ಟೀಂ ಇಂಡಿಯಾ ತನ್ನ 2022ರ ಏಷ್ಯಾ ಕಪ್ ಅಭಿಯಾನವನ್ನು ಇಂದಿನಿಂದ ಆರಂಭಿಸಲಿದ್ದು, ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದಕ್ಕೆ ಸಾಕ್ಷಿಯಾಗಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಈ ಅಭಿಯಾನ ಪ್ರಾರಂಭಿಸಲಿದೆ. ಭಾರತಕ್ಕೆ ಇದು 2021 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಒಂದು ಅವಕಾಶವಾಗಿದೆ.
ಇದನ್ನೂ ಓದಿ: Asia Cup 2022: ಭಾರತ-ಪಾಕ್ ಕ್ರಿಕೆಟ್ ಪಂದ್ಯವನ್ನು ನೀವು ಉಚಿತವಾಗಿ ನೋಡಬಹುದು: ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ
ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾವು ಪಾಕಿಸ್ತಾನ ತಂಡವನ್ನು ಬಗ್ಗುಬಡಿಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನು ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ. ಆದರೆ ಇತರ ಯುವ ಮತ್ತು ಉದಯೋನ್ಮುಖ ವೇಗಿಗಳಿಗೆ ಭಾರತದ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಪ್ರಮುಖ ಪಾತ್ರ ವಹಿಸುವ ಅವಕಾಶವನ್ನು ನೀಡುತ್ತಿರುವುದು ಗಮನಿಸಬೇಕಾದ ಸಂಗತಿ.
ಇನ್ನು ತಂಡದ ನಿರ್ವಹಣೆಗೆ ದೊಡ್ಡ ಸಂದಿಗ್ಧತೆ ಬ್ಯಾಟಿಂಗ್ ಲೈನಪ್ ಆಗಿರುತ್ತದೆ. ತಂಡದಲ್ಲಿ ಇಬ್ಬರೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿದ್ದರೂ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವೆ ಆಯ್ಕೆ ಮಾಡಬೇಕಾಗುತ್ತದೆ.
ಭಾರತ ಸಂಭಾವ್ಯ ಆಟಗಾರರ ಪಟ್ಟಿ:
- ರೋಹಿತ್ ಶರ್ಮಾ (ನಾಯಕ): ಟೀಂ ಇಂಡಿಯಾ ನಾಯಕ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ (ಟಿ20ಐ) ಎರಡನೇ ಅತ್ಯುತ್ತಮ ಸ್ಕೋರರ್ ಆಗಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಾರ್ಟಿನ್ ಗಪ್ಟಿಲ್‌ಗಿಂತ ಕೇವಲ 10 ರನ್ ಹಿಂದೆ ಉಳಿದಿದ್ದಾರೆ.
- ಕೆಎಲ್ ರಾಹುಲ್: ಜಿಂಬಾಬ್ವೆ ODI ಸರಣಿಯಲ್ಲಿ ಜಯಿಸಿದ ಬಳಿಕ ಮತ್ತೆ ಕಣಕ್ಕಿಳಿಯಲಿರುವ ಕೆ ಎಲ್ ರಾಹುಲ್, ಪಾಕಿಸ್ತಾನದ ವಿರುದ್ಧ ಅಬ್ಬರಿಸಲಿದ್ದಾರೆ.
- ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಮಾಜಿ ನಾಯಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತು ಟಿ 20 ಎರಡರಲ್ಲೂ ಆಟವಾಡುತ್ತಿದ್ದಾರೆ. ಸದ್ಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸುವ ಎಲ್ಲಾ ನಿರೀಕ್ಷೆಯಿದೆ.
- ಸೂರ್ಯಕುಮಾರ್ ಯಾದವ್: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ ಭಾರತದ ಶಕ್ತಿಯಾಗಿ ಉಳಿದಿದ್ದಾರೆ. ಸೂರ್ಯಕುಮಾರ್ ಯಾದವ್ 360 ಡಿಗ್ರಿ ವ್ಯಾಪ್ತಿಯಲ್ಲಿ ಬ್ಯಾಟ್ ಬೀಸುವ ಪರಿಣತಿ ಹೊಂದಿದ್ದು, ಪಾಕಿಸ್ತಾನದ ಬೌಲರ್‌ಗಳಿಗೆ ದೊಡ್ಡ ಬೆದರಿಕೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
- ರಿಷಭ್ ಪಂತ್: ವೆಸ್ಟ್ ಇಂಡೀಸ್ ವಿರುದ್ಧದ T20I ಸರಣಿಯಲ್ಲಿ ರಿಷಬ್ ಅಬ್ಬರಿಸಿದ್ದು ಎಲ್ಲರಿಗೂ ತಿಳಿದಿದೆ. ಇನ್ನು ತಂಡದಲ್ಲಿ ದಿನೇಶ್ ಕಾರ್ತಿಕ್ ಅವರ ಉಪಸ್ಥಿತಿಯ ಹೊರತಾಗಿಯೂ ಪಂತ್ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಉಳಿಯುವ ಸಾಧ್ಯತೆಯಿದೆ.
- ಹಾರ್ದಿಕ್ ಪಾಂಡ್ಯ: ಇತ್ತೀಚಿನ ವರ್ಷಗಳಲ್ಲಿ ಆಲ್ ರೌಂಡರ್ ಹೆಚ್ಚು ಪ್ರಬುದ್ಧ ಮತ್ತು ಉತ್ತಮ ಆಟಗಾರನಾಗಿ ವಿಕಸನಗೊಂಡಿದ್ದಾರೆ. ಬಹುಮುಖ ಬ್ಯಾಟರ್ ಆಗುವುದರ ಜೊತೆಗೆ, ಹಾರ್ದಿಕ್ ಅವರು ಅಗತ್ಯವಿದ್ದಾಗ ಅವರ ಕೋಟಾದ ಓವರ್‌ಗಳಲ್ಲಿ ಬೌಲ್ ಮಾಡಲು ಸಾಕಷ್ಟು ಫಿಟ್ ಆಗಿದ್ದಾರೆ ಮತ್ತು ಅದು ಅವರನ್ನು ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ.
- ರವೀಂದ್ರ ಜಡೇಜಾ: ಆಲ್‌ರೌಂಡ್ ಸಾಮರ್ಥ್ಯ ಮತ್ತು ಫಾರ್ಮ್‌ನ ಸೌಜನ್ಯದಿಂದ ಭಾರತದ ಪ್ಲೇಯಿಂಗ್ XI ನಲ್ಲಿ ಇದ್ದಾರೆ.ಜಡೇಜಾ ತಂಡಕ್ಕೆ ಕೆಲವು ನಿರ್ಣಾಯಕ ಪ್ರಗತಿಯನ್ನು ಒದಗಿಸುವುದರ ಜೊತೆಗೆ ಸ್ಲಾಗ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟರ್ ಆಗಿಯೂ ಆಡುತ್ತಾರೆ.
- ರವಿಚಂದ್ರನ್ ಅಶ್ವಿನ್: ಆಫ್-ಸ್ಪಿನ್ನರ್ ವೈಟ್-ಬಾಲ್ ತಂಡದಲ್ಲಿ ತನ್ನ ಸ್ಥಾನಕ್ಕಾಗಿ ಹೋರಾಟವನ್ನು ಮುಂದುವರೆಸಿದ್ದಾರೆ. ಅಕ್ಟೋಬರ್‌ನಲ್ಲಿ ಟಿ 20 ವಿಶ್ವಕಪ್ ನಡೆಯಲಿದೆ ಎಂದು ಪರಿಗಣಿಸಿ ಏಷ್ಯಾ ಕಪ್‌ನಲ್ಲಿ ಏನಾದರೂ ಸಾಧನೆ ಮಾಡಲು ಅವರು ಉತ್ಸುಕರಾಗಿದ್ದಾರೆ.
- ಯುಜ್ವೇಂದ್ರ ಚಹಾಲ್: ಲೆಗ್ ಸ್ಪಿನ್ನರ್ ಆತ್ಮವಿಶ್ವಾಸದಲ್ಲಿ ಬೆಳೆಯುತ್ತಲೇ ಇದ್ದಾರೆ. ಚಹಾಲ್ ಭಾರತದ ವಿಶ್ವಾಸಾರ್ಹ ವಿಕೆಟ್ ಟೇಕರ್ ಆಗಿದ್ದಾರೆ, ಅವರು ಅತ್ಯುತ್ತಮ ಬ್ಯಾಟರ್‌ಗಳನ್ನು ಸಹ ಸುಲಭವಾಗಿ ಔಟ್ ಮಾಡುತ್ತಾರೆ.
- ಭುವನೇಶ್ವರ್ ಕುಮಾರ್: ಸ್ವಿಂಗ್ ಬಲಗೈ ವೇಗಿಯಾಗಿರುವ ಭುವನೇಶ್ವರ್ ಟೀಂ ಇಂಡಿಯಾದ ದೊಡ್ಡ ಶಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಎಂತಹದ್ದೇ ಸಂದರ್ಭದಲ್ಲಿ ವಿಕೆಟ್ ಕಬಳಿಸುವ ಚಾಣಕ್ಷತನ ಇವರಿಗಿದೆ.
- ಅರ್ಷದೀಪ್ ಸಿಂಗ್: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಹೊಸಬ. ಆದರೆ ಅವನು ಹೊಂದಿರುವ ಆಟದ ಬಗೆಗಿನ ಶಾಂತತೆ ಮತ್ತು ತಿಳುವಳಿಕೆ, ಎಲ್ಲವೂ ಅವನನ್ನು ಇತರ ಯುವಕರಿಗಿಂತ ಭಿನ್ನವಾಗಿ ವರ್ಗವಾಗಿಸುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಯಾವರೀತಿ ಆಟ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: Neeraj Chopra: ಮತ್ತೊಂದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಡೈಮಂಡ್ ಲೀಗ್ ಚಾಂಪಿಯನ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ