ಟೀಂ ಇಂಡಿಯಾದಲ್ಲಿ ಸಂಚಲನ… ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಜಯ್ ಶಾ ರಾಜೀನಾಮೆ! ಕಾರಣ ಕೂಡ ರಿವೀಲ್
BCCI Secretary Jay Shah: ಐಸಿಸಿಯ ಹೊಸ ಅಧ್ಯಕ್ಷರ ಚುನಾವಣೆಗೆ ಜಯ್ ಶಾ ಸ್ಪರ್ಧಿಸಲಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚುನಾವಣೆ 4 ತಿಂಗಳ ನಂತರ ಅಂದರೆ ಈ ವರ್ಷ ನವೆಂಬರ್’ನಲ್ಲಿ ನಡೆಯಲಿದೆ. ಜಯ್ ಶಾ 2019 ರಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡಿದ್ದರು.
BCCI Secretary Jay Shah: 2024ರ ಟಿ 20 ವಿಶ್ವಕಪ್’ನಲ್ಲಿ ಭಾರತ ಪ್ರಶಸ್ತಿ ಜಯಿಸಿದ ನಂತರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಂಬಂಧಿಸಿದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ವರದಿಯ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಜಯ್ ಶಾ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆ
ಐಸಿಸಿಯ ಹೊಸ ಅಧ್ಯಕ್ಷರ ಚುನಾವಣೆಗೆ ಜಯ್ ಶಾ ಸ್ಪರ್ಧಿಸಲಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚುನಾವಣೆ 4 ತಿಂಗಳ ನಂತರ ಅಂದರೆ ಈ ವರ್ಷ ನವೆಂಬರ್’ನಲ್ಲಿ ನಡೆಯಲಿದೆ. ಜಯ್ ಶಾ 2019 ರಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡಿದ್ದರು.
ಪ್ರಸ್ತುತ ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅಧಿಕಾರದಲ್ಲಿದ್ದಾರೆ. 2020 ರಿಂದ ಈ ಸ್ಥಾನವನ್ನು ಅಲಂಕರಿಸಿದ್ದು, ಈ ವರ್ಷ ಕೊನೆಯಾಗಲಿದೆ.
ಇನ್ನೊಂದೆಡೆ ಕ್ರಿಕ್’ಬಜ್ ವರದಿಯ ಪ್ರಕಾರ, ಈ ಬಾರಿ ಜಯ್ ಶಾ ನವೆಂಬರ್’ನಲ್ಲಿ ಬಿಸಿಸಿಐ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಅಂದಹಾಗೆ ಚುನಾವಣಾ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ವರದಿಯ ಪ್ರಕಾರ, ಈ ತಿಂಗಳು ಕೊಲಂಬೊದಲ್ಲಿ ಸಭೆ ನಡೆಯಲಿದ್ದು, ಅದರಲ್ಲಿ ದಿನಾಂಕದ ಬಗ್ಗೆ ತಿಳಿದುಬರಲಿದೆ.
ಇದನ್ನೂ ಓದಿ: 5 ನಿಮಿಷದಲ್ಲಿ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಲು ಒಂದು ತುಂಡು ಇದ್ದಿಲು ಸಾಕು..! ಈ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಿ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪ್ರಸ್ತುತ 35 ವರ್ಷ. ಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ ಎಂಬ ಅಂಶದ ಅನುಸಾರ ಇತಿಹಾಸ ಸೃಷ್ಟಿಸಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ