ನವದೆಹಲಿ:  Mejor Dhyan Chand Khel Ratna Award - ಖೇಲ್ ರತ್ನ ಪ್ರಶಸ್ತಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಮಹತ್ವದ ಮತ್ತೋ ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದೆ. ಮೋದಿ ಸರ್ಕಾರವು 'ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ'ಯನ್ನು 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ' ಎಂದು ಮರುನಾಮಕರಣ ಮಾಡಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.


Hockey Legend) ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಅರ್ಪಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ. ಜನರ ಈ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಆ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರಿಸಲಾಗಿದೆ... ಜೈ ಹಿಂದ್!' ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.


Tokyo Olympics 2020 Updates: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿಗುರಿದ ಮತ್ತೊಂದು ಪದಕದ ಆಸೆ, ಕುಸ್ತಿ ಸೆಮಿಫೈನಲ್ ಗೆ ಲಗ್ಗೆ ಇಟ್ಟ ಬಜರಂಗ್ ಪುನಿಯಾ


COMMERCIAL BREAK
SCROLL TO CONTINUE READING

ಈ ಕುರಿತು ಮತ್ತೊಂದು ಟ್ವೀಟ್ ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, 'ಭಾರತಕ್ಕೆ ಸನ್ಮಾನ ಹಾಗೂ ಗೌರವವನ್ನು ತಂದುಕೊಟ್ಟ ಆಗ್ರಗಣ್ಯ ಆಟಗಾರರ ಪೈಕಿ ಮೇಜರ್ ಧ್ಯಾನ್ ಚಂದ್ ಕೂಡ ಒಬ್ಬರು. ಹೀಗಾಗಿ ದೇಶದ ಅತ್ಯುನ್ನದ ಕ್ರೀಡಾ ಪುರಸ್ಕಾರದ ಹೆಸರನ್ನು ಅವರ ಸ್ಮರಣಾರ್ಥ ನೀಡುವುದು ಉಚಿತ' ಎಂದಿದ್ದಾರೆ. 


Tokyo Olympics: ಕೈ ಜಾರಿದ ಕಂಚಿನ ಪದಕ, ಭಾರತೀಯ ಮಹಿಳಾ ಹಾಕಿ ತಂಡದ ಕನಸು ಭಗ್ನ


ಪ್ರತಿವರ್ಷ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟುಹಬ್ಬ ಅಂದರೆ ಆಗಸ್ಟ್ 30 ರಂದು ಖೇಲ್ ರತ್ನ ಅವಾರ್ಡ್ ಅನ್ನು ನೀಡಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ- Tokyo Olympics 2021 :  ಬೆಳ್ಳಿಗೆ ಮುತ್ತಿಟ್ಟ ಕುಸ್ತಿಪಟು ರವಿ ದಹಿಯಾ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ