ಮಿಂಚಿದ ರೋನಾಲ್ಡೋ,ರೋಚಕ 3-3 ರಲ್ಲಿ ಡ್ರಾ ಕಂಡ ಪೋರ್ಚುಗಲ್-ಸ್ಪೇನ್ ಪಂದ್ಯ
ಪೋರ್ಚುಗಲ್ ನ ರೊನಾಲ್ಡೋ ಕ್ರಿಷ್ಟಿಯಾನೋ ಅವರ ಹ್ಯಾಟ್ರಿಕ್ ಗೋಲಿನ ಸಹಾಯದಿಂದ ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ತಂಡವು ಕೊನೆಗೂ ಸ್ಪೇನ್ ವಿರುದ್ಧ 3-3 ರಲ್ಲಿ ರೋಚಕ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಮಾಸ್ಕೋ: ಪೋರ್ಚುಗಲ್ ನ ರೊನಾಲ್ಡೋ ಕ್ರಿಷ್ಟಿಯಾನೋ ಅವರ ಹ್ಯಾಟ್ರಿಕ್ ಗೋಲಿನ ಸಹಾಯದಿಂದ ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ತಂಡವು ಕೊನೆಗೂ ಸ್ಪೇನ್ ವಿರುದ್ಧ 3-3 ರಲ್ಲಿ ರೋಚಕ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಮಾಸ್ಕೋದಲ್ಲಿ ನಡೆದ ಫೀಫಾ ವಿಶ್ವಕಪ್ ಲೀಗ್ ಪಂದ್ಯಾವಳಿಯಲ್ಲಿ ಉಭಯ ತಂಡಗಳ ಮ್ಯಾಚ್ ನಿಜಕ್ಕೂ ಕೂತುಹಲ ಕೆರಳಿಸಿತ್ತು. ಒಂದು ಹಂತದಲ್ಲಿ ಮೇಲುಗೈ ಸಾಧಿಸಿದ್ದ ಸ್ಪೇನ್ ತಂಡವು ಆದರೆ ಕೊನೆ ಹಂತದಲ್ಲಿ ರೋನಾಲ್ಡೋ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು 3-3 ರ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.
ಪ್ರಾರಂಭದಲ್ಲಿ ಯಶಸ್ಸನ್ನು ಕಂಡರೂ ಸಹಿತ ಸೋಲಿನ ಸುಲಿಗೆ ಸಿಲುಕಿದ್ದ ಪೋರ್ಚುಗಲ್ ತಂಡವು ಕೊನೆ ಕ್ಷಣದಲ್ಲಿ ರೋನಾಲ್ಡೋ ಅವರ ಫ್ರೀ ಕಿಕ್ ಗೋಲ್ ಮೂಲಕ ಸ್ಪೇನ್ ವಿರುದ್ದ ಡ್ರಾ ಸಾಧಿಸುವಲ್ಲಿ ಯಶ ಕಂಡಿತು. ಆ ಮೂಲಕ ರೊನಾಲ್ದೋ ಅವರು 55ನೆ ಬಾರಿಗೆ ಹ್ಯಾಟ್ರಿಕ್ ಗೋಲ್ ಗಳಿಸಿದ ಸಾಧನೆ ಮಾಡಿದರು.