ಸಾವನ್ನು ಟಕ್ಕಂತ ಮುಟ್ಟಿ ಬಂದವರ ಅನುಭವ ಹೇಗಿರುತ್ತೆ ಗೊತ್ತಾ? ತಜ್ಞರು ಹೇಳಿದ್ದು ಹೀಗೆ!

Death Experience: ಮರಣ ಅನುಭವಿಸುತ್ತಿರುವ ಜನರಲ್ಲಿ ಸಿರೊಟೋನಿನ್ ಪ್ರಮಾಣವು ಹೆಚ್ಚಾಗುತ್ತದೆ. ಸಿರೊಟೋನಿನ್ ಒಂದು ರಾಸಾಯನಿಕವಾಗಿದ್ದು ಅದು ಮೆದುಳಿನಲ್ಲಿರುವ ನರ ಕೋಶಗಳ ನಡುವೆ ಮತ್ತು ದೇಹದಾದ್ಯಂತ ಸಂದೇಶಗಳನ್ನು ರವಾನಿಸುವ ಕೆಲಸ ಮಾಡುತ್ತದೆ.  

Written by - Nitin Tabib | Last Updated : Jan 21, 2023, 09:06 PM IST
  • ಫ್ರಾಂಟಿಯರ್ಸ್ ಆಫ್ ಏಜಿಂಗ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಈ ಕುರಿತು ಬರೆದಿರುವ ತಜ್ಞರು,
  • ಹೃದಯಾಘಾತಕ್ಕೆ ಕಾರಣವಾಗುವ 15 ಸೆಕೆಂಡುಗಳಲ್ಲಿ,
  • ವ್ಯಕ್ತಿಯು ಗಾಮಾ ಆಸ್ಸಿಲೆಶನ್ಸ್ ಎಂಬ ಅಧಿಕ-ಆವರ್ತನ ಮೆದುಳಿನ ಅಲೆಗಳನ್ನು ಅನುಭವಿಸಿದ್ದರು.
ಸಾವನ್ನು ಟಕ್ಕಂತ ಮುಟ್ಟಿ ಬಂದವರ ಅನುಭವ ಹೇಗಿರುತ್ತೆ ಗೊತ್ತಾ? ತಜ್ಞರು ಹೇಳಿದ್ದು ಹೀಗೆ! title=
ಮರಣ ಸಮೀಪಿಸಿದಾಗ ಬರುವ ಅನುಭವ

Experience When Death Nears: ಸಾವು ಮನುಷ್ಯ ಅಷ್ಟೇ ಅಲ್ಲ ಎಲ್ಲಾ ಜೀವಿಗಳ ಜೀವನದ ಭಯಾನಕ ಸತ್ಯ. ಮುಂದೊಂದು ದಿನ ಎಲ್ಲರೂ ಅದನ್ನು ಎದುರಿದಬೇಕಾಗುತ್ತದೆ ಎಂಬುದು ಸತ್ಯ. ಸಾಯುವಾಗ ಯಾವ ಅನುಭವ ಉಂಟಾಗುತ್ತದೆ ಎಂಬುದನ್ನು ಮರಣ ತಾನು ಮಡಿಲಿಗೆ ತೆಗೆದುಕೊಳ್ಳುತ್ತಿರುವ ವ್ಯಕ್ತಿಗೆ ಮಾತ್ರ ಹೇಳುತ್ತದೆ. ಆದರೂ ಕೂಡ ಕೆಲವರಿಗೆ ತಮ್ಮ ಸಾವು ಸಮೀಪಿಸಿದೆ ಅಥವಾ ತಮ್ಮ ಇಹಲೋಕದ ಪಯಣ ಅಂತ್ಯವಾಗುವ ಕಾಲ ಕೂಡಿಬಂದಿದೆ ಅಥವಾ ತಮ್ಮ ಜೀವನದ ಪ್ರಯಾಣ ಅಂತ್ಯದತ್ತ ಸಾಗುತ್ತಿದೆ ಎಂಬುದರ ಅನುಭವ ಬಂದಿರುವುದು ಹಲವು ಬಾರಿ ಕಂಡು ಬಂದಿದೆ.  ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ, ಅನೇಕರು ಸಾವನ್ನು ತಮ್ಮ ಹತ್ತಿರದಿಂದ ನೋಡಿರುತ್ತಾರೆ. ಆದರೆ ಸಾಯುತ್ತಿರುವ ವ್ಯಕ್ತಿಯ ಅನುಭವ ಹೇಗಿರುತ್ತದೆ? ಅವನ ಮನಸ್ಸಿನಲ್ಲಿ ಯಾವ ರೀತಿಯ ಆಲೋಚನೆಗಳು ಮತ್ತು ವಿಷಯಗಳು ಬರುತಿರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

ಒಂದು ಅಧ್ಯಯನದಲ್ಲಿ, ಸಾವಿನೊಂದಿಗೆ ಕೈಕುಲುಕುವುದು ಕೆಲವರಿಗೆ ಭಯಾನಕ ನೀಡಿದ್ದರೆ, ಕೆಲವರಿಗೆ ಆ ಸಮಯದಲ್ಲಿ ಶಾಂತವಾಗಿರುವ ಅನುಭವ ಬಂದಿದೆ. ಹೀಗಾಗಿ ಸಾವಿಗೆ ಹೆದರುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸಾವಿನ ಸಮೀಪದಲ್ಲಿರುವವರು  ತಮ್ಮನ್ನು ತಾವು ತುಂಬಾ ಶಾಂತವಾಗಿರಿಸುವುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಅವರು ಹೇಳುತ್ತಾರೆ. ಸಾವಿನ ಸಮಯದಲ್ಲಿ ಜನರ ಮೆದುಳು ಮತ್ತು ದೇಹವು ಏನು ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಎಂದು ಖ್ಯಾತ ತಜ್ಞರೊಬ್ಬರ ಅಭಿಪ್ರಾಯವಾಗಿದೆ. ತಜ್ಞರು ಈ ಹಿಂದೆ ಹೃದಯಾಘಾತದಿಂದ ಬಳಲುತ್ತಿದ್ದ 87 ವರ್ಷದ ವ್ಯಕ್ತಿಯ ಮೆದುಳಿನ ಸ್ಕ್ಯಾನ್‌ಗಳನ್ನು ನೋಡುವ ಅಧ್ಯಯನವನ್ನು ಬರೆದಿದ್ದರು.

ಸಾವು ಸಮೀಪಿಸಿದಾಗ ದೇಹದಲ್ಲಿ ಸಿರೊಟೋನಿನ್ ಹೆಚ್ಚಾಗುತ್ತದೆಯೇ?
ಫ್ರಾಂಟಿಯರ್ಸ್ ಆಫ್ ಏಜಿಂಗ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಈ ಕುರಿತು ಬರೆದಿರುವ ತಜ್ಞರು, ಹೃದಯಾಘಾತಕ್ಕೆ ಕಾರಣವಾಗುವ 15 ಸೆಕೆಂಡುಗಳಲ್ಲಿ, ವ್ಯಕ್ತಿಯು ಗಾಮಾ ಆಸ್ಸಿಲೆಶನ್ಸ್ ಎಂಬ ಅಧಿಕ-ಆವರ್ತನ ಮೆದುಳಿನ ಅಲೆಗಳನ್ನು ಅನುಭವಿಸಿದ್ದರು. ಇದು ನೆನಪುಗಳನ್ನು ಮಾಡುವಲ್ಲಿ ಮತ್ತು ಹಿಂಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾವಿಗೆ ಸ್ವಲ್ಪ ಮೊದಲು ಮತ್ತು ಹೃದಯ ನಿಂತ ನಂತರ ನಮಗೆ ಕೆಲ ಸಂಕೇತಗಳು ಸಿಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಇಲಿಗಳ ಮೇಲೆ ನಡೆಸಲಾಗಿರುವ ಒಂದು  ಅಧ್ಯಯನದಲ್ಲಿ, ಮರಣವನ್ನು ಅನುಭವಿಸುತ್ತಿರುವ ಜನರಲ್ಲಿ ಸಿರೊಟೋನಿನ್ ಪ್ರಮಾಣವು ಹೆಚ್ಚಾಗುತ್ತದೆ ಎಂಬುದು ಮೊದಲೇ ತಿಳಿದುಬಂದಿದೆ.

ಇದನ್ನೂ ಓದಿ-ಕ್ಯಾನ್ಸರ್-ಹೃದ್ರೋಗಗಳಂತಹ ಮಾರಕ ಕಾಯಿಲೆಗಳ ಅಪಾಯ ತಗ್ಗಿಸುತ್ತದೆ ಈ ಕಪ್ಪು ಗಜ್ಜರಿ

ಪ್ರಸ್ತುತ ಆ ಜನರಿಗೆ ಸಾವಿನ ಭಯವಿಲ್ಲ
ಸಿರೊಟೋನಿನ್ ಒಂದು ರಾಸಾಯನಿಕವಾಗಿದ್ದು ಅದು ಮೆದುಳಿನಲ್ಲಿರುವ ನರ ಕೋಶಗಳ ನಡುವೆ ಮತ್ತು ದೇಹದಾದ್ಯಂತ ಸಂದೇಶಗಳನ್ನು ರವಾನಿಸಲು ಕೆಲಸ ಮಾಡುತ್ತದೆ. ನಿದ್ರೆಯಲ್ಲೂ ಇದು ದೊಡ್ಡ ಪಾತ್ರವನ್ನು ವಹಿಸುತ್ತದೆ. ಇದನ್ನು 'ಹ್ಯಾಪಿ ಹಾರ್ಮೋನ್' ಎಂದೂ ಕರೆಯುತ್ತಾರೆ. ಸಾವಿನ ಅನುಭವವನ್ನು ಅನುಭವಿಸಿದ ಜನರು ಉತ್ಸಾಹ ಮತ್ತು ನೋವಿನಿಂದ ಪರಿಹಾರವನ್ನು ಪಡೆದುಕೊಂಡಿದ್ದರು ಎಂದು ಹೇಳುತ್ತಾರೆ. ಈ ಅಧ್ಯಯನಕ್ಕೆ ಒಳಗಾದ ಜನರಲ್ಲಿ ಡೆತ್ ಎಕ್ಸ್ಪೀರಿಯೆನ್ಸ್ ಅನುಭವವಿತ್ತು. ಅವರೆಲ್ಲರೂ ಸಾವು ಸಮೀಪಿಸಿದಾಗ ಸ್ವತಃ ಶಾಂತವಾಗಿದ್ದೆವು ಮತ್ತು ಇನ್ನು ಮುಂದೆ ನಾವು ಸಾವಿಗೆ ಹೆದರುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ-ಚ್ಯವನ್ಪ್ರಾಶ್ ಆರೋಗ್ಯಕ್ಕೆ ತುಂಬಾ ಲಾಭಕಾರಿ, ಆದ್ರೆ ಈ ಜನರು ಮರೆತೂ ಸೇವಿಸಬಾರದು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News