India vs Pakistan: ಒಂದು ವರ್ಷದ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು (ಆಗಸ್ಟ್ 28) ಏಷ್ಯಾಕಪ್ ಆಡಲಿವೆ. 2021ರ ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಕೊನೆಯ ಪಂದ್ಯವನ್ನು ಆಡಿದ್ದವು. ಅಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಗೆದ್ದಿತ್ತು. ಈ ಬಾರಿ ಆ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.


COMMERCIAL BREAK
SCROLL TO CONTINUE READING

ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ರೋಚಕತೆ ಉತ್ತುಂಗದಲ್ಲಿದ್ದು, ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲಿದೆ. ಇನ್ನು ಈ ಪಂದ್ಯದ ಮೇಲೆ ಮಳೆರಾಯನ ದೃಷ್ಟಿ ಬೀಳುತ್ತಾ ಎಂಬ ಪ್ರಶ್ನೆ ಮೂಡಿತ್ತು. ಅದಕ್ಕೆ ಉತ್ತರ ಇಲ್ಲ ಎಂಬುದಾಗಿದೆ.  ಬಲವಾದ ಗಾಳಿ ಬೀಸಬಹುದು. ಪಂದ್ಯದ ದಿನದಂದು ತಾಪಮಾನವು 40 ರಿಂದ 31 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ. 


ಇದನ್ನೂ ಓದಿ: Ind vs Pak ಪಂದ್ಯದಲ್ಲಿ ಕ್ಯಾಪ್ಟನ್ ಶರ್ಮಾಗೆ ಅಸ್ತ್ರವಾಗಲಿದ್ದಾರೆ ಈ 3 ಬೌಲರ್‌ಗಳು! 


ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಸೋಲು ಮತ್ತು ಗೆಲುವಿನಲ್ಲಿ ಇಬ್ಬನಿ ಅಂಶ ಪ್ರಮುಖ ಪಾತ್ರ ವಹಿಸುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ ಇಬ್ಬನಿ ಬೀಳಲಿದ್ದು, ಇದರಿಂದ ಬ್ಯಾಟಿಂಗ್‌ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಟಾಸ್ ಗೆದ್ದ ತಂಡವು ಯಾವಾಗಲೂ ಬೌಲಿಂಗ್ ಆಯ್ಕೆ ಮಾಡಲು ಬಯಸುತ್ತದೆ. ದುಬೈನ ಪಿಚ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಈ ಪಿಚ್‌ನಲ್ಲಿ 170ರವರೆಗಿನ ಸ್ಕೋರ್‌ಗಳನ್ನು ಸುಲಭವಾಗಿ ಚೇಸ್ ಮಾಡಬಹುದು.


ಭಾರತದ ಮೇಲುಗೈ:


ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಗೆಲ್ಲುವ ಭಾರೀ ನಿರೀಕ್ಷೆ ಮೂಡಿಸಿದೆ. ಭಾರತ ಬಲಿಷ್ಠ ಬೌಲಿಂಗ್ ದಾಳಿಯನ್ನು ಹೊಂದಿದೆ. ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ 14 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 8 ರಲ್ಲಿ ಗೆದ್ದಿದೆ ಮತ್ತು ಪಾಕಿಸ್ತಾನ ಕೇವಲ 5 ಪಂದ್ಯಗಳನ್ನು ಗೆದ್ದಿದೆ. 


ಇದನ್ನೂ ಓದಿ: Team India : ಪಾಕ್​ಗೆ ಶತ್ರುವಾಗಿ ಕಾಡಲಿದ್ದಾರೆ ಟೀಂ ಇಂಡಿಯಾದ ಈ 3 ಬ್ಯಾಟ್ಸ್‌ಮನ್‌ಗಳು!


ಭಾರತ ತಂಡ ಏಷ್ಯಾಕಪ್ ಪ್ರಶಸ್ತಿಯನ್ನು ಅತಿ ಹೆಚ್ಚು ಬಾರಿ ಗೆದ್ದಿದೆ. ಇನ್ನು ಶ್ರೀಲಂಕಾ 5 ಬಾರಿ ಏಷ್ಯಾಕಪ್ ಗೆದ್ದರೆ,  ಪಾಕಿಸ್ತಾನ ತಂಡವು 2 ಬಾರಿ ಮಾತ್ರ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಬಾರಿಯ ಏಷ್ಯಾಕಪ್ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದೆ. ಟೀಮ್ ಇಂಡಿಯಾ ಅನೇಕ ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿದ್ದು, ಸರಣಿಯನ್ನು ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.