Viral Video: ಪ್ರೇಯಸಿಯ ಕುಟುಂಬವನ್ನು ಒಪ್ಪಿಸಲು ಇಂಡಿಯನ್ ಸ್ಟೈಲ್ ಅನುಸರಿಸಿದ ವಿದೇಶಿ ಸ್ಟಾರ್ ಕ್ರಿಕೆಟಿಗ!

ಕಗಿಸೊ ರಬಾಡ ಅವರು ಭಾರತೀಯ ರೇಡಿಯೋ ಜಾಕಿ ಕರಿಷ್ಮಾ ಅವರೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಕರಿಷ್ಮಾ ರಬಾಡಾಗೆ ಭಾರತೀಯ ಪೋಷಕರನ್ನು ಹೇಗೆ ಮೆಚ್ಚಿಸಬೇಕೆಂದು ಹೇಳಿಕೊಡುತ್ತಿದ್ದಾರೆ. ಇದರಲ್ಲಿ ಅವರು ಕೆಲವು ಪದಗಳನ್ನು ತಪ್ಪಾಗಿ ಹೇಳುತ್ತಾರೆ.

Written by - Bhavishya Shetty | Last Updated : Oct 16, 2022, 10:05 PM IST
    • ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ರಬಾಡ ಹಿಂದಿ ಮಾತನಾಡಿರುವ ವಿಡಿಯೋ

    • ಭಾರತೀಯ ರೇಡಿಯೋ ಜಾಕಿ ಕರಿಷ್ಮಾ ಅವರೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಿದ್ದರು

    • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Viral Video: ಪ್ರೇಯಸಿಯ ಕುಟುಂಬವನ್ನು ಒಪ್ಪಿಸಲು ಇಂಡಿಯನ್ ಸ್ಟೈಲ್ ಅನುಸರಿಸಿದ ವಿದೇಶಿ ಸ್ಟಾರ್ ಕ್ರಿಕೆಟಿಗ!  title=
Kagiso Rabada

ದಕ್ಷಿಣ ಆಫ್ರಿಕಾದ ಮಾರಕ ಬೌಲರ್ ಕಗಿಸೊ ರಬಾಡ ತಮ್ಮ ಕಿಲ್ಲರ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಅವರು ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ವಿದೇಶಿ ಆಟಗಾರರು ಐಪಿಎಲ್‌ನಲ್ಲಿ ಆಡುವಾಗ, ಅವರು ಭಾರತೀಯ ಆಟಗಾರರೊಂದಿಗೆ ಹಿಂದಿಯಲ್ಲಿ ಸಂವಹನ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಇದೀಗ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ರಬಾಡ ಹಿಂದಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: IPL 2023ರ ಮಿನಿ ಹರಾಜು ಪ್ರಕ್ರಿಯೆಗೆ ಡೇಟ್ ಫಿಕ್ಸ್: ಎಲ್ಲಿ-ಯಾವಾಗ ನಡೆಯುತ್ತೆ ಗೊತ್ತಾ?

ಕಗಿಸೊ ರಬಾಡ ಅವರು ಭಾರತೀಯ ರೇಡಿಯೋ ಜಾಕಿ ಕರಿಷ್ಮಾ ಅವರೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಕರಿಷ್ಮಾ ರಬಾಡಾಗೆ ಭಾರತೀಯ ಪೋಷಕರನ್ನು ಹೇಗೆ ಮೆಚ್ಚಿಸಬೇಕೆಂದು ಹೇಳಿಕೊಡುತ್ತಿದ್ದಾರೆ. ಇದರಲ್ಲಿ ಅವರು ಕೆಲವು ಪದಗಳನ್ನು ತಪ್ಪಾಗಿ ಹೇಳುತ್ತಾರೆ.

 
 
 
 

 
 
 
 
 
 
 
 
 
 
 

A post shared by RJ Karishma (@rjkarishma)

 

 

ಕಗಿಸೊ ರಬಾಡ ತಮ್ಮ ಅತ್ಯುತ್ತಮ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, ಬ್ಯಾಟಿಂಗ್ ನಲ್ಲಿಯೂ ರಬಾಡ ಅಬ್ಬರಿಸುತ್ತಾರೆ. ಇನ್ನಿಂಗ್ಸ್‌ನ ಆರಂಭದಲ್ಲಿ ಅವರು ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಿದರು. ರಬಾಡ ದಕ್ಷಿಣ ಆಫ್ರಿಕಾ ಪರ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ.

ಇದನ್ನೂ ಓದಿ: ಕೇವಲ Instagramನಿಂದ ಕೊಹ್ಲಿ ಗಳಿಸಿದ್ದು 300 ಕೋಟಿ! ಹಾಗಾದ್ರೆ ಇವರ ತಿಂಗಳ ಆದಾಯವೆಷ್ಟು?

ಕಗಿಸೊ ರಬಾಡ ದಕ್ಷಿಣ ಆಫ್ರಿಕಾ ಪರ 55 ಟೆಸ್ಟ್ ಪಂದ್ಯಗಳಲ್ಲಿ 257 ವಿಕೆಟ್, 87 ODIಗಳಲ್ಲಿ 135 ಮತ್ತು 49 T20 ಪಂದ್ಯಗಳಲ್ಲಿ 55 ವಿಕೆಟ್ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News