ಬೆಂಗಳೂರು: ಪ್ರೊ ಕಬಡ್ಡಿಯ ಇಂದಿನ ಪ್ರಥಮ ಪಂದ್ಯ ಅತ್ಯಂತ ರೋಚಕವಾಗಿ ನಡೆಯಿತು. ಪಂದ್ಯದಲ್ಲಿ ಯು ಮುಂಬಾ ವಿರುದ್ಧ 30-28 ಅಂತರದಲ್ಲಿ ಜಯ ಗಳಿಸಿ ಪುಣೇರಿ ಪಲ್ಟನ್‌ ಸೂಪರ್‌ ಸಂಡೆ ಮಹಾರಾಷ್ಟ್ರ ಡರ್ಬಿ ಗೆದ್ದುಕೊಂಡಿದೆ.


COMMERCIAL BREAK
SCROLL TO CONTINUE READING

ಅಸ್ಲಾಮ್‌ ಇನಾಂದಾರ್‌ (9), ಮೋಹಿತ್‌ ಗೋಯತ್‌ (5) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದರೆ, ಟ್ಯಾಕಲ್‌ನಲ್ಲಿ ನಾಯಕ ಫಜಲ್‌ ಅಚ್ರತಲಿ 4 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಮೊಹಮ್ಮದ್‌ ನಬೀಭಾಕ್ಷ್‌ ರೈಡಿಂಗ್‌ನಲ್ಲಿ ಗಳಿಸಿ 4 ಅಂಕ ಜಯದಲ್ಲಿ ಪ್ರಮುಖ ಪಾತ್ರವಹಿಸಿತು. ಇದರೊಂದಿಗೆ ಪುಣೇರಿ ಪಲ್ಟಲ್‌ ಋತುವಿನ ಮೊದಲ ಜಯ ದಾಖಲಿಸಿತು.


ಇದನ್ನೂ ಓದಿ: ಕೇವಲ Instagramನಿಂದ ಕೊಹ್ಲಿ ಗಳಿಸಿದ್ದು 300 ಕೋಟಿ! ಹಾಗಾದ್ರೆ ಇವರ ತಿಂಗಳ ಆದಾಯವೆಷ್ಟು?


ಯು ಮುಂಬಾ ಹಿಂದಿನ ಪಂದ್ಯಗಳಿಗಿಂತ ಈ ಪಂದ್ಯದಲ್ಲಿ ಉತ್ತಮವಾಗಿಯೇ ಪ್ರದರ್ಶನ ತೋರಿತು. ಗುಮಾನ್‌ ಸಿಂಗ್‌ (7) ಹಾಗೂ ಜೈ ಭಗವಾನ್‌ (5) ಉತ್ತಮವಾಗಿಯೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು. ಆದರೆ ದ್ವಿತಿಯಾರ್ಧದಲ್ಲಿ ಅಂತಿಮ ಹಂತದಲ್ಲಿ ಪುಣೇರಿ ಪಲ್ಟನ್‌ ಗಳಿಸಿದ ರೈಡಿಂಗ್‌ ಅಂಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು. ಯು ಮುಂಬಾ ಆಡಿದ ನಾಲ್ಕು ಪಂದ್ಯಗಳಲ್ಲಿ 2 ಜಯ ಹಾಗೂ 2 ಸೋಲನುಭವಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲುಳಿಯಿತು.


ಕುತೂಹಲದ ಪ್ರಥಮಾರ್ಧ: ಉತ್ತಮ ಪೈಪೋಟಿಯಿಂದ ಕೂಡಿದ ಪ್ರಥಮಾರ್ಧದ ಪಂದ್ಯದಲ್ಲಿ ಇತ್ತಂಡಗಳು ದಿಟ್ಟ ಹೋರಾಟ ನೀಡಿದುದರ ಪರಿಣಾಮ ಪ್ರಥಮಾರ್ಧದಲ್ಲಿ ಪಂದ್ಯ 14-13 ರಲ್ಲಿ ಮುನ್ನಡೆದು ಪುಣೇರಿ ಪಲ್ಟನ್‌ 1 ಅಂಕದಲ್ಲಿ ಮೇಲುಗೈ ಸಾಧಿಸಿತು. ಕನ್ನಡಿಗ ಬಿಸಿ ರಮೇಶ್‌ ಗರಡಿಯಲ್ಲಿ ಪಳಗಿದ ಪುಣೇರಿ ಪಲ್ಟನ್‌ ರೈಡಿಂಗ್‌ನಲ್ಲಿ 7 ಅಂಕ ಗಳಿಸಿದರೆ, ಯು ಮುಂಬಾ 8 ಅಂಕ ಗಳಿಸಿತು. ಟ್ಯಾಕಲ್‌ನಲ್ಲಿ ಪುಣೇರಿ ಪಲ್ಟನ್‌ 7 ಅಂಕ ಗಳಿಸಿ ಕಬಡ್ಡಿ ಅಭಿಮಾನಿಗಳಿಗೆ ಆಟದ ರಸದೌತಣ ನೀಡಿತು. ಯು ಮುಂಬಾ 4 ಅಂಕ ಗಳಿಸಿತು.


ಇದನ್ನೂ ಓದಿ: Viral Video: ಪ್ರೇಯಸಿಯ ಕುಟುಂಬವನ್ನು ಒಪ್ಪಿಸಲು ಇಂಡಿಯನ್ ಸ್ಟೈಲ್ ಅನುಸರಿಸಿದ ವಿದೇಶಿ ಸ್ಟಾರ್ ಕ್ರಿಕೆಟಿಗ!


ಭಾರತದ ಸಿನಿ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿದ ಕನ್ನಡ ಸಿನಿಮಾ ಕಾಂತಾರದ ನಿರ್ದೇಶಕ, ನಾಯಕ ನಟ ರಿಶಬ್‌ ಶೆಟ್ಟಿ ಪಂದ್ಯ ಆರಂಭಕ್ಕೆ ಮುನ್ನ ರಾಷ್ಟ್ರ ಗೀತೆ ಹಾಡಿದ್ದು ಇಂದಿನ ಪಂದ್ಯದ ವಿಶೇಷವಾಗಿತ್ತು. ರಿಶಬ್‌ ಶೆಟ್ಟಿ ಪಂದ್ಯ ವೀಕ್ಷಿಸಿ ಕಬಡ್ಡಿ ಅಭಿಮಾನಿಗಳಲ್ಲಿ ಹೊಸ ಉಲ್ಲಾಸ ತುಂಬಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.