ರಣಜಿ ಕ್ರಿಕೆಟ್ ಮಾಜಿ ಆಟಗಾರ ನಿಧನ!
40 ವರ್ಷ ವಯಸ್ಸಿನ ಬಲಗೈ ಮಧ್ಯಮ ವೇಗಿ ರಾಜೇಶ್ ವರ್ಮಾ ನಿಧನದ ಬಗ್ಗೆ ಮುಂಬೈ ತಂಡದ ಮಾಜಿ ಸಹ ಆಟಗಾರ ಭವಿನ್ ಠಕ್ಕರ್ ಖಚಿತಪಡಿಸಿದ್ದಾರೆ.
ಮುಂಬೈ: ರಣಜಿ ಟ್ರೋಫಿ ವಿಜೇತ ಮುಂಬೈ ತಂಡದ ಮಾಜಿ ಆಟಗಾರ ರಾಜೇಶ್ ವರ್ಮಾ ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. 2006-2007ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ವಿಜೇತವಾಗಿತ್ತು. ಈ ಪಂದ್ಯದಲ್ಲಿ ರಾಜೇಶ್ ವರ್ಮಾ ಉತ್ತಮ ಪ್ರದರ್ಶನ ನೀಡಿದ್ದರು.
ಇದನ್ನು ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಸಿಹಿ ಸುದ್ದಿ: IPL ನೋಡಲು ಎಲ್ಲರಿಗೂ ಎಂಟ್ರಿ
40 ವರ್ಷ ವಯಸ್ಸಿನ ಬಲಗೈ ಮಧ್ಯಮ ವೇಗಿ ರಾಜೇಶ್ ವರ್ಮಾ ನಿಧನದ ಬಗ್ಗೆ ಮುಂಬೈ ತಂಡದ ಮಾಜಿ ಸಹ ಆಟಗಾರ ಭವಿನ್ ಠಕ್ಕರ್ ಖಚಿತಪಡಿಸಿದ್ದಾರೆ.
ರಾಜೇಶ್ ಕ್ರಿಕೆಟ್ ಜರ್ನಿ:
ರಾಜೇಶ್ ವರ್ಮಾ ಅವರು ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 2006-07ನೇ ಸಾಲಿನಲ್ಲಿ ರಣಜಿ ಟ್ರೋಫಿ ವಿಜೇತ ಮುಂಬೈ ತಂಡದ ಪ್ರಮುಖ ಆಟಗಾರರಾಗಿದ್ದರು. 2002-2003ನೇ ಸಾಲಿನಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆಗೈದಿದ್ದರು. 2008ರಲ್ಲಿ ಮಹಾರಾಷ್ಟ್ರದ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಆಡಿದ ಏಳು ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆಯುವ ಮೂಲಕ ರಾಜೇಶ್ ಅವಿಸ್ಮರಣೀಯ ಆಟವನ್ನಾಡಿದ್ದರು. ಆ ಸಾಲಿನಲ್ಲಿ ಐದು ವಿಕೆಟ್ ಪಡೆದು ಸಾಧನೆ ಮಾಡಿದ ಏಕೈಕ ಬೌಲರ್ ಎನಿಸಿಕೊಂಡಿದ್ದರು. 11 ‘ಲಿಸ್ಟ್-ಎ’ ಪಂದ್ಯಗಳನ್ನು ಆಡಿರುವ ಅವರು 20 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನು ಓದಿ: IPL 2022 ಹರಾಜಿನಲ್ಲಿ ಈ 3 ಆಟಗಾರರನ್ನು ಕೈಬಿಟ್ಟಿದಕ್ಕೆ 'ಮುಂಬೈ'ಗೆ ಈ ಕೆಟ್ಟ ಪರಿಸ್ಥಿತಿ!
ಇನ್ನು ರಾಜೇಶ್ ವರ್ಮಾ ನಿಧನಕ್ಕೆ ಕ್ರಿಕೆಟ್ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.