ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ (ICC World Test Championship Final) ನ್ಯೂಜಿಲೆಂಡ್ (New Zealand)  ವಿರುದ್ಧದ ಸೋಲಿನ ನಂತರ, ವಿರಾಟ್ ಕೊಹ್ಲಿ (Virat Kohli) ಜೊತೆಗೆ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಅವರ ಪಾತ್ರವನ್ನೂ ಪ್ರಶ್ನಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ದ್ರಾವಿಡ್ ಅಭಿಮಾನಿಗಳ ಬೇಡಿಕೆ:
ರವಿಶಾಸ್ತ್ರಿ (Ravi Shastri) ಅವರ ಬದಲಿಗೆ 'ಮಿಸ್ಟರ್ ಟ್ರಸ್ಟ್‌ವರ್ತಿ' ರಾಹುಲ್ ದ್ರಾವಿಡ್ (Rahul Dravid) ಅವರನ್ನು ಟೀಮ್ ಇಂಡಿಯಾದ  (Team India) ಮುಖ್ಯ ಕೋಚ್ ಆಗಿ ನೇಮಕ ಮಾಡಬೇಕೆಂದು ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ- ಶ್ರೀಲಂಕಾ ಪ್ರವಾಸ ಕೈಕೊಂಡಿರುವ ಭಾರತೀಯ ತಂಡವನ್ನು 'ಬಿ' ತಂಡ ಎಂದ ಅರ್ಜುನ್ ರಣತುಂಗಾ..!


'ಶಾಸ್ತ್ರಿ ಬದಲಿಗೆ ದ್ರಾವಿಡ್':
ವಾಸ್ತವವಾಗಿ, ಐಸಿಸಿ ಟಿ 20 ವಿಶ್ವಕಪ್ (T20 World Cup) ನಂತರ ರವಿಶಾಸ್ತ್ರಿ ಅವರ ಒಪ್ಪಂದವು ಈ ವರ್ಷದ ಕೊನೆಯಲ್ಲಿ ಮುಕ್ತಾಯಗೊಳ್ಳಲಿದೆ. ರಾಹುಲ್ ದ್ರಾವಿಡ್ (Rahul Dravid) ಶಾಸ್ತ್ರಿ ಬದಲಿಗೆ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರೀತಿಂದರ್ ಸಿಂಗ್ ಸೋಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


'ಶಾಸ್ತ್ರಿ ಉತ್ತಮ ಕೆಲಸ ಮಾಡಿದ್ದಾರೆ':
ನ್ಯೂಸ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸೋಧಿ, 'ಮೊದಲನೆಯದಾಗಿ, ರವಿಶಾಸ್ತ್ರಿ ತರಬೇತುದಾರನಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನಾವು ಒಪ್ಪಿಕೊಳ್ಳಬೇಕು ಮತ್ತು ಹೌದು ಅವರ ಒಪ್ಪಂದವು ಮುಕ್ತಾಯಗೊಳ್ಳುತ್ತಿದೆ. ರಾಹುಲ್ ದ್ರಾವಿಡ್ ಅವರು ಸರದಿಯಲ್ಲಿದ್ದಾರೆ ಎಂಬ ಸ್ಪಷ್ಟ ಸೂಚನೆ ಇದೆ. ಮುಖ್ಯವಾದ ವಿಷಯವೆಂದರೆ ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಸ್ಥಾನವನ್ನು ಬದಲಾಯಿಸಬಹುದಾದ ಸೂಕ್ತ ಸಾಮರ್ಥ್ಯವಿರುವುದು ರಾಹುಲ್ ದ್ರಾವಿಡ್ ಅವರಿಗೇ ಎಂದವರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ- Wimbledon 2021: ರೋಹನ್ ಬೋಪಣ್ಣ, ಸಾನಿಯಾ ಮಿರ್ಜಾ ಜೋಡಿಗೆ ಗೆಲುವಿನ ಆರಂಭ


ದ್ರಾವಿಡ್ ಯುವಕರ ಆದರ್ಶ:
ಗಮನಿಸಬೇಕಾದ ಸಂಗತಿಯೆಂದರೆ, ಅಂಡರ್ -19 ಟೀಮ್ ಇಂಡಿಯಾ (U-19 Team India) 2018 ರಲ್ಲಿ ವಿಶ್ವ ಚಾಂಪಿಯನ್ ಗಳಿಸುವಲ್ಲಿ ರಾಹುಲ್ ದ್ರಾವಿಡ್ ಅವರು  ಕೋಚ್ ಆಗಿ  ಮುಖ್ಯ ಪಾತ್ರವಹಿಸಿದ್ದರು. ಇದರೊಂದಿಗೆ ಅವರು ಇತರ ಅನೇಕ ಯಶಸ್ಸನ್ನು ಗಳಿಸಿದ್ದಾರೆ, ಯುವ ಕ್ರಿಕೆಟಿಗರಿಗೆ ದ್ರಾವಿಡ್ ಆದರ್ಶಪ್ರಾಯರೆಂದು ಪರಿಗಣಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.