ಒಬ್ಬರಲ್ಲ, ಇಬ್ಬರಲ್ಲ… ಟೀಂ ಇಂಡಿಯಾದ ಐವರು ಸ್ಟಾರ್ ಕ್ರಿಕೆಟಿಗರಿಂದ ಏಕಕಾಲಕ್ಕೆ ನಿವೃತ್ತಿ ಘೋಷಣೆ! ಯಾರ್ಯಾರು ಗೊತ್ತೇ?

Cricketers Retirement: ಭಾರತದ ಐವರು ದಿಗ್ಗಜ ಆಟಗಾರರು 2023-24ರ ರಣಜಿ ಋತುವಿನ ಮುಕ್ತಾಯದೊಂದಿಗೆ ಕ್ರಿಕೆಟ್‌’ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಈ ಕ್ರಿಕೆಟಿಗರು ಬೇರಾರು ಅಲ್ಲ, ಮನೋಜ್ ತಿವಾರಿ, ವರುಣ್ ಆರೋನ್, ಧವಲ್ ಕುಲಕರ್ಣಿ, ಸೌರಭ್ ತಿವಾರಿ ಮತ್ತು ಫೈಜ್ ಫಜಲ್. ಈ ಎಲ್ಲಾ ಆಟಗಾರರು ಭಾರತದ ಪರ ಕೆಲವು ಸ್ವರೂಪಗಳಲ್ಲಿ ಆಡಿದ್ದು ಮಾತ್ರವಲ್ಲದೆ ದೇಶೀಯ ಕ್ರಿಕೆಟ್‌’ನಲ್ಲಿ ತಮ್ಮ ವಿಶೇಷ ಛಾಪು ಮೂಡಿಸಿದ್ದಾರೆ.

  • Feb 20, 2024, 13:44 PM IST

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಬಂಗಾಳದ ದಿಗ್ಗಜ ಮನೋಜ್ ತಿವಾರಿ, ಜಾರ್ಖಂಡ್ ಬ್ಯಾಟ್ಸ್‌’ಮನ್ ಸೌರಭ್ ತಿವಾರಿ ಮತ್ತು ವೇಗದ ಬೌಲರ್ ವರುಣ್ ಆರೋನ್, ಮುಂಬೈನ ಧವಲ್ ಕುಲಕರ್ಣಿ ಮತ್ತು ವಿದರ್ಭದ ಫೈಜ್ ಫಜಲ್ ತಮ್ಮ ನಿವೃತ್ತಿಗೆ ವಿಭಿನ್ನ ಕಾರಣಗಳನ್ನು ನೀಡಿದ್ದಾರೆ.

2 /8

ಇಂಡಿಯನ್ ಪ್ರೀಮಿಯರ್ ಲೀಗ್‌’ಗೆ ಒಪ್ಪಂದ ಮಾಡಿಕೊಳ್ಳದಿರುವುದು ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಕಳೆದುಕೊಂಡಿರುವುದು ಈ ಕಾರಣಗಳಲ್ಲಿ ಸೇರಿವೆ.

3 /8

ವರುಣ್ ಆರೋನ್, ಮನೋಜ್ ತಿವಾರಿ ಮತ್ತು ಫೈಜ್ ಫಜಲ್ ಅವರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಅದೇ ಮೈದಾನದಲ್ಲಿ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ  

4 /8

ಬಂಗಾಳದ 38 ವರ್ಷದ ಮನೋಜ್ ತಿವಾರಿ ಸೋಮವಾರ ಬಿಹಾರ ವಿರುದ್ಧ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಬಳಿಕ ತಂಡಕ್ಕೆ ವಿದಾಯ ಹೇಳಿದರು. ಈ ಆಕ್ರಮಣಕಾರಿ ಬ್ಯಾಟ್ಸ್‌’ಮನ್ ಪ್ರಥಮ ದರ್ಜೆ ಕ್ರಿಕೆಟ್‌’ನಲ್ಲಿ 10,000ಕ್ಕೂ ಹೆಚ್ಚು ರನ್‌’ಗಳನ್ನು ಗಳಿಸಿದ್ದು, ಭಾರತ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ.

5 /8

ಸೌರಭ್ 17 ವರ್ಷಗಳ ಕಾಲ ಜಾರ್ಖಂಡ್ ತಂಡದಲ್ಲಿ ಆಡಿದ್ದಲ್ಲದೆ, ಭಾರತ ಪರ 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 115 ಪ್ರಥಮ ದರ್ಜೆ ಪಂದ್ಯಗಳಲ್ಲಿ 8030 ರನ್ ಗಳಿಸಿದ್ದು, ಇದರಲ್ಲಿ 22 ಶತಕಗಳು ಮತ್ತು 34 ಅರ್ಧ ಶತಕಗಳು ಸೇರಿವೆ.

6 /8

ಭಾರತದ ವೇಗದ ಬೌಲರ್‌’ಗಳಲ್ಲಿ ಒಬ್ಬರಾದ ವರುಣ್ ಆರೋನ್ ಗಾಯಗಳಿಂದಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇವರು ಭಾರತದ 9 ಟೆಸ್ಟ್ ಮತ್ತು ಅನೇಕ ODI ಪಂದ್ಯಗಳನ್ನು ಆಡಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 66 ಪಂದ್ಯಗಳಲ್ಲಿ 173 ವಿಕೆಟ್‌’ಗಳನ್ನು ಪಡೆದಿದ್ದಾರೆ.

7 /8

ಫೈಜ್ ಫಜಲ್ 21 ವರ್ಷಗಳ ಕಾಲ ವಿದರ್ಭ ಪರ ಆಡಿದ್ದರು. ಈ ಆರಂಭಿಕ ಬ್ಯಾಟ್ಸ್‌ಮನ್ ನಾಯಕತ್ವದಲ್ಲಿ, ವಿದರ್ಭ 2018 ರಲ್ಲಿ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತು. ಪ್ರಥಮ ದರ್ಜೆ ಕ್ರಿಕೆಟ್‌’ನಲ್ಲಿ ಅವರ ಹೆಸರಿನಲ್ಲಿ 9183 ರನ್‌’ಗಳು ದಾಖಲಾಗಿವೆ.2016 ರಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ ಪರ ODI ಪಂದ್ಯವನ್ನು ಆಡಿದ್ದು, ಇದರಲ್ಲಿ ಅಜೇಯ 55 ರನ್ ಗಳಿಸಿದ್ದಾರೆ.

8 /8

ಭಾರತ ಪರ 12 ODI ಮತ್ತು 2 T20 ಪಂದ್ಯಗಳನ್ನು ಆಡಿರುವ ಧವಳ್ ಕುಲಕರ್ಣಿ, 17 ವರ್ಷಗಳ ಕಾಲ ದೇಶೀಯ ವೃತ್ತಿಜೀವನದಲ್ಲಿ ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದಾರೆ. 35 ವರ್ಷ ವಯಸ್ಸಿನ ವೇಗದ ಬೌಲರ್ 95 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 27.31 ಸರಾಸರಿಯಲ್ಲಿ 281 ವಿಕೆಟ್ಗಳನ್ನು ಪಡೆದರು.