Athiya Shetty-KL Rahul Wedding Date:  ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿ ಶೀಘ್ರದಲ್ಲೇ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಕೈ ಹಿಡಿಯಲಿದ್ದಾರೆ. ವರದಿಗಳ ಪ್ರಕಾರ, ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ಮದುವೆಯ ದಿನಾಂಕವನ್ನು ಸಹ ನಿಗದಿಪಡಿಸಲಾಗಿದೆ. ಇಬ್ಬರೂ ಜನವರಿ 23 ರಂದು ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.  ಅಥಿಯಾ ಮತ್ತು ಕೆಎಲ್ ರಾಹುಲ್ ಖಂಡಾಲಾದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಗಳು ಮಾಹಿತಿ ನೀಡಿವೆ. ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ವಿವಾಹ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Pakistan vs New Zealand: ಅಂಪೈರ್ ಕಾಲಿಗೆ ತಗುಲಿದ ಪಾಕ್ ಫೀಲ್ಡರ್ ಎಸೆದ ಬಾಲ್: ಕೋಪಗೊಂಡ ಅಲೀಮ್ ದಾರ್ ಮಾಡಿದ್ದೇನು ನೋಡಿ


ವರದಿಗಳ ಪ್ರಕಾರ ಸುನೀಲ್ ಶೆಟ್ಟಿಯವರ ಖಂಡಾಲಾ ಮನೆಯಲ್ಲಿಯೇ ಮಗಳು ಅಥಿಯಾ ಶೆಟ್ಟಿ- ಕೆ ಎಲ್ ರಾಹುಲ್ ಮದುವೆ ನಡೆಯಲಿದೆ. ಇವರ ವಿವಾಹ ಕಾರ್ಯಕ್ರಮಗಳು, ಸಂಗೀತ, ಮೆಹೆಂದಿ ಮತ್ತು ಅರಶಿನ ಶಾಸ್ತ್ರಗಳನ್ನು ಒಳಗೊಂಡಂತೆ ಮೂರು ದಿನಗಳ ಮುಂಚಿತವಾಗಿ ಕಾರ್ಯಕ್ರಮ ಪ್ರಾರಂಭವಾಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಕೆಎಲ್ ರಾಹುಲ್-ಅಥಿಯಾ ವಿವಾಹ ಕಾರ್ಯಕ್ರಮಗಳು ಜನವರಿ 21-23 ರವರೆಗೆ ನಡೆಯಲಿದೆ. ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಮತ್ತು ಅವರ ಕುಟುಂಬ ಸದಸ್ಯರು ಯಾರೂ ಮದುವೆಯ ಸುದ್ದಿ ಮತ್ತು ದಿನಾಂಕದ ಬಗ್ಗೆ ಇಲ್ಲಿವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ.


ಇದನ್ನೂ ಓದಿ: IND vs SL: ಟೀಂ ಇಂಡಿಯಾಗೆ ಮಾರಕವಾಗಬಹುದು ಲಂಕಾದ ಈ ಆಟಗಾರ! ಟ್ರೋಫಿ ಕನಸಿಗೂ ಮುಳ್ಳಾಗಬಹುದು ಎಚ್ಚರ


ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮವನ್ನು ಖಾಸಗಿಯಾಗಿ ಆಚರಣೆ ಮಾಡಲಿದ್ದಾರೆ. ಮತ್ತೊಂದೆಡೆ, ವರದಿಗಳ ಪ್ರಕಾರ, ಕ್ರಿಕೆಟ್ ಪ್ರಪಂಚದ ಲೆಜೆಂಡ್ಸ್ ಮತ್ತು ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಜೋಡಿಯ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಲ್ಮಾನ್ ಖಾನ್, ಜಾಕಿ ಶ್ರಾಫ್, ಅಕ್ಷಯ್ ಕುಮಾರ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಯಂತಹ ಸೆಲೆಬ್ರಿಟಿಗಳು ನವಜೋಡಿಯ ಅತಿಥಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.