IPL 2024 : CSK ಫ್ಯಾನ್ಸ್‌ ಗೆ ಬಿಗ್‌ ಶಾಕ್..‌ ಹರಾಜಿಗೂ ಮುನ್ನವೇ ಈ 3 ಆಟಗಾರರು ತಂಡದಿಂದ ಔಟ್!?

IPL 2024 Auction : ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK), ಐಪಿಎಲ್ 2024 ರ ಹರಾಜಿಗೂ ಮುನ್ನವೇ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. 

Written by - Chetana Devarmani | Last Updated : Nov 9, 2023, 03:31 PM IST
  • ಐಪಿಎಲ್ 2024 ರ ಹರಾಜು ಪ್ರಕ್ರಿಯೆ
  • ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್
  • ಈ 3 ಆಟಗಾರರು ತಂಡದಿಂದ ಔಟ್!?
IPL 2024 : CSK ಫ್ಯಾನ್ಸ್‌ ಗೆ ಬಿಗ್‌ ಶಾಕ್..‌ ಹರಾಜಿಗೂ ಮುನ್ನವೇ ಈ 3 ಆಟಗಾರರು ತಂಡದಿಂದ ಔಟ್!? title=
CSK

ಚೆನ್ನೈ ಸೂಪರ್ ಕಿಂಗ್ಸ್ (CSK) : IPL 2024 ರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಐಪಿಎಲ್‌ ನ ಎಲ್ಲ ತಂಡಗಳು ತಾವು ಉಳಿಸಿಕೊಳ್ಳಲು ಬಯಸುವ ಆಟಗಾರರು ಮತ್ತು ಟೀಮ್‌ನಿಂದ ಕೈ ಬಿಡುವ ಆಟಗಾರರ ಪಟ್ಟಿಯನ್ನು ನವೆಂಬರ್ 26 ರ ಒಳಗೆ ಬಿಡುಗಡೆ ಮಾಡಬೇಕಿದೆ. ಇದೇ ಮೊದಲ ಬಾರಿಗೆ ಐಪಿಎಲ್‌ ಹರಾಜು ಪ್ರಕ್ರಿಯೆ ವಿದೇಶದಲ್ಲಿ ನಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. 

ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK), ಐಪಿಎಲ್ 2024 ರ ಹರಾಜಿಗೂ ಮುನ್ನವೇ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. 2022 ರ ಐಪಿಎಲ್‌ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲಿನ ಪಾಠದ ಬಳಿಕ 2023 ರಲ್ಲಿ ಹಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದು, ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿತು. 

ಇದನ್ನೂ ಓದಿ : ಬಲು ವಿಶೇಷ 2023ರ ವಿಶ್ವಕಪ್ : 12 ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಈ ಪವಾಡ !

ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡುಗೇರಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದೀಗ ಐಪಿಎಲ್ 2024 ರ ಹರಾಜಿಗೂ ಮುನ್ನ ಚೆನ್ನೈ ತಂಡ ಕೆಲವು ಆಟಗಾರರನ್ನು ತಂಡದಿಂದ ಕೈ ಬಿಡಲು ನಿರ್ಧರಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಮೂವರು ಆಟಗಾರರನ್ನು ಟೀಮ್‌ ನಿಂದ ಕೈ ಬಿಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. 

ಬೆನ್ ಸ್ಟೋಕ್ಸ್ : ಇಂಗ್ಲೆಂಡ್‌ನ ಸ್ಟಾರ್‌ ಆಲ್‌ ರೌಂಡರ್‌ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಕೈ ಬಿಡುವ ನಿರೀಕ್ಷೆಯಿದೆ. ಕಳೆದ ವರ್ಷ 2023ರ ಐಪಿಎಲ್ ಹರಾಜಿನಲ್ಲಿ 16.25 ಕೋಟಿಗೆ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ತಂಡ ಖರೀದಿಸಿತ್ತು. ಬ್ರಾವೋ ಬಳಿಕ ಸಿಎಸ್‌ಕೆ ತಂಡದಲ್ಲಿ ಆಲ್‌ ರೌಂಡರ್‌ ಸ್ಥಾನವನ್ನು ತುಂಬಲು ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಿತ್ತು. ಆದರೆ ಕಳೆದ ಬಾರಿ ಐಪಿಎಲ್‌ನಲ್ಲಿ ಸ್ಟೋಕ್ಸ್ ಗಾಯದ ಕಾರಣ ಹೆಚ್ಚಿನ ಪಂದ್ಯಗಳನ್ನು ಆಡಿರಲಿಲ್ಲ. ಈ ಬಾರಿಯೂ ಬೆನ್ ಸ್ಟೋಕ್ಸ್ ಗಾಯದ ಸಮಸ್ಯೆ ಎದುರಿಸುತ್ತಿದ್ದು, ವಿಶ್ವಕಪ್ ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ಹೀಗಾಗಿ ಐಪಿಎಲ್ 2024 ರಲ್ಲಿ ಅವರು ಭಾಗವಹಿಸುವುದು ಅನುಮಾನವಾಗಿದೆ.  

ಇದನ್ನೂ ಓದಿ : Joe Root: ಮಿಡ್ ಲೆಗ್ ಬಾಲ್.. ವಿಚಿತ್ರ ರೀತಿಯಲ್ಲಿ ಜೋ ರೂಟ್ ಕ್ಲೀನ್‌ಬೌಲ್ಡ್

ಡ್ವೈನ್ ಪ್ರಿಟೋರಿಯಸ್ : ಚೆನ್ನೈ ಸೂಪರ್ ಕಿಂಗ್ಸ್‌ ತಂಡ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ ರೌಂಡರ್ ಡ್ವೇನ್ ಪ್ರಿಟೋರಿಯಸ್ ಅವರನ್ನು 2022 ರ ಮೆಗಾ ಹರಾಜಿನಲ್ಲಿ 50 ಲಕ್ಷ ರೂಪಾಯಿಗೆ ಖರೀದಿಸಿತ್ತು. ಈ ಬಾರಿ ಸಿಎಸ್ ಕೆ ಅವರನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಬಿಡುಗಡೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.  

ಆಕಾಶ್ ಸಿಂಗ್ : ವೇಗಿ ಮುಖೇಶ್ ಚೌಧರಿ ಬದಲಿಗೆ ಚೆನ್ನೈ ತಂಡದಲ್ಲಿ ಸ್ಥಾನ ಪಡೆದಿದ್ದ, ಯುವ ಆಟಗಾರ ಆಕಾಶ್ ಸಿಂಗ್ ಅವರನ್ನು ಈ ಬಾರಿ ಹರಾಜಿಗೂ ಮುನ್ನವೇ ತಂಡದಿಂದ ಕೈ ಬಿಡಲು ಸಿಎಸ್‌ಕೆ ನಿರ್ಧರಿಸಿದೆ ಎಂದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಮುಖೇಶ್ ಚೌಧರಿ ಮರಳಲಿದ್ದು, ಹೀಗಾಗಿ ಆಕಾಶ್ ಸಿಂಗ್ ಅವರನ್ನು ಕೈ ಬಿಡಬಹುದು ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News