ಐಪಿಎಲ್‌ 15ನೇ ಆವೃತ್ತಿಯು ಯಶಸ್ವಿಯಾಗಿ ನಡೆಯುತ್ತಿದ್ದು ಅನೇಕ ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಹಿಂದೆ ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌ ಸೇರಿ ಅನೇಕರ ಹೆಸರು ಐಪಿಎಲ್‌ ಸಾಧಕರ ಪಟ್ಟಿಗೆ ಸೇರಿದೆ. ಅಂತೆಯೇ ರಾಜಸ್ತಾನ್ ರಾಯಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಹ ಐಪಿಎಲ್‌ ಇತಿಹಾಸದಲ್ಲಿ 150 ವಿಕೆಟ್‌ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಕೇನ್ಸ್‌ ಚಲನಚಿತ್ರೋತ್ಸವ: ತೀರ್ಪುಗಾರರಾಗಿ ಭಾರತ ಪ್ರತಿನಿಧಿಸಲಿರುವ ದೀಪಿಕಾ ಪಡುಕೋಣೆ


ಕಳೆದ ದಿನ (ಏಪ್ರಿಲ್‌ 26) ರಾಜಸ್ಥಾನ ರಾಯಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವಿನ ಪಂದ್ಯದಲ್ಲಿ ರಾಜಸ್ಥಾನ ತಂಡ ಗೆಲುವು ಸಾಧಿಸಿತ್ತು. ಈ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಆರ್‌. ಅಶ್ವಿನ್‌ ಐಪಿಎಲ್‌ ಇತಿಹಾಸದಲ್ಲಿ 150 ವಿಕೆಟ್‌ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ರಾಜಸ್ಥಾನ ರಾಯಲ್ಸ್‌ ನೀಡಿದ 145 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಅಶ್ವಿನ್‌ ಭಾರೀ ಆಘಾತ ನೀಡಿದ್ದರು. ಆರ್‌ಸಿಬಿಯ ಬ್ಯಾಟ್ಸ್‌ಮ್ಯಾನ್‌ ರಜತ್ ಪಾಟೀದಾರ್‌ರನ್ನು ಬೌಲ್ಡ್‌  ಮಾಡುವ ಮೂಲಕ 150ನೇ ವಿಕೆಟ್‌ ಪಡೆದರು.  


ಅಶ್ವಿನ್ ಸಾಧನೆ: 
ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ಆರ್‌. ಅಶ್ವಿನ್ ಭಾಜನರಾಗಿದ್ದಾರೆ. ಈ ಹಿಂದೆ ಹರ್ಭಜನ್ ಸಿಂಗ್, ಭುವನೇಶ್ವರ್, ಅಮಿತ್‌ ಮಿಶ್ರಾ, ಯುಜುವೇಂದ್ರ ಚಾಹಲ್‌ ಸೇರಿ ಅನೇಕರು ವಿಕೆಟ್‌ ದಾಖಲೆಯನ್ನು ಬರೆದಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿಅಶ್ವಿನ್‌ಗೆ ನಾಲ್ಕನೇ ಲಭಿಸಿದೆ.


ಇದನ್ನು ಓದಿ: Kamala Harris: ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೊರೊನಾ


ಆರ್‌. ಅಶ್ವಿನ್ ಅವರು ಈಗಾಗಲೇ ಆಡಿರುವ 175 ಐಪಿಎಲ್ ಪಂದ್ಯಗಳಲ್ಲಿ 152 ವಿಕೆಟ್ ಪಡೆದಿದ್ದಾರೆ.34 ರನ್‌ಗೆ 4 ವಿಕೆಟ್‌ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್ ಆಗಿದೆ. 6.93 ಎಕಾನಮಿ ಹೊಂದಿರುವ ಅಶ್ವಿನ್ ಇದೇ ಮೊದಲ ಬಾರಿಗೆ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಗಾಗಿ ಆಡುತ್ತಿದ್ದಾರೆ. 


ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್:
ಅಮಿತ್ ಮಿಶ್ರಾ: 166
ಪಿಯೂಷ್ ಚಾವ್ಲಾ: 157 
ಯುಜವೇಂದ್ರ ಚಾಹಲ್: 157
ಆರ್. ಅಶ್ವಿನ್: 152
ಭುವನೇಶ್ವರ್ ಕುಮಾರ್: 151
ಹರ್ಭಜನ್ ಸಿಂಗ್ 150