ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು ಗೊತ್ತಾ?

Unbreakable world records in Cricket History: ನಾವಿಂದು ಈ ವರದಿಯಲ್ಲಿ ನೀವು ಹಿಂದೆಂದೂ ಕೇಳಿರದ, ಮುರಿಯಲು ಅಸಾಧ್ಯವಾದ ವಿಶಿಷ್ಟ 3 ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Sep 24, 2023, 07:25 AM IST
    • ಕ್ರಿಕೆಟ್‌’ನಲ್ಲಿ ಹಲವಾರು ದಾಖಲೆಗಳು ಸೃಷ್ಟಿಯಾಗುವುದು, ಅವುಗಳನ್ನು ಬ್ರೇಕ್ ಮಾಡುವುದು ಸಾಮಾನ್ಯ
    • 52ನೇ ವಯಸ್ಸಿನವರೆಗೂ ಕ್ರಿಕೆಟ್ ಆಡಿರುವ ಬಗ್ಗೆ ಎಂದಾದರೂ ಕೇಳಿದ್ದೀರಾ?
    • ಮುರಿಯಲು ಅಸಾಧ್ಯವಾದ ವಿಶಿಷ್ಟ 3 ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ
ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು ಗೊತ್ತಾ? title=
Unbreakable records in Cricket

Unbreakable world records in Cricket: ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ ಕ್ರಿಕೆಟ್ ಇತಿಹಾಸದಲ್ಲಿ, ಟೀಂ ಇಂಡಿಯಾ ಹೆಸರಿನಲ್ಲಿ ಹಲವು ದೊಡ್ಡ ದೊಡ್ಡ ದಾಖಲೆಗಳಿವೆ. ಕ್ರಿಕೆಟ್‌’ನಲ್ಲಿ ಹಲವಾರು ದಾಖಲೆಗಳು ಸೃಷ್ಟಿಯಾಗುವುದು, ಅವುಗಳನ್ನು ಬ್ರೇಕ್ ಮಾಡುವುದು ಸಾಮಾನ್ಯ ಸಂಗತಿ. ಆದರೆ ನಾವಿಂದು ಈ ವರದಿಯಲ್ಲಿ ನೀವು ಹಿಂದೆಂದೂ ಕೇಳಿರದ, ಮುರಿಯಲು ಅಸಾಧ್ಯವಾದ ವಿಶಿಷ್ಟ 3 ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಅ.1ರಿಂದ ಈ 3 ರಾಶಿಯವರ ಲೈಫೇ ಚೇಂಜ್: ಸಂಪತ್ತಿನ ಸುರಿಮಳೆ, ಕೈಇಟ್ಟಲ್ಲೆಲ್ಲಾ ಜಯ, ಬಾಳು ಬಂಗಾರವಾಗುವ ಸಮಯ

ಟೆಸ್ಟ್ ಕ್ರಿಕೆಟ್‌’ನ ಅತ್ಯಂತ ಹಿರಿಯ ಆಟಗಾರ:

ಕ್ರಿಕೆಟ್‌’ನಲ್ಲಿ ಆಟಗಾರನ ಫಿಟ್‌ನೆಸ್‌ ಅತಿ ಮುಖ್ಯ. ಆದರೆ ಓರ್ವ ಆಟಗಾರ ತನ್ನ 52ನೇ ವಯಸ್ಸಿನವರೆಗೂ ಕ್ರಿಕೆಟ್ ಆಡಿರುವ ಬಗ್ಗೆ ಎಂದಾದರೂ ಕೇಳಿದ್ದೀರಾ? ಇಂಗ್ಲೆಂಡ್‌’ನ ಶ್ರೇಷ್ಠ ಆಲ್‌ ರೌಂಡರ್ ವಿಲ್ಫ್ರೆಡ್ ರೋಡ್ಸ್ 52 ವರ್ಷ ಮತ್ತು 165 ದಿನಗಳವರೆಗೆ ಟೆಸ್ಟ್ ಆಡಿದ್ದರು. ಈ ಮೂಲಕ ಟೆಸ್ಟ್ ಪಂದ್ಯ ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ಖ್ಯಾತಿ ಗಳಿಸಿದರು. ಇದಲ್ಲದೇ ವಿಲ್ಫ್ರೆಡ್ ಅವರ ಹೆಸರಿನಲ್ಲಿ ಇನ್ನೂ ಎರಡು ದಾಖಲೆಗಳಿವೆ. 1110 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಲ್ಲದೆ, 4204 ವಿಕೆಟ್‌’ಗಳನ್ನು ಪಡೆದಿದ್ದಾರೆ.

ಅತ್ಯಧಿಕ ಬ್ಯಾಟಿಂಗ್ ಸರಾಸರಿ:

ಆಸ್ಟ್ರೇಲಿಯಾದ ಕ್ರಿಕೆಟಿಗ ಸರ್ ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್. ಟೆಸ್ಟ್‌’ನಲ್ಲಿ ಅವರ ಬ್ಯಾಟಿಂಗ್ ಸರಾಸರಿ 99.94 ಆಗಿದೆ. ಇಲ್ಲಿಯವರೆಗೆ ಯಾವುದೇ ಆಟಗಾರ ಡಾನ್ ಬ್ರಾಡ್ಮನ್ ಅವರ ಬ್ಯಾಟಿಂಗ್ ಸರಾಸರಿಯ ಸಮೀಪಕ್ಕೂ ಬಂದಿಲ್ಲ. ಎರಡನೇ ಸ್ಥಾನದಲ್ಲಿ 61.87 ಸರಾಸರಿಯಲ್ಲಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ಆಡಮ್ ವೋಗ್ಸ್ ಇದ್ದಾರೆ.

ಇದನ್ನೂ ಓದಿ: Dina Bhavishya: ಇಂದು ಈ ರಾಶಿಯವರಿಗೆ ವ್ಯವಹಾರದಲ್ಲಿ ಭಾರೀ ಧನಲಾಭ: ಅದೃಷ್ಟ ಕೈಹಿಡಿಯುವುದು ಖಚಿತ

ODI ಪಂದ್ಯದಲ್ಲಿ ಅತ್ಯಂತ ಎಕಾನಮಿ ಸ್ಪೆಲ್:

ಏಕದಿನ ಪಂದ್ಯದಲ್ಲಿ ಅತ್ಯಂತ ಮಿತವ್ಯಯ ಬೌಲಿಂಗ್ ಮಾಡಿದ ದಾಖಲೆ ವೆಸ್ಟ್ ಇಂಡೀಸ್’ನ ಫಿಲ್ ಸಿಮನ್ಸ್ ಹೆಸರಿನಲ್ಲಿದೆ. 1992ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ODI ಪಂದ್ಯದಲ್ಲಿ 0.30ರ ಎಕಾನಮಿಯಲ್ಲಿ ಕೇವಲ 3 ರನ್ ನೀಡಿ 10 ಓವರ್ ಸ್ಪೆಲ್ ನಲ್ಲಿ 8 ಓವರ್ ಬೌಲಿಂಗ್ ಮಾಡಿ 4 ವಿಕೆಟ್ ಪಡೆದಿದ್ದರು. ಅವರ ಈ ದಾಖಲೆಯನ್ನು ಮುರಿಯಲು ಇದುವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News