IPL 2024 ರಲ್ಲಿ ಈ ತಂಡಕ್ಕಾಗಿ ಆಡಲಿದ್ದಾರೆ ರಚಿನ್ ರವೀಂದ್ರ.. ಹೊಸ ಇತಿಹಾಸ ಬರೆಯೋದು ಫಿಕ್ಸ್!!
Rachin Ravindra Joins RCB In IPL 2024 : ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ RCB ತಂಡದಲ್ಲಿ ಆಡುವುದನ್ನು ನೋಡಲು ಕ್ರಿಕೆಟ್ ಫ್ಯಾನ್ಸ್ ಬಯಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ.
Rachin Ravindra Joins RCB In IPL 2024 : ವಿಶ್ವಕಪ್ ಬಳಿಕ ಕ್ರಿಕೆಟ್ ಅಭಿಮಾನಿಗಳ ಬಹುನೀರೀಕ್ಷಿತ ಐಪಿಎಲ್ 2024 ಆರಂಭವಾಗಲಿದೆ. ಐಪಿಎಲ್ ಅನ್ನು ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಎಂದು ಪರಿಗಣಿಸಲಾಗಿದೆ. ಭಾರತ ಸೇರಿದಂತೆ ವಿಶ್ವದ ಎಲ್ಲಾ ಕ್ರಿಕೆಟಿಗರು ಈ ಲೀಗ್‌ನಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬ ಕ್ರಿಕೆಟಿಗನು ಈ ಲೀಗ್‌ನಲ್ಲಿ ಆಡುವ ಕನಸು ಕಾಣುತ್ತಾನೆ. ಐಪಿಎಲ್ ಅನೇಕ ಆಟಗಾರರ ಅದೃಷ್ಟವನ್ನೇ ಬದಲಿಸಿದೆ.
ವಿಶ್ವಕಪ್ 2023 ರಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಅಲ್ಲದೇ ಈ ಬಾರಿ ಮೊಟ್ಟ ಮೊದಲ ಸಲ ಐಪಿಎಲ್ 2024 ಹರಾಜು ಪ್ರಕ್ರಿಯೆ ವಿದೇಶದಲ್ಲಿ ನಡೆಯುತ್ತಿದೆ. ಐಪಿಎಲ್ 2024 ಹರಾಜು ಪ್ರಕ್ರಿಯೆ ಸನಿಹವಾಗುತ್ತಿರುವ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ದೊರೆತಿದೆ.
ಇದನ್ನೂ ಓದಿ : ಇವರೇ ಟೀಮ್ ಇಂಡಿಯಾದ ಮುಂದಿನ ಹಾರ್ದಿಕ್ ಪಾಂಡ್ಯ.. ಭಾರತದ ಆಲ್ ರೌಂಡರ್ ಆಗಿ ಮಿಂಚ್ತಾರಾ ಈ ಯುವ ಆಟಗಾರ?
ರಚಿನ್ ರವೀಂದ್ರ ವಿಶ್ವಕಪ್‌ನಲ್ಲಿ ತಮ್ಮ ಆಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆದಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ RCB ತಂಡದಲ್ಲಿ ಆಡುವುದನ್ನು ನೋಡಲು ಕ್ರಿಕೆಟ್ ಫ್ಯಾನ್ಸ್ ಬಯಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ.
ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರಚಿನ್ ರವೀಂದ್ರ ಆಡುತ್ತಾರೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಐಪಿಎಲ್ ಹರಾಜಿನ ನಂತರವೇ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿದೆ. ಪ್ರಸ್ತುತ ರಚಿನ್ ರವೀಂದ್ರ ಅವರ ಟ್ವೀಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಟ್ವೀಟ್ ಮೂಲಕ ತಾವು ಐಪಿಎಲ್ 2024 ರಲ್ಲಿ ಆರ್‌ಸಿಬಿ ಭಾಗವಾಗಲಿದ್ದಾರೆ ಎಂದು ರಚಿನ್ ಸುಳಿವು ನೀಡಿದ್ದಾರೆ ಎನ್ನಲಾಗ್ತಿದೆ.
IPL 2024 : CSK ಫ್ಯಾನ್ಸ್ ಗೆ ಬಿಗ್ ಶಾಕ್.. ಹರಾಜಿಗೂ ಮುನ್ನವೇ ಈ 3 ಆಟಗಾರರು ತಂಡದಿಂದ ಔಟ್!?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.