R Ashwin Test Century: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ ತವರು ಮೈದಾನವಾದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ಮನ್ ಆಗಿ ಅದ್ಭುತಗಳನ್ನೇ ಸೃಷ್ಟಿ ಮಾಡಿದ್ದಾರೆ. ಇದು ಅಶ್ವಿನ್ ಅವರ ಟೆಸ್ಟ್ ಕ್ರಿಕೆಟ್‌ʼನ ಆರನೇ ಶತಕವಾಗಿದ್ದು, ಇದರಲ್ಲಿ ಬ್ಯಾಕ್‌ ಟು ಬ್ಯಾಕ್‌ ದಾಖಲೆಗಳನ್ನು ನಿರ್ಮಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಹೆಸರಿಗೆ ದಿಗ್ಗಜರು... ಆದ್ರೆ ತಮ್ಮ ಇಡೀ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ ಈ 5 ಕ್ರಿಕೆಟಿಗರು! ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು


ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾವನ್ನು ಕಾಪಾಡಿದ್ದರು. ಜೊತೆಗೆ ಭರ್ಜರಿ ಶತಕ ಕೂಡ ಬಾರಿಸಿದ್ದರು.


ಇನ್ನೊಂದೆಡೆ ಟೆಸ್ಟ್ ಕ್ರಿಕೆಟ್‌ʼನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಹಾಗೂ 6 ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಆರ್ ಅಶ್ವಿನ್ ಪಾತ್ರತಾಗಿದ್ದಾರೆ. ಇದರ ಜೊತೆಗೆ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ಧ 7ನೇ ವಿಕೆಟ್‌ʼಗೆ ಭಾರತದ ಪರ ಅತಿದೊಡ್ಡ ಜೊತೆಯಾಟವನ್ನು ಆಡಿದ್ದಾರೆ. ಈ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಮತ್ತು ಜಹೀರ್ ಖಾನ್ ನಡುವಿನ ಜೊತೆಯಾಟದ ದಾಖಲೆಯನ್ನು ಮುರಿದಿದ್ದಾರೆ.


ಆರ್ ಅಶ್ವಿನ್ 108 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ್ದು, ಇದು ಅವರ ವೃತ್ತಿ ಜೀವನದ ವೇಗದ ಶತಕವಾಗಿದೆ. ಭಾರತ ತಂಡದ 6 ವಿಕೆಟ್‌ʼಗಳು ಕೇವಲ 144 ರನ್‌ʼಗಳಿಗೆ ಪತನಗೊಂಡಿದ್ದವು. ಆ ಸಂದರ್ಭದಲ್ಲಿ ಜಡೇಜಾ ಅವರೊಂದಿಗೆ ಇನ್ನಿಂಗ್ಸ್ ಅನ್ನು ಮುಂದಕ್ಕೆ ತೆಗೆದುಕೊಂಡು ತಂಡವನ್ನು 330 ರ ಗಡಿ ದಾಟಿಸಿದರು ಅಶ್ವಿನ್. ಏಳನೇ ವಿಕೆಟ್‌ಗೆ ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ ಸುಮಾರು 200 ರನ್‌‌ʼಗಳ ಜೊತೆಯಾಟ ನಿರ್ಮಾಣವಾಗಿತ್ತು.


ಅಂದಹಾಗೆ ಚೆನ್ನೈನ ತವರು ಮೈದಾನದಲ್ಲಿ ಆರ್ ಅಶ್ವಿನ್ ಅವರ ಎರಡನೇ ಟೆಸ್ಟ್ ಶತಕ ಇದಾಗಿದೆ. ಇದಕ್ಕೂ ಮೊದಲು 2021ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರು.


ಆರ್ ಅಶ್ವಿನ್ ಅವರು ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ 117 ಎಸೆತಗಳಲ್ಲಿ ಟೆಸ್ಟ್‌ ಶತಕ ಬಾರಿಸಿದ್ದರು. ಅದಾದ ನಂತರ 2021ರಲ್ಲಿ ಇಂಗ್ಲೆಂಡ್ ವಿರುದ್ಧ 124 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈಗ 108 ಎಸೆತಗಳಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ಶತಕವನ್ನು ಗಳಿಸಿದ್ದಾರೆ.


ಇದಷ್ಟೇ ಅಲ್ಲದೆ, ನ್ಯೂಜಿಲೆಂಡ್‌ ದಂತಕಥೆ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಕೂಡ ಸರಿಗಟ್ಟಿದ್ದಾರೆ. ವೆಟ್ಟೋರಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಟೆಸ್ಟ್‌ʼನಲ್ಲಿ ಗರಿಷ್ಠ 4 ಶತಕಗಳನ್ನು ಗಳಿಸಿದ್ದರು. ಇದೀಗ ಅಶ್ವಿನ್ ಕೂಡ ಈ ಸ್ಥಾನವನ್ನು ಸಾಧಿಸಿದ್ದಾರೆ.


ಇದನ್ನೂ ಓದಿ: 6 ಅಡಿ ಎತ್ತರ, 140 ಕೆಜಿ ತೂಕ... ಕ್ರಿಕೆಟ್‌ ಲೋಕದಲ್ಲೇ ಅತಿ ದಡೂತಿ ಕ್ರಿಕೆಟಿಗನೀತ! ಕೇವಲ 16 ರನ್‌ಗೆ 5 ವಿಕೆಟ್‌ ಕಿತ್ತು ಮಿಂಚಿದ ಈ ದೈತ್ಯ ಬೌಲರ್ ಯಾರು ಗೊತ್ತಾ?


ಆರ್ ಅಶ್ವಿನ್ ಎಂದರೆ ಟೀಂ ಇಂಡಿಯಾದ ಸ್ಪಿನ್‌ ಮಾಸ್ಟರ್‌ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದೇ ಸ್ಪಿನ್‌ ಮಾಸ್ಟರ್‌ ಅದೆಷ್ಟೋ ಬಾರಿ ಭಾರತವನ್ನು ಅಪಾಯದ ಗಡಿಯಿಂದ ಪಾರು ಮಾಡಿದ್ದೂ ಇದೆ. ಅಂತೆಯೇ ಅವರು ಟೆಸ್ಟ್ ಕ್ರಿಕೆಟ್‌ʼನಲ್ಲಿ 6 ಶತಕಗಳನ್ನು ಒಳಗೊಂಡಂತೆ 3400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೇ ಕಾರಣಕ್ಕೆ ಪ್ರಸ್ತುತ ನಂಬರ್ ಒನ್ ಟೆಸ್ಟ್ ಆಲ್ ರೌಂಡರ್ ಆಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.