ಸ್ಥಾನ ಪಡೆದರು.ಮತ್ತು ಅದು ಅವನ ಮತ್ತು ರೋಹಿತ್ ನಡುವೆ ಸ್ಪರ್ಧೆ ಇತ್ತು, ಆ ಸಮಯದಲ್ಲಿ ವಿರಾಟ್ ಕೊಹ್ಲಿ (Virat kohli) ರನ್ ಗಳನ್ನು ಗಳಿಸುತ್ತಿದ್ದರು. ಇದರಿಂದಾಗಿಯೇ ವಿರಾಟ್ ಗೆ ಸ್ಥಾನ ಸಿಕ್ಕಿತು. ಮತ್ತು ಈಗ ಹೋಲಿಸಿದಲ್ಲಿ ಅವರಲ್ಲಿ ಸಂಪೂರ್ಣ ಬದಲಾವಣೆ ಇದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಜೀವನವನ್ನೇ ಬದಲಿಸಿತಂತೆ ಈ ಒಂದು ನಿರ್ಧಾರ
"ಅವನು ನನ್ನ ಮುಂದೆ ತರಬೇತಿ ಪಡೆದು ಬೆಳೆಯುವುದನ್ನು ನೋಡಿದ್ದೇನೆ, ಅವನು ತುಂಬಾ ಶ್ರಮದ ಆಟಗಾರ.ಅವನು ತನ್ನ ತರಬೇತಿಯ ಬಗ್ಗೆ ಹೆಚ್ಚು ಶಿಸ್ತನ್ನು ಕಾಯ್ದುಕೊಂಡಿದ್ದನು ಎಂದು ಹೇಳಿದರು.ಇನ್ನು ಮುಂದುವರೆದು ಮಾತನಾಡಿದ ಯುವಿ ಕೆಲವು ಆಟಗಾರರಿಗೆ ನಾಯಕತ್ವವು ಹೊರೆಯಾಗಿ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತದೆ,ಆದರೆ ಕೊಹ್ಲಿ ವಿಚಾರವಾಗಿ ಹಾಗೆ ಆಗಲಿಲ್ಲ.ಇದು ಒಂದು ರೀತಿಯಲ್ಲಿ ಒಳ್ಳೆಯದಾಯಿತು.
ಇದನ್ನೂ ಓದಿ: ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಗಿಂತಲೂ ಸಚಿನ್ ಶ್ರೇಷ್ಠ ಎಂದ ಗಂಭೀರ.!..ಕಾರಣವೇನು ಗೊತ್ತೇ ?
"ಅವರು ಸಾಕಷ್ಟು ರನ್ ಗಳಿಸುತ್ತಿದ್ದರು ಮತ್ತು ನಂತರ ನಾಯಕರಾದರು.ಕೆಲವೊಮ್ಮೆ ನೀವು ತಲೆಕೆಡಿಸಿಕೊಳ್ಳುತ್ತೀರಿ, ಆದರೆ ಅವನು ನಾಯಕನಾದಾಗ ಸ್ಥಿರತೆ ಇನ್ನಷ್ಟು ಉತ್ತಮವಾಯಿತು. ಸುಮಾರು 30 ನೇ ವಯಸ್ಸಿನಲ್ಲಿ, ಅವರು ಬಹಳಷ್ಟು ವಿಷಯಗಳನ್ನು ಸಾಧಿಸಿದ್ದಾರೆ.
"ಜನರು ನಿವೃತ್ತರಾದಾಗ ದಂತಕಥೆಗಳಾಗುತ್ತಾರೆ. 30 ನೇ ವಯಸ್ಸಿನಲ್ಲಿ, ಅವರು ಈಗಾಗಲೇ ದಂತಕಥೆಯಾದರು. ಅವರು ಕ್ರಿಕೆಟಿಗನಾಗಿ ಬೆಳೆಯುವುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ. ಅವರು ಹೆಚ್ಚಿನ ಸಮಯವನ್ನು ಪಡೆದಿದ್ದಾರೆಂದು ಭಾವಿಸುತ್ತೇವೆ ಎಂದು ಯುವರಾಜ್ ಸಿಂಗ್ ಶ್ಲಾಘಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.