ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು ಬಲಿಷ್ಠ ಮುಂಬೈ ತಂಡವನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.


COMMERCIAL BREAK
SCROLL TO CONTINUE READING

ವಿಶೇಷವೆಂದರೆ ಇದೆ ಕ್ರೀಡಾಂಗಣದಲ್ಲಿ 23 ವರ್ಷಗಳ ಹಿಂದೆ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 1998-99ರ ಫೈನಲ್‌ನಲ್ಲಿ ಮಧ್ಯಪ್ರದೇಶ ತಂಡವು ಸೋಲನ್ನು ಅನುಭವಿಸುವ ಮೂಲಕ ನಿರಾಸೆಯನ್ನು ಅನುಭವಿಸಿತ್ತು. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿದ ಮಧ್ಯಪ್ರದೇಶವು 41 ಬಾರಿ ರಣಜಿ ಚಾಂಪಿಯನ್ ಆಗಿರುವ ಮುಂಬೈ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.


ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ಸಿಕ್ತು ಮತ್ತೊಂದು ಸರ್‌ಪ್ರೈಸ್‌! ಕಪಿಲ್‌ ದೇವ್‌ ಕೊಟ್ಟ ಗಿಫ್ಟ್‌ ಏನು ಗೊತ್ತಾ?


ಮೊದಲು ಟಾಸ್ ಗೆದ್ದ ಮುಂಬೈ ತಂಡವು ಸರ್ಫಾರಾಜ್ ರವರ 134 ಹಾಗೂ ಜೈಸ್ವಾಲ್ ಅವರ 78 ರನ್ ಗಳ ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ 374 ರನ್ ಗಳಿಗೆ ಆಲೌಟ್ ಆಗಿತ್ತು, ಮಧ್ಯಪ್ರದೇಶದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಜಿ.ಯಾದವ್ ನಾಲ್ಕು ಹಾಗೂ ಅನುಭವ ಅಗರ್ವಾಲ ಅವರು ಮೂರು ವಿಕೆಟ್ ಕಬಳಿಸುವ ಮೂಲಕ ಮುಂಬೈ ತಂಡದ ರನ್ ಗತಿಗೆ ಕಡಿವಾಣ ಹಾಕಿದ್ದರು.ಇನ್ನೊಂದೆಡೆಗೆ ಮೊದಲ ಇನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿದ ಮಧ್ಯಪ್ರದೇಶ ತಂಡವು ಯಶ್ ದುಭೆ 133,ಶುಭಂ ಶರ್ಮಾ,116, ರಜತ್ ಪಟಿದಾರ್ 122 ರನ್ ಗಳ ನೆರವಿನಿಂದ 536 ರನ್ ಗಳಿಸಿತು.


Pathaan: ‘ಕನ್ನಡ’ ಕಡೆಗಣಿಸಿದ ಶಾರುಖ್ ಖಾನ್‌ಗೆ ಕನ್ನಡಿಗರಿಂದ ತಿರುಗೇಟು..!


ಕೊನೆಗೆ ಮಧ್ಯ ಪ್ರದೇಶ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 108 ರನ್ ಗಳಿಸುವ ಮೂಲಕ ಮುಂಬೈ ತಂಡದ ವಿರುದ್ಧ ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದರು. ಆ ಮೂಲಕ ಮಧ್ಯಪ್ರದೇಶವು ರಾಜ್ಯ ರಚನೆಯಾದ ನಂತರ ಮೊದಲ ಬಾರಿಗೆ ರಣಜಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.