Big Bash League 2023: ಕ್ರಿಕೆಟ್‌ನಲ್ಲಿ ಹಲವು ಬಾರಿ ದಾಖಲೆಗಳು ನಿರ್ಮಾಣಗೊಳ್ಳುವುದನ್ನು ಮತ್ತು ಮುರಿಯುವುದನ್ನು ನೀವು ನೋಡಿರಬಹುದು, ಆದರೆ ಈ ಸುದ್ದಿಯಲ್ಲಿ ನಾವು ವಿಶ್ವ ಕ್ರಿಕೆಟ್‌ನಲ್ಲಿ ನಿರ್ಮಾಣಗೊಂಡ ಒಂದು ಅಪರೂಪದ ದಾಖಲೆಯ ಬಗ್ಗೆ ಹೇಳುತ್ತಿದ್ದೇವೆ. ಬಿಗ್ ಬ್ಯಾಷ್ ಲೀಗ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಈ ಲೀಗ್‌ನಲ್ಲಿ ಬೌಲರ್ ಒಬ್ಬರು ಕೇವಲ 1 ಎಸೆತದಲ್ಲಿ 16 ರನ್ ನೀಡಿ ಅಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬೌಲರ್ ಒಂದು ಎಸೆತದಲ್ಲಿ 16 ರನ್ ನೀಡಿದ್ದಾನೆ
ಬಿಗ್ ಬ್ಯಾಷ್ ಲೀಗ್‌ನಲ್ಲಿ ಸೋಮವಾರ ಸಿಡ್ನಿ ಸಿಕ್ಸರ್ಸ್ ಮತ್ತು ಹೋಬರ್ಟ್ ಹರಿಕೇನ್ಸ್ ನಡುವೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ವೇಗದ ಬೌಲರ್ ಜೋಯಲ್ ಪ್ಯಾರಿಸ್ ಒಂದು ಎಸೆತದಲ್ಲಿ 16 ರನ್ ನೀಡಿದ್ದಾರೆ. ಸಿಡ್ನಿ ಸಿಕ್ಸರ್ಸ್ ಇನ್ನಿಂಗ್ಸ್‌ನಲ್ಲಿ ಜೋಯಲ್ ಪ್ಯಾರಿಸ್ ಎರಡನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಈ ಓವರ್‌ನಲ್ಲಿ ಜೋಶ್ ಫಿಲಿಪ್ಸ್ ಮತ್ತು ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದರು.


ಇದನ್ನೂ ಓದಿ-ಒಂದು ಕಾಲದಲ್ಲಿ ಕೊತ್ತಂಬರಿ ಸೊಪ್ಪನ್ನು ಕಾಮೊತ್ತೇಜನಕ್ಕಾಗಿ ಬಳಸುತ್ತಿದ್ದರಂತೆ!


ಈ ರೀತಿ ಒಂದು ಎಸೆತದಲ್ಲಿ 16 ಓಟ ಗಳಿಸಲಾಗಿದೆ
ಈ ಓವರ್‌ನ ಮೂರನೇ ಎಸೆತದಲ್ಲಿ ಜೋಯಲ್ ಪ್ಯಾರಿಸ್ ನೋ ಬಾಲ್ ಬೌಲ್ ಮಾಡಿದ್ದಾರೆ, ಸ್ಟೀವ್ ಸ್ಮಿತ್ ಅದನ್ನು ಸಿಕ್ಸರ್ ಗೆ ಅಟ್ಟಿದ್ದಾರೆ. ಈಗ ನೋ ಬಾಲ್‌ನಿಂದ ಫ್ರೀ ಹಿಟ್ ಸಿಕ್ಕಿತ್ತು, ಆದರೆ ಮುಂದಿನ ಎಸೆತದಲ್ಲಿ ಪ್ಯಾರಿಸ್ ದಿಶಾ ವೈಡ್ ಬಾಲ್ ಎಸೆದಿದ್ದಾರೆ, ವಿಕೆಟ್ ಕೀಪರ್ ಕೂಡ ಈ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ ಮತ್ತು ಸಿಡ್ನಿ ಸಿಕ್ಸರ್‌ಗೆ 5 ರನ್ ನೀಡಲಾಯಿತು. ವೈಡ್ ಬಾಲ್ ನಿಂದಾಗಿ ಫ್ರೀ ಹಿಟ್ ಮುಂದುವರೆಯಿತು ಮತ್ತು ಸ್ಮಿತ್ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದ್ದಾರೆ. ಈ ಮೂಲಕ ಸಿಡ್ನಿ ಸಿಕ್ಸರ್ಸ್ ಪ್ಯಾರಿಸ್‌ ಅವರ ಒಂದು ಲೀಗಲ್ ಡಿಲೇವರಿಯಿಂದ 16 ರನ್ ಗಳಿಸಿದೆ, ಇದರಲ್ಲಿ 10 ರನ್ ಸ್ಮಿತ್ ಖಾತೆಗೆ ಸೇರಿಕೊಂಡಿವೆ.


ಇದನ್ನೂ ಓದಿ-ಸಾವನ್ನು ಟಕ್ಕಂತ ಮುಟ್ಟಿ ಬಂದವರ ಅನುಭವ ಹೇಗಿರುತ್ತೆ ಗೊತ್ತಾ? ತಜ್ಞರು ಹೇಳಿದ್ದು ಹೀಗೆ!

ಬಿರುಸಿನ ಇನ್ನಿಂಗ್ಸ್ ಆಡಿದ ಸ್ಟೀವ್ ಸ್ಮಿತ್ 
ಬಿಗ್ ಬ್ಯಾಷ್ ಲೀಗ್ ನಲ್ಲಿ ಸ್ಟೀವ್ ಸ್ಮಿತ್ ಅವರು ಭರ್ಜರಿ ಬ್ಯಾಟ್ ಬೀಸಿದ್ದಾರೆ. ಈ ಟೂರ್ನಿಯ ಕೊನೆಯ ಮೂರು ಇನ್ನಿಂಗ್ಸ್‌ಗಳಲ್ಲಿ ಅವರು ಎರಡು ಶತಕ ಮತ್ತು 1 ಅರ್ಧಶತಕ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 33 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ 66 ರನ್ ಗಳಿಸಿದರು. ಇದರಲ್ಲಿ ಅವರು ಒಟ್ಟು 6 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಬಾರಿಸಿದ್ದಾರೆ.



ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.