Rahul Dravid: ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್‌ನಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಕೇವಲ ಎದುರಾಳಿಯನ್ನು ಸೋಲಿಸಲು ಮಾತ್ರ ಮೈದಾನಕ್ಕೆ ಇಳಿಯಲಿಲ್ಲ. ಆದರೆ ತೆರೆಮರೆಯಲ್ಲಿ ಉಳಿದ ಕೆಲಸಗಳನ್ನು ಮುನ್ನಡೆಸಿದ್ದು ದ್ರಾವಿಡ್. ಯೋಜನೆ ಮತ್ತು ತಂಡ ಕಟ್ಟುವ ವಿಚಾರದಲ್ಲಿ ಅವರ ನಿರ್ಧಾರಗಳು ಟೀಂ ಇಂಡಿಯಾವನ್ನು ಚಾಂಪಿಯನ್ಸ್‌ ಆಗಿ ಹೊರ ಹೊಮ್ಮುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

2007 ರಲ್ಲಿ, ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ODI ವಿಶ್ವಕಪ್ ಬೇಟೆಗಾಗಿ ವೆಸ್ಟ್ ಇಂಡೀಸ್‌ಗೆ ಬಂದಿಳಿದರು. ಆದರೆ ಆ ವೇಳೆಗೆ ಭೀಕರ ಸೋಲು ಎದುರಾಗಿತ್ತು. ತಂಡದಲ್ಲಿ ಖ್ಯಾತ ಕ್ರಿಕೆಟಿಗರೇ ತುಂಬಿದ್ದರೂ ಟೀಂ ಇಂಡಿಯಾ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸಿತು. 17 ವರ್ಷಗಳ ನಂತರ, ದ್ರಾವಿಡ್ ಮತ್ತೊಮ್ಮೆ ವಿಶ್ವಕಪ್‌ಗಾಗಿ ಕೆರಿಬಿಯನ್ ದ್ವೀಪಕ್ಕೆ ಆಟಗಾರರಾಗಿ ಅಲ್ಲ ಟೀಂ ಇಂಡಿಯಾದ ಕೋಚ್ ಆಗಿ ಎಂಟ್ರಿ ಕೊಟ್ಟರು. 2007ರ ಕಹಿ ನೆನಪುಗಳನ್ನು ಅಳಿಸಿ, ಕಳೆದು ಹೋದ ಜಾಗದಲ್ಲೆ ಯಶಸ್ಸನ್ನು ಹುಡುಕಿ ಭಾರತ ತಂಡ ಇತಿಹಾಸ ಸೃಷ್ಟಿಸಲು ನೆರವಾದರು.


ಈ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ದ್ರಾವಿಡ್ ಭಾವುಕರಾದರು. ಸಾಮಾನ್ಯವಾಗಿ ದ್ರಾವಿಡ್ ತನ್ನ ಭಾವನೆಗಳನ್ನು ನಿಯಂತ್ರಿಸುವ ವ್ಯಕ್ತಿ. ಆದರೆ ತರಬೇತುದಾರನಾಗಿ ತನ್ನ ಅಂತಿಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಬಗ್ಗೆ ದ್ರಾವಿಡ್‌ ಭಾವುಕರಾದರು, ಇದೇ ವೇಳೆ ಮಾತನಾಡಿದ ದ್ರಾವಿಡ್, ಈಗ ನಿರುದ್ಯೋಗಿಯಾಗಿದ್ದು, ಉದ್ಯೋಗಾವಕಾಶಗಳಿದ್ದರೆ ಹೇಳಿ ಎಂದು ತಮಾಷೆ ಮಾಡಿದ್ದಾರೆ.


ಇದನ್ನೂ ಓದಿ: RCB ತಂಡಕ್ಕೆ ದಿನೇಶ್ ಕಾರ್ತಿಕ್ ರೀ ಎಂಟ್ರಿ: ಬ್ಯಾಟಿಂಗ್ ಕೋಚ್‌ ಮತ್ತು ಮೆಂಟರ್ ಆಗಿ ನೇಮಕ


ನವೆಂಬರ್ 2021 ರಲ್ಲಿ, ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಕಳೆದ ಏಕದಿನ ವಿಶ್ವಕಪ್‌ನಲ್ಲಿಯೇ ದ್ರಾವಿಡ್ ಅಧಿಕಾರಾವಧಿ ಕೊನೆಗೊಂಡಿತು. ಆದರೆ, ಈ ಬಾರಿಯ ಟಿ20 ವಿಶ್ವಕಪ್‌ವರೆಗೆ ಕೋಚ್‌ ಆಗಿರುವಂತೆ ಬಿಸಿಸಿಐ ದ್ರಾವಿಡ್‌ ಅವರ ಬಳಿ ಮನವಿ ಮಡಿಕೊಂಡಿತ್ತು. ಅದರಂತೆ ದ್ರಾವಿಡ್‌ ಕೂಡ ಬಿಸಿಸಿಐ ಕೋರಿಕೆಗೆ ಮಣಿದು ಟೀಂ ಇಂಡಿಯಾದ ಕೋಚ್‌ ಆಗಿ ಮುಂದುವರೆಯುವ ನಿರ್ಧಾರ ಅಡಿದ್ದರು. ಇದೀಗ ಭಾರತ ತಂಡ ಪಂದ್ಯ ಗೆದ್ದಾಗಿದೆ, ರಾಹುಲ್‌ ದ್ರಾವಿಡ್‌ ಅವರ ಅಧಿಕಾರದ ಅವದಿ ಮುಗಿದಿದ್ದು, ಈ ಕುರಿತು ದ್ರಾವಿಡ್‌ ಮಾತನಾಡಿದ್ದಾರೆ 


"ನನ್ನ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಕಠಿಣ ಪರಿಸ್ಥಿತಿಯಲ್ಲಿ ಕಠಿಣವಾಗಿ ಹೋರಾಡಿದ ಈ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಆಟಗಾರನಾಗಿ ಎಷ್ಟೇ ಪ್ರಯತ್ನಿಸಿದರೂ ಟ್ರೋಫಿ ಪಡೆಯಲು ಸಾಧ್ಯವಾಗಲಿಲ್ಲ, 2007 ರಲ್ಲಿನ ವೈಫಲ್ಯಕ್ಕೆ ಇದು ಪರಿಹಾರ ಎಂದು ನಾನು ಭಾವಿಸುವುದಿಲ್ಲ. ನಾನು ಕೋಚ್ ಆಗಿ ನನ್ನ ಕೆಲಸವನ್ನು ಮಾಡಿದ್ದೇನೆ. ಹುಡುಗರಿಗೆ ಮಾರ್ಗದರ್ಶನ ನೀಡಿದ್ದೇನೆ. ಟೀಮ್ ಇಂಡಿಯಾ ಜೊತೆಗಿನ ಪ್ರಯಾಣ ಅದ್ಭುತವಾಗಿದೆ. ಈ ಯಶಸ್ಸು ಹಲವು ವರ್ಷಗಳ ಪರಿಶ್ರಮದ ನಂತರ ಜೀವಮಾನದ ಸಾಧನೆಯಾಗಿದೆ. ಮುಂದಿನ ವಾರದಿಂದ ನಿರುದ್ಯೋಗಿಯಾಗುತ್ತಾನೆ ಕೂಡ, ಏನಾದರೂ ಆಫರ್‌ಗಳಿದ್ದರೆ ಹೇಳಿ,’’ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.