Asian Games: ಚೀನಾದ ಹ್ಯಾಂಗ್‌ಜೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಲು ತೆರಳಬೇಕಿದ್ದ ಅರುಣಾಚಲ ಪ್ರದೇಶದ ಮೂವರು ವೂಶೂ ಕ್ರೀಡಾಪಟುಗಳಿಗೆ ಚೀನಾ ಪ್ರವೇಶ ನಿಷೇಧಿಸಿದೆ. 10 ಕ್ರೀಡಾಪಟುಗಳನ್ನೊಳಗೊಂಡ ಈ ತಂಡದಲ್ಲಿ ಮೂರು ಮಹಿಳಾ ಆಟಗಾರರಿಗೆ ಚೀನಾ ಪ್ರವೇಶ ನಿಕಾಕರಿಸಿದೆ. 


COMMERCIAL BREAK
SCROLL TO CONTINUE READING

ಉಳಿದ ಆಟಗಾರರರು ಹ್ಯಾಂಗ್‌ಜೂಗೆ ತೆರಳಿದ್ದು, ವೂಶೂ ಆಟಗಾರರಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅವರ ಪ್ರವೇಶವನ್ನು ಚೀನಾ ನಿರಾಕರಿಸಿದೆ. ಅರುಣಾಚಲ ಪ್ರದೇಶದ ಈ ಮೂವರು ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಮಾಹಿತಿ ಮತ್ತು ಪ್ರಸಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ತಮ್ಮ ಚೀನಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. 


ಇದನ್ನೂ ಓದಿ-Asian Games 2023: ಏಷ್ಯನ್ ಗೇಮ್ಸ್ ಫೈನಲ್ ತಲುಪಿದ ಭಾರತೀಯ ಕ್ರಿಕೆಟ್ ತಂಡ! ಚಿನ್ನಕ್ಕೆ ಒಂದೇ ಹೆಜ್ಜೆ ಬಾಕಿ…


ಇದು ಪ್ರತಿಭಟನೆಯ ಸಂಕೇತವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಪ್ರವೇಶ ನಿರಾಕರಣೆಗೆ ಒಳಗಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಹ್ಯಾಂಗ್‌ಜೂ ಏಷ್ಯನ್ ಗೇಮ್ಸ್ ಆರ್ಗನೈಸಿಂಗ್ ಕಮಿಟಿಯಿಂದ ತಮ್ಮ ಮಾನ್ಯತೆ ಕಾರ್ಡ್ಸ್‌ನ್ನು ಪಡೆದುಕೊಂಡಿದ್ದರು. ಇದೇ ಕಾರ್ಡ್ಗಳನ್ನು ಪ್ರವೇಶ ವೀಸಾ ಎಂದು ಪರಿಗಣಿಸಗುತ್ತದೆ.  


ಪ್ರಯಾಣ ಮಾಡುವ ಅಥ್ಲೀಟ್‌ಗಳು ಪ್ರಯಾಣ ದಾಖಲೆಯನ್ನ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿತ್ತು. ಆದರೆ ಬುಧವಾರ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೋಳ್ಳಲು ತೆರಳುತ್ತಿದ್ದ ಅರುಣಾಚಲ ಪ್ರದೇಶದ ಮೂವರು ಆಟಗಾರರು ತಮ್ಮ ಪ್ರಯಾಣದ ಡಾಕುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಮೂವರು ಆಟಗಾರರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ವರದಿಮಾಡಲಾಗಿದೆ. 


ಇನ್ನು 10 ಕ್ರೀಡಾಪಟುಗಳನ್ನೊಳಗೊಂಡ ತಂಡಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಈ ಮಧ್ಯ 19ನೇ ಏಷ್ಯನ್ ಗೇಮ್ಸ್ಗೆ ಪಾಲ್ಗೋಳ್ಳಲು ಹೊರಟ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಚೀನಾ ಪ್ರವೇಶ ನಿರಾಕರಿಸಲಾಗಿದೆ ಎನ್ನುವ ಕುರಿತು ಹಿರಿಯ ಭಾರತ ಸರ್ಕಾರದ ಅಧಿಕಾರಿ ಅರಿಂದಮ್ ಬಾಗ್ಚಿ ಪ್ರತಿಕ್ರಿಯೆ ನೀಡಿದ್ದಾರೆ. 


ಇದನ್ನೂ ಓದಿ-ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ