ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೇಲೂ ಕೊರೊನಾ ಕರಿಛಾಯೆ ಬಿದ್ದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಶ್ವೇತಭವನದಿಂದ ಅಧಿಕೃತ ಮಾಹಿತಿ ಲಭಿಸಿದ್ದು,, ಉಪಾಧ್ಯಕ್ಷರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: Sundar Pichai: ಗೂಗಲ್ ದೈತ್ಯ ಸಿಇಒ ಸುಂದರ್ ಪಿಚೈ ಆಸ್ತಿ ಮೌಲ್ಯ ಎಷ್ಟು ಗೊತ್ತಾ?
ಏಪ್ರಿಲ್ 18ರಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಕೊನೆಯದಾಗಿ ಭೇಟಿಯಾಗಿದ್ದರು. ಇನ್ನು ಜಿಲ್ ಬೈಡೆನ್ ಸಹ ಹ್ಯಾರಿಸ್ ಜೊತೆ ನಿಕಟ ಸಂಪರ್ಕಕ್ಕೆ ಬಂದಿಲ್ಲ ಎಂದು ಕಮಲಾ ಹ್ಯಾರಿಸ್ ಅವರ ಮಾಧ್ಯಮ ಕಾರ್ಯದರ್ಶಿ ಕಿಸ್ಟನ್ ಅಲೆನ್ ತಿಳಿಸಿದ್ದಾರೆ.
ವೆಸ್ಟ್ ಕೋಸ್ಟ್‌ಗೆ ತೆರಳಿದ್ದ ಕಮಲಾ ಹ್ಯಾರಿಸ್ ಅವರು ಮರಳಿ ಬಂದಿದ್ದು, ಈ ಬಳಿಕ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಸದ್ಯ ಮನೆಯಲ್ಲೇ ಕ್ವಾರೆಂಟೈನ್ ಆಗಿರುವ ಅವರು ಚಿಕಿತ್ಸೆ ಪಡೆಯುವ ಜತೆಗೆ ಕಚೇರಿ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಇತಿಹಾಸದಲ್ಲಿ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾದ ಮೊದಲ ಕಪ್ಪು ಮಹಿಳೆಯಾಗಿದ್ದು ಮೊದಲ ಭಾರತೀಯ ಮೂಲದ ಅಮೆರಿಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹ್ಯಾರಿಸ್ ಓಕ್ಲ್ಯಾಂಡ್‌ನಲ್ಲಿ ಜನಿಸಿ, ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಬೆಳೆದವರು. ಅವರ ತಾಯಿ ಭಾರತ ಮೂಲದವರು ಮತ್ತು ತಂದೆ ಜಮೈಕಾದವರು.
ಇದನ್ನು ಓದಿ: ಹೊಂಬಾಳೆ ಫಿಲ್ಮ್ಸ್‌ನಿಂದ ಬಿಗ್ ಸರ್‌ಪ್ರೈಸ್.. ಬೆಳ್ಳಿ ಪರದೆಯಲ್ಲಿ ‘ಯುವ’ ಪರ್ವ ಆರಂಭ!
2017 ರಲ್ಲಿ, ಹ್ಯಾರಿಸ್ ಕ್ಯಾಲಿಫೋರ್ನಿಯಾದ ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಮೊದಲ ದಕ್ಷಿಣ ಏಷ್ಯಾದ-ಅಮೆರಿಕನ್ ಸೆನೆಟರ್ ಮತ್ತು ಇತಿಹಾಸದಲ್ಲಿ ಎರಡನೇ ಆಫ್ರಿಕನ್-ಅಮೆರಿಕನ್ ಮಹಿಳೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.