Sarfaraz Khan Story: ಸರ್ಫರಾಜ್ ಖಾನ್ ತನ್ನ ಚೊಚ್ಚಲ ಟೆಸ್ಟ್‌’ನಲ್ಲಿ ಇಂಗ್ಲೆಂಡ್‌’ನ ಸ್ಪಿನ್ನರ್‌’ಗಳ ವಿರುದ್ಧ ಪ್ರಾಬಲ್ಯ ಸಾಧಿಸಿದ್ದು ನಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ಈ ಸ್ಥಾನಕ್ಕೆ ಬರಲು ಸರ್ಫರಾಜ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತನ್ನ ತಂದೆ ನೌಶಾದ್ ಖಾನ್ ಅವರ ಮಾರ್ಗದರ್ಶನದಲ್ಲಿ 15 ವರ್ಷಗಳ ಕಾಲ ಪ್ರತಿದಿನ 500 ಎಸೆತಗಳನ್ನು ಆಡಿದ ಕಠಿಣ ಪರಿಶ್ರಮದ ಫಲಿತಾಂಶದಿಂದಲೇ ಇಂದು ಟೀಂ ಇಂಡಿಯಾಗೆ ಪದಾರ್ಪಣೆ ಮಾಡಲು ಸಿಕ್ಕಿರುವುದು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಬ್ಬರಲ್ಲ, ಇಬ್ಬರಲ್ಲ… ಟೀಂ ಇಂಡಿಯಾದ ಐವರು ಸ್ಟಾರ್ ಕ್ರಿಕೆಟಿಗರಿಂದ ಏಕಕಾಲಕ್ಕೆ ನಿವೃತ್ತಿ ಘೋಷಣೆ! ಯಾರ್ಯಾರು ಗೊತ್ತೇ?


ರಾಜ್‌ಕೋಟ್‌’ನಲ್ಲಿ ನಡೆದ ತಮ್ಮ ಚೊಚ್ಚಲ ಟೆಸ್ಟ್‌’ನಲ್ಲಿ ಎರಡು ಆತ್ಮವಿಶ್ವಾಸದ ಅರ್ಧಶತಕಗಳನ್ನು ಗಳಿಸುವ ಮೂಲಕ ಸರ್ಫರಾಜ್ ಅವರು ಭಾರತ ತಂಡದಲ್ಲಿ ಉಜ್ವಲ ಭವಿಷ್ಯವನ್ನು ಹೊಂದಿದ್ದಾರೆಂದು ತೋರಿಸಿಕೊಟ್ಟಿದ್ದಾರೆ.


ಕಳೆದ ಕೆಲವು ವರ್ಷಗಳಿಂದ ಸರ್ಫರಾಜ್ ಖಾನ್ ಅವರ ಕಠಿಣ ಪರಿಶ್ರಮ ಮತ್ತು ಯೋಜನೆಯು ರಾಜ್‌ಕೋಟ್‌ನಲ್ಲಿ ಟಾಮ್ ಹಾರ್ಟ್ಲಿ, ಜೋ ರೂಟ್ ಮತ್ತು ರೆಹಾನ್ ಅಹ್ಮದ್ ಅವರಂತಹ ಸ್ಪಿನ್ನರ್‌’ಗಳ ವಿರುದ್ಧ ಫಲ ನೀಡಿತು. ಸರ್ಫರಾಜ್ ಅವರ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಕೋಚ್, 'ಮುಂಬೈನ ಓವಲ್, ಕ್ರಾಸ್ ಮತ್ತು ಆಜಾದ್ ಮೈದಾನಗಳಲ್ಲಿ ಪ್ರತಿದಿನ 500 ಎಸೆತಗಳನ್ನು ಆಫ್, ಲೆಗ್ ಮತ್ತು ಎಡಗೈ ಸ್ಪಿನ್ನರ್‌’ಗಳಿಂದ ಆಡುವುದರಿಂದ ಇದು ಸಾಧ್ಯವಾಯಿತು' ಎಂದು ಹೇಳಿದರು.


ಇದನ್ನೂ ಓದಿ: Yashasvi Jaiswal: ಟೆಂಟ್’ನಿಂದ ಅರಮನೆಯತ್ತ… ಎಷ್ಟೊಂದು ಅದ್ಭುತವಾಗಿದೆ ನೋಡಿ ಯಶಸ್ವಿ ಜೈಸ್ವಾಲ್ ಐಷಾರಾಮಿ ಮನೆ!


ಸರ್ಫರಾಜ್ ಅವರನ್ನು ತಯಾರು ಮಾಡಿದ ಕೀರ್ತಿ ನೌಶಾದ್‌’ಗೆ ಮಾತ್ರ ಸಲ್ಲದು. ಭುವನೇಶ್ವರ್ ಕುಮಾರ್ ಅವರ ಕೋಚ್ ಸಂಜಯ್ ರಸ್ತೋಗಿ, ಮೊಹಮ್ಮದ್ ಶಮಿ ಅವರ ಕೋಚ್ ಬದ್ರುದ್ದೀನ್ ಶೇಖ್, ಕುಲದೀಪ್ ಯಾದವ್ ಅವರ ಕೋಚ್ ಕಪಿಲ್ ದೇವ್ ಪಾಂಡೆ, ಗೌತಮ್ ಗಂಭೀರ್ ಅವರ ಕೋಚ್ ಸಂಜಯ್ ಭಾರದ್ವಾಜ್ ಮತ್ತು ಭಾರತ ಎ ತಂಡದ ನಾಯಕ ಅಭಿಮನ್ಯು ಈಶ್ವರನ್ ಅವರ ತಂದೆ ಆರ್ಪಿ ಈಶ್ವರನ್ ಅವರೂ ಸರ್ಫರಾಜ್ ವೃತ್ತಿಬದುಕಿಗೆ ಉತ್ತಮ ಕೊಡುಗೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.