ನವದೆಹಲಿ: ದೇಶದ ಕ್ರಿಕೆಟಿಗರು ರಾಷ್ಟ್ರಕ್ಕಿಂತ ಹೆಚ್ಚಾಗಿ ಐಪಿಎಲ್ ಗೆ ಆಧ್ಯತೆ ನೀಡುತ್ತಿದ್ದಾರೆ ಆದ್ದರಿಂದ ಈಗ ಪುನಃ ತಪ್ಪುಗಳನ್ನು ತಪ್ಪಿಸಲು ಉತ್ತಮ ವೇಳಾಪಟ್ಟಿಯನ್ನು ರಚಿಸುವುದು ಬಿಸಿಸಿಐನ ಜವಾಬ್ದಾರಿಯಾಗಿದೆ ಎಂದು ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಎನ್ನುವುದು ಪ್ರಭಾವಿಗಳ ಕುಟಿಲ ಕೂಟ: ಬಿಜೆಪಿ ಆಕ್ರೋಶ


"ಭಾರತ ತಂಡವು ಈ ಬಾರಿಯ ಟಿ-20 ವಿಶ್ವಕಪ್ ನಲ್ಲಿ ಸೆಮಿಫೈನಲ್ ತಲುಪಲು ವಿಫಲವಾಗಿರುವ ಬೆನ್ನಲ್ಲೇ ಕಪಿಲ್ ದೇವ್ ಅವರ ಹೇಳಿಕೆ ಬಂದಿದೆ.ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್‌ಗೆ ಆದ್ಯತೆ ನೀಡಿದಾಗ,ನಾವು ಏನು ಹೇಳಬಹುದು? ಆಟಗಾರರು ತಮ್ಮ ರಾಷ್ಟ್ರಕ್ಕಾಗಿ ಆಡುವ ಬಗ್ಗೆ ಹೆಮ್ಮೆ ಪಡಬೇಕು.ಅವರ ಆರ್ಥಿಕ ಸ್ಥಿತಿ ನನಗೆ ತಿಳಿದಿಲ್ಲ, ಆದ್ದರಿಂದ ಇದರ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ" ಎಂದು 62 ವರ್ಷದ ಕಪಿಲ್ ದೇವ್ ಎಬಿಪಿ ನ್ಯೂಸ್’ಗೆ ತಿಳಿಸಿದರು.


ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಶೀಘ್ರದಲ್ಲೇ ಕಾಂಗ್ರೆಸ್ ನಿಂದ ಪಾದಯಾತ್ರೆ -ಸಿದ್ಧರಾಮಯ್ಯ


ಆಟದ ಸಂದರ್ಭದಲ್ಲಿ ಮೊದಲು ದೇಶದ ತಂಡಕ್ಕೆ ಆಧ್ಯತೆ ನೀಡಿದರೆ ನಂತರದ ಸ್ಥಾನದಲ್ಲಿ ಫ್ರಾಂಚೈಸಿಗಳು ಇರಬೇಕು ಎಂದು ನಾನು ಭಾವಿಸುತ್ತೇನೆ.ಅಲ್ಲಿ (ಐಪಿಎಲ್) ಕ್ರಿಕೆಟ್ ಆಡಬೇಡಿ ಎಂದು ನಾನು ಹೇಳುತ್ತಿಲ್ಲ,ಆದರೆ ತನ್ನ ಕ್ರಿಕೆಟ್ ಅನ್ನು ಉತ್ತಮವಾಗಿ ಯೋಜಿಸುವ ಜವಾಬ್ದಾರಿ ಈಗ ಬಿಸಿಸಿಐ ಮೇಲಿದೆ.ಈ ಪಂದ್ಯಾವಳಿಯಲ್ಲಿ ನಾವು ಮಾಡಿದ ತಪ್ಪುಗಳನ್ನು ಪುನರಾವರ್ತಿಸದಿರುವುದು ನಮಗೆ ದೊಡ್ಡ ಕಲಿಕೆಯಾಗಲಿದೆ,"ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ