ನವದೆಹಲಿ: ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಅಂಕಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತೃಪ್ತಿ ಪಡುವ ಮೂಲಕ ಮತ್ತೊಮ್ಮೆ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ವಿಫಲವಾಗಿದೆ.


COMMERCIAL BREAK
SCROLL TO CONTINUE READING

ಆದರೆ ಈಗ ಪ್ಲೇ ಆಫ್ ಗೆ ಎಂಟ್ರಿ ಕೊಡದೆ ಇರುವುದು ಕೂಡ ಒಂದು ದಾಖಲೆಯಲಾಗಿದೆ. ಹೌದು,ಈ ಹಿಂದೆ ದೆಹಲಿ ತಂಡವು ಸತತವಾಗಿ ಆರು ಬಾರಿ ಪ್ಲೇ ಆಫ್ ಗೆ ಎಂಟ್ರಿ ಕೊಡದೆ ಸಾಧನೆಯನ್ನು ಮಾಡಿತ್ತು.ಈಗ ಆ ದಾಖಲೆಯನ್ನು ಅಳಿಸಿ ಹಾಕಿರುವ ಪಂಜಾಬ್ ತಂಡವು ಈಗ ಸತತ ಏಳು ಸಿಜನ್ ನಲ್ಲಿ ಪ್ಲೇ ಆಫ್ ಗೆ ಎಂಟ್ರಿ ಕೊಡದೆ ಇರುವ ಸಾಧನೆಯನ್ನು ಮಾಡಿದೆ.


2014 ರ ಐಪಿಎಲ್ ಋತುವಿನಲ್ಲಿ ಪಂಜಾಬ್ (Punjab Kings) ತಂಡವು ರನ್ನರ್ ಅಪ್ ಸ್ಥಾನವನ್ನು ಪಡೆದಿತ್ತು,ಆದರೆ ಅಂದಿನಿಂದ ಅದು ಪ್ಲೇ ಆಫ್ ಗೆ ತಲುಪಲು ವಿಫಲವಾಗಿದೆ.ಈ ತಂಡವು 2008 ರಲ್ಲಿ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿ ಸೆಮಿಫೈನಲ್ ಗೆ ತಲುಪಿತ್ತು.


ಇದನ್ನೂ ಓದಿ: ನಾಳೆಯಿಂದ ದೇಶಾದ್ಯಂತ ಥೇಟರ್ ನಲ್ಲಿ 'ಯುವರತ್ನ'ನ ಪವರ್ ಪ್ಲೇ ಶುರು


ಇನ್ನೊಂದೆಡೆಗೆ ದೆಹಲಿ ಕ್ಯಾಪಿಟಲ್ಸ್ 2013 ರಿಂದ 2018 ರವರೆಗೂ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ವಿಫಲವಾಗಿತ್ತು. ಆದಾಗ್ಯೂ, ಅದು 2019 ಮತ್ತು 2020 ರ ಋತುಗಳಲ್ಲಿ ಕ್ರಮವಾಗಿ ಮೂರನೆಯ ಮತ್ತು ಎರಡನೇ ಸ್ಥಾನದಲ್ಲಿ ಪಡೆದಿತ್ತು.ಈಗ ದೆಹಲಿ ತಂಡವು 10 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಈ ಋತುವಿನಲ್ಲಿ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿದೆ.


ಇದನ್ನೂ ಓದಿ: Malaika Arora: ಗೋಡೆಯ ಮೇಲೆ ನಟಿಯ ಯೋಗ ಕಂಡು ಹುಬ್ಬೇರಿಸಿದ ನೆಟ್ಟಿಗರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.