ಶ್ರೀಲಂಕಾ ಪ್ರವಾಸ ಕೈಕೊಂಡಿರುವ ಭಾರತೀಯ ತಂಡವನ್ನು 'ಬಿ' ತಂಡ ಎಂದ ಅರ್ಜುನ್ ರಣತುಂಗಾ..!

ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗಾ ಅವರು ಎರಡನೇ ಹಂತದ ಭಾರತ ತಂಡದ ಪ್ರವಾಸಕ್ಕೆ ಒಪ್ಪಿಗೆ ಸೂಚಿಸಿದ್ದಕ್ಕಾಗಿ ವಾಗ್ದಾಳಿ ನಡೆಸಿದರು.

Last Updated : Jul 2, 2021, 03:50 PM IST
  • ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗಾ ಅವರು ಎರಡನೇ ಹಂತದ ಭಾರತ ತಂಡದ ಪ್ರವಾಸಕ್ಕೆ ಒಪ್ಪಿಗೆ ಸೂಚಿಸಿದ್ದಕ್ಕಾಗಿ ವಾಗ್ದಾಳಿ ನಡೆಸಿದರು.
  • ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಮತ್ತು ಶ್ರೀಲಂಕಾ (Srilanka) ಕ್ರಿಕೆಟ್ ಮೇಲೆ ವಾಗ್ದಾಳಿ ನಡೆಸಿದ ಅರ್ಜುನ್ ರಣತುಂಗಾ (Arjuna Ranatunga) ಈ ಪ್ರವಾಸವು ದೇಶದ ಘನತೆಯನ್ನು ಹಾಳು ಮಾಡಿದೆ ಎಂದು 57 ವರ್ಷದ ರಣತುಂಗ ಹೇಳಿದರು.
ಶ್ರೀಲಂಕಾ ಪ್ರವಾಸ ಕೈಕೊಂಡಿರುವ ಭಾರತೀಯ ತಂಡವನ್ನು 'ಬಿ' ತಂಡ ಎಂದ ಅರ್ಜುನ್ ರಣತುಂಗಾ..! title=
ಸಂಗ್ರಹ ಚಿತ್ರ

ನವದೆಹಲಿ: ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗಾ ಅವರು ಎರಡನೇ ಹಂತದ ಭಾರತ ತಂಡದ ಪ್ರವಾಸಕ್ಕೆ ಒಪ್ಪಿಗೆ ಸೂಚಿಸಿದ್ದಕ್ಕಾಗಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : 7th Pay Commission: ಪ್ರತಿ ತಿಂಗಳು ಸರ್ಕಾರಿ ನೌಕರರ ವೇತನದಲ್ಲಿ ರೂ.7750 ವೃದ್ಧಿ, ಏನಿದು ಲೆಕ್ಕಾಚಾರ?

ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಮತ್ತು ಶ್ರೀಲಂಕಾ (Srilanka) ಕ್ರಿಕೆಟ್ ಮೇಲೆ ವಾಗ್ದಾಳಿ ನಡೆಸಿದ ಅರ್ಜುನ್ ರಣತುಂಗಾ (Arjuna Ranatunga) ಈ ಪ್ರವಾಸವು ದೇಶದ ಘನತೆಯನ್ನು ಹಾಳು ಮಾಡಿದೆ ಎಂದು 57 ವರ್ಷದ ರಣತುಂಗ ಹೇಳಿದರು.ಜುಲೈ 13 ರಿಂದ ಪ್ರಾರಂಭವಾಗುವ ಮೂರು ಏಕದಿನ ಮತ್ತು ಮೂರು ಟ್ವೆಂಟಿ -20 ಪಂದ್ಯಗಳಿಗೆ ತಯಾರಿ ನಡೆಸಲು ಶಿಖರ್ ಧವನ್ ನೇತೃತ್ವದ ಭಾರತದ ತಂಡ ಸೋಮವಾರ ಶ್ರೀಲಂಕಾಕ್ಕೆ ಆಗಮಿಸಿತು. ಅಗ್ರ ತಾರೆಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಅವರು ಗೈರು ಹಾಜರಾಗಿದ್ದರು. ಎಲ್ಲರೂ ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Bank ATM: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಹರಿದ ನೋಟು ಸಿಕ್ಕರೆ ಅದನ್ನು ಈ ರೀತಿ ಬದಲಾಯಿಸಿ

'ಶ್ರೀಲಂಕಾಕ್ಕೆ ಬಂದ ಭಾರತೀಯ ತಂಡ ಅವರ ಅತ್ಯುತ್ತಮವಲ್ಲ, ಇದು ಎರಡನೇ ಹಂತದ ತಂಡವಾಗಿದೆ ಎಂದು ರಣತುಂಗ ಹೇಳಿದರು."ನಮ್ಮ ಕ್ರೀಡಾ ಸಚಿವರಿಗೆ ಅಥವಾ ಕ್ರಿಕೆಟ್ ಆಡಳಿತಗಾರರಿಗೆ ಇದು ತಿಳಿದಿಲ್ಲವೇ? ಶ್ರೀಲಂಕಾ ಶ್ರೇಯಾಂಕದಲ್ಲಿ ಕೆಳಗಿಳಿದಿರಬಹುದು, ಆದರೆ ಕ್ರಿಕೆಟಿಂಗ್ ರಾಷ್ಟ್ರವಾಗಿ ನಮಗೆ ಒಂದು ಗುರುತು ಇದೆ, ನಮಗೆ ಘನತೆ ಇದೆ, ನಾವು ಭಾರತೀಯ ಬಿ. ತಂಡವನ್ನು ಎದುರಿಸಲು ನಮ್ಮ ಶ್ರೇಷ್ಠ ತಂಡವನ್ನು ಕಳಿಸಬಾರದು" ಎಂದು ಅವರು ಹೇಳಿದರು.

ಇದನ್ನೂ ಓದಿ : Gold-Silver Price : ಚಿನ್ನದ ಬೆಲೆ 47,000 ರೂ.ಗಿಂತ ಏರಿಕೆ : ಮೆಟ್ರೋ ನಗರಗಳಲ್ಲಿ ಬೆಲೆ ಪರಿಶೀಲಿಸಿ

1996 ರ ವಿಶ್ವಕಪ್ ಗೆದ್ದ  ಶ್ರೀಲಂಕಾ ತಂಡವನ್ನು ಮುನ್ನಡೆಸಿದ ರಣತುಂಗಾ, ಆಟದ ಆಡಳಿತವು ಹದಗೆಟ್ಟಿದೆ ಮತ್ತು ಆಟದ ಗುಣಮಟ್ಟ ಮತ್ತು ಕೌಶಲ್ಯಗಳನ್ನು ಸುಧಾರಿಸಲು ಕರೆ ನೀಡಿದರು.ಶ್ರೀಲಂಕಾದ ಆಟಗಾರರು ಅನುಭವಿಸುವ ಅವಮಾನವನ್ನು ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಅವರು ಹೇಳಿದರು.ರಣತುಂಗ ಅವರ ಪ್ರಕಾರ, ಕ್ರಿಕೆಟ್ ನಾಯಕರು ಆರ್ಥಿಕ ಲಾಭಗಳನ್ನು ಮಾತ್ರ ಪರಿಗಣಿಸಿದ್ದಾರೆ.

"ಭಾರತೀಯ ಬಿ ತಂಡವನ್ನು ಒಪ್ಪಿಕೊಳ್ಳುವ ಹಿಂದಿನ ರಹಸ್ಯವೆಂದರೆ ಟಿವಿ ಹಕ್ಕುಗಳು" ಎಂದು ರಣತುಂಗ ಹೇಳಿದರು.'ಮಂಡಳಿಯು ಈ ಪಂದ್ಯಾವಳಿಯಿಂದ ನಮ್ಮ ತಂಡದ ಆಟಗಾರರನ್ನು ಬಿ ತಂಡದ ವಿರುದ್ಧ ಪಿಚ್ ಮಾಡುವುದು ಎಂದರ್ಥ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News