ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಆವೃತ್ತಿಯ ಮೊದಲ ಎರಡು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 14 ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 1 ಸ್ಕೋರ್ ಗಳಿಸಿರುವುದು ಈಗ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.


Viral Video: ಕ್ರಿಕೆಟ್ ತರಬೇತಿ ವೇಳೆ ಕೊಹ್ಲಿ ಹಿಡಿದ ಈ ಕ್ಯಾಚ್ ನಿಜಕ್ಕೂ ಅದ್ಬುತ....!


COMMERCIAL BREAK
SCROLL TO CONTINUE READING

ಈಗ ಈ ಕುರಿತಾಗಿ ಎಎನ್‌ಐಯೊಂದಿಗೆ ಮಾತನಾಡಿದ ಕೊಹ್ಲಿಯ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ, ಕೊಹ್ಲಿ ನಿಗದಿಪಡಿಸಿದ ಮಾನದಂಡವೇ ಅಭಿಮಾನಿಗಳು ಇಷ್ಟು ಬೇಗನೆ ತಾಳ್ಮೆ ಕಳೆದುಕೊಂಡಿರುವುದಕ್ಕೆ ಕಾರಣವಾಗಿದೆ ಮತ್ತು  ಅವರು ಪ್ರತಿ ಬಾರಿ ರನ್ ಗಳಿಸುವುದನ್ನು ನೋಡಲು ಬಯಸುತ್ತಾರೆ ಎಂದರು.


ಕೊಹ್ಲಿ ನಿಮ್ಮನ್ನು ಸೋಲಿಸಬೇಕೆಂದು ತೀರ್ಮಾನಿಸಿದರೆ ಖಂಡಿತವಾಗಿ ಸೋಲಿಸುತ್ತಾನೆ ಎಂದ ಈ ಆಟಗಾರ...!  


'ಇದು ಕ್ರೀಡಾಪಟುವಿನ ಜೀವನದ ಒಂದು ಭಾಗ ಮತ್ತು ಭಾಗವಾಗಿದೆ. ನಿಮಗೆ ಒಮ್ಮೊಮ್ಮೆ ಒಳ್ಳೆಯ ದಿನಗಳಿರುತ್ತವೆ ಮತ್ತು ನೀವು ಪಿಚ್‌ನಲ್ಲಿ ಒಮ್ಮೊಮ್ಮೆ ಕೆಟ್ಟ ದಿನಗಳನ್ನು ಹೊಂದಿದ್ದೀರುತ್ತೀರಿ, ಕೊಹ್ಲಿ ಅಂತಹ ಮಾನದಂಡವನ್ನು ನಿಗದಿಪಡಿಸಿದ್ದಾನೆಂದರೆ, ಅವನು ಕೇವಲ ಮನುಷ್ಯ, ಆದರೆ ಯಂತ್ರವಲ್ಲ ಎನ್ನುವುದನ್ನು ಜನರು ಮರೆಯುತ್ತಾರೆ..ಕೆಲವು ತಾಂತ್ರಿಕ ಸಮಸ್ಯೆ ಅಥವಾ ಮನಸ್ಥಿತಿ ಸಮಸ್ಯೆ ಇದೆಯೇ ಎಂದು ಜನರು ಕೇಳುತ್ತಾರೆ, ಆದರೆ ಇದು ಆಟದ ಒಂದು ಭಾಗ ಎಂದು ನಾನು ಮತ್ತೆ ಹೇಳುತ್ತೇನೆ 'ಎಂದು ಅವರು ಕೊಹ್ಲಿ ಅವರನ್ನು ಸಮರ್ಥಿಸಿಕೊಂಡರು.


'ನೀವು ಪಿಚ್‌ಗೆ ಕಾಲಿಟ್ಟಾಗಲೆಲ್ಲಾ ನೀವು ಯಶಸ್ವಿಯಾಗಲು ಸಾಧ್ಯವಿಲ್ಲ. ಕೊಹ್ಲಿಯ ಸತತವಾಗಿ ಪ್ರದರ್ಶನ ನೀಡುವುದನ್ನು ನೋಡಿದ್ದರಿಂದಾಗಿ ಅಭಿಮಾನಿಗಳಿಗೆ ಒಂದು ಕೆಟ್ಟ ಇನ್ನಿಂಗ್ಸ್ ಕೂಡ ಅವರಿಗೆ ಬೇಸರ ತರಿಸುತ್ತದೆ "ಎಂದು ಅವರು ತಿಳಿಸಿದರು. ಕೊನೆಯ ಪಂದ್ಯದಲ್ಲಿ ಕೊಹ್ಲಿ ಒಂದೆರಡು ಕ್ಯಾಚ್‌ಗಳನ್ನು ಬಿಟ್ಟಿದ್ದರಿಂದಾಗಿ, ಅದು ಅಂತಿಮವಾಗಿ ಕೆ,ಎಲ್ ರಾಹುಲ್ ಶತಕ ಗಳಿಸಲು ಸಾಧ್ಯವಾಯಿತು.